https://youtu.be/NHc6OMSu0K4?si=SI_K4goOPEgwo6h2
ಬಹುಮಾನ ರೂ.50,000/-, 25000/- | ಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಬಹುದು
ಹಂಪಿ ಟೈಮ್ಸ್ ಹೊಸಪೇಟೆ
ಜನಸಾಮಾನ್ಯರಲ್ಲಿ ಹಾಗೂ ವಿಧ್ಯಾರ್ಥಿಗಳಲ್ಲಿ ಪತ್ರ ಲೇಖನ ಅಭಿರುಚಿಯನ್ನು, ಬರವಣಿಗೆ ಕೌಶಲ್ಯವನ್ನು ಹಾಗೂ ದೇಶಪ್ರೇಮ ಜಾಗೃತಿಗೊಳಿಸಲು ಭಾತೀಯ ಅಂಚೆ ಇಲಾಖೆಯು ದೇಶ್ಯಾದ್ಯಂತ ರಾಷ್ರಮಟ್ಟದ ಮುಕ್ತ ಪತ್ರಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅತ್ಯುತ್ತಮ ಪತ್ರ ಬರೆದ ಸ್ಪರ್ಧಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ಪಿ.ಚಿದಾನಂದ ತಿಳಿಸಿದ್ದಾರೆ.
The Joy of writing: Importance of letters in a Digital Age”/ ಬರವಣಿಗೆಯ ಸಂತೋಷ: ಡಿಜಿಟಲ್ ಯುಗದಲ್ಲಿ ಅಕ್ಷರಗಳ ಎಂಬ ವಿಷಯದ ಮೇಲೆ ಎ4 ಅಳತೆಯ ಹಾಳೆಯಲ್ಲಿ 1000 ಪದಗಳ ಮಿತಿಯೊಳಗೆ ಬರೆದು ಎನ್ವೊಲಾಪ್ (ENVELOPE) ನಲ್ಲಿ ಅಥವಾ ILC (ಇನ್ ಲ್ಯಾಂಡ್) ಅಂತರ್ದೇಶೀಯ ಪತ್ರದಲ್ಲಿ 500 ಪದಗಳಿಗೆ ಮೀರದಂತೆ ಬರೆದು, ಬಳ್ಳಾರಿ ವಿಭಾಗದ ಎಂದರೆ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಸ್ಪರ್ಧಿಗಳು ಅಂಚೆ ಅಧಿಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ 583102 ಇವರಿಗೆ ತಲುಪುವಂತೆ ಅಂಚೆಮೂಲಕ ಕಳಿಹಿಸಿಕೊಡಬಹುದು.
ಪತ್ರವನ್ನು ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯ ಬಹುದಾಗಿದ್ದು ಡಿ.14ರ ಒಳಗೆ ತಲುಪುವಂತೆ ಪತ್ರಗಳನ್ನು ಕಳುಹಿಸಿಕೊಡಬೇಕು. ಮುದ್ರಿತ ಪತ್ರಗಳನ್ನು ಸ್ವೀಕರಿಸುವುದಿಲ್ಲ. 18 ವರ್ಷ ಒಳಗಿನ ಮತ್ತು 18 ವರ್ಷ ಮೇಲ್ಪಟ್ಟ ಎಂಬ ಎರಡು ವಿಭಾಗಗಳಿದ್ದು ರಾಷ್ಟ್ರಮಟ್ಟದ ಪ್ರತಿವಿಭಾಗಕ್ಕೆ ಅತ್ತ್ಯುತ್ತಮ ಪತ್ರಕ್ಕೆ ಪ್ರಥಮ ಬಹುಮಾನ ರೂ.50,000/- ಹಾಗೂ ರಾಜ್ಯಮಟ್ಟದ ಅತ್ತ್ಯುತ್ತಮ ಪತ್ರಕ್ಕೆ ಪ್ರಥಮ ಬಹುಮಾನ ರೂ.25,000/- ಗಳ ನಗದು ಬಹುಮಾನವಿದ್ದು, ದ್ವಿತೀಯ/ತೃತೀಯ ಸ್ಥಾನಕ್ಕೂ ನಗದು ಬಹುಮಾನಗಳು ನೀಡಲಾಗುವುದು.
ಬಳ್ಳಾರಿ ವಿಭಾಗದ ವ್ಯಾಪ್ತಿಯ ಆಸಕ್ತರು ಹೆಚ್ಚಿಚನ ಮಾಹಿತಿಗಾಗಿ ಸಮೀಪದ ಅಂಚೆಕಚೇರಿ ಅಥವಾ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಿ : 08392-266037/ ಹನುಮಂತ ರೆಡ್ಡಿ ಮೊಬೈಲ್ 9880979730 -ವಿ ಎಸ್ ಕೃಷ್ಣ 9480722701. ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಕಾಂಗ್ರೆಸ್ ಅನ್ನಪೂರ್ಣಮ್ಮಗೆ ಗೆಲುವು ನಿಶ್ಚಿತ : ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ ಅಭಿಮತ