June 14, 2025

Hampi times

Kannada News Portal from Vijayanagara

ಅ.6ರಂದು ನಾಗೇನಹಳ್ಳಿ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ. ಶತಮಾನೋತ್ಸವ ಸಂಭ್ರಮಕ್ಕೆ ಸಿದ್ಧತೆ ಜೋರು

https://youtu.be/NHc6OMSu0K4?si=SI_K4goOPEgwo6h2

 

ಸಂಘದ ಅಧ್ಯಕ್ಷ ಸಿ.ಹಾಶ್ಯಾಂ ಹೇಳಿಕೆ | ಸಹಕಾರಿ ಸಚಿವ ರಾಜಣ್ಣ ಉದ್ಘಾಟನೆ, ಸಚಿವರು, ಸಹಕಾರಿಗಳು ಭಾಗಿ.

ಹಂಪಿ ಟೈಮ್ಸ್‌ ಹೊಸಪೇಟೆ:

ಗ್ರಾಮದ ವಿ.ಪ್ರಾ.ಗ್ರಾ.ಕೃ.ಸ.ಸಂ.ನಿ. ಶತಮಾನೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಗ್ರಾಮ ಸ್ವಚ್ಛತೆಯೊಂದಿಗೆ ಮದುವಣೆಗಿತ್ತೆಯಂತೆ ಸಿದ್ಧಗೊಳ್ಳುತ್ತಿದೆ. ಗ್ರಾಮದಲ್ಲಿ ವೇದಿಕೆ ಸಿದ್ಧತೆ ಜೋರಾಗಿದ್ದು, ಶ್ರೀಗಳನ್ನು, ಸಚಿವರು, ಶಾಸಕರು ಮತ್ತು ಸಹಕಾರಿಗಳನ್ನು ಕುಂಭದೊಂದಿಗೆ ಆಹ್ವಾನಿಸಲು ಮಹಿಳೆಯರು ಸನ್ನದ್ಧರಾಗುತ್ತಿದ್ದಾರೆ. ಗ್ರಾಮದಲ್ಲಿ ರಸ್ತೆ ಅಕ್ಕಪಕ್ಕ ಬ್ಯಾನರ್‌ಗಳ ರಾರಾಜಿಸುತ್ತಿವೆ.  ಗ್ರಾಮದಲ್ಲಿ ಹಬ್ಬದ ಸಂಭ್ರಮವೆಂಬಂತೆ ಸಿದ್ಧತೆ ನಡೆದಿದ್ದು, ಗಣ್ಯರ ಆಗಮನದ ದಾರಿಯನ್ನು ಸಕಲ ತಯಾರಿಯೊಂದಿಗೆ ಕಾಯತೊಡಗಿದ್ದಾರೆ. ಶಾಲಾ ಆವರಣದಲ್ಲಿ ಬೃಹತ್‌ ಪೆಂಡಾಲ್‌ ಹಾಕಲಾಗಿದ್ದು, ಪಕ್ಕದಲ್ಲೇ ಬಸವಣ್ಣ ದೇವಸ್ಥಾನದ ಆವರಣದಲ್ಲಿ ಭೋಜನ ವ್ಯವಸ್ಥೆಗೆ ಸಿದ್ದತೆ ನಡೆದಿದೆ. ಭಾನುವಾರ ನಡೆಯುವ ಶತಮಾನದ ಸಂಭ್ರಮಕ್ಕೆ ಸಾವಿರಾರು ಜನರು ಸಾಕ್ಷಿಯಾಗಲಿದ್ದಾರೆ.

ತಾಲೂಕಿನ ನಾಗೇನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ನೂರು ವರ್ಷಗಳ ಪೂರೈಸಿದ ನಿಮಿತ್ತ ಅ.6 ರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಸಿ.ಹಾಶ್ಯಾಂ ತಿಳಿಸಿದ್ದಾರೆ.

ಕೊಪ್ಪಳ ಗವಿಮಠದ ಶ್ರಿ ಮ.ನಿ.ಪ್ರ.ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಜಗದ್ಗರು ಕೊಟ್ಟೂರು ಸಂಸ್ಥಾನಂಠದ ಜಗದ್ಗುರು ಶ್ರಿ ಮ.ನಿ.ಪ್ರ.ಬಸವಲಿಂಗ ಮಹಾಸ್ವಾಮಿಗಳು ಮತ್ತು ಮಹ್ಮದ್‌ ನಗರ ನಗರಗಡ್ಡಿ ಮಠದ ಶ್ರಿ ಮ.ನಿ.ಪ್ರ. ಶಾಂತಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸುವರು.

ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಶಮಾನೋತ್ಸವ ಶಿಲಾನ್ಯಾಸದ ಉದ್ಘಾಟನೆ ನೆರವೇರಿಸುವರು. ವಸತಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ವಕ್ಫ್‌ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್‌ ಜಮೀರ್‌ ಅಹ್ಮದ್‌ ಖಾನ್‌ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶಾಸಕ ಎಚ್.ಆರ್.ಗವಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಕಂಪ್ಯೂಟರ್‌ ಕೊಠಡಿ ಉದ್ಘಾಟಿಸಲಿದ್ದಾರೆ., ಸಂಸದ ತುಕಾರಾಂ ಶತಮಾನೋತ್ಸವದ ನೆನಪಿನ ಕಾಣಿಕೆ ಬಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾದಿ ಸಂಸದರಾದ ರಾಜಶೇಖರ ಹಿಟ್ನಾಳ್‌, ಪ್ರಭಾ ಮಲ್ಲಿಕಾರ್ಜುನ, ರಾಜ್ಯ ಸಭಾ ಸದಸ್ಯ ನಾಸೀರ್‌ ಹುಸೇನ್‌, ಶಾಸಕರಾದ ಜಿ.ಎನ್.ಗಣೇಶ, ನಾರಾ ಭರತರೆಡ್ಡಿ, ಲತಾ ಮಲ್ಲಿಕಾರ್ಜುನ, ಎನ್.ಟಿ.ಶ್ರೀನಿವಾಸ, ನೇಮಿರಾಜ್‌ ನಾಯ್ಕ್‌, ಎಲ್.ಕೃಷ್ಣ ನಾಯ್ಕ್‌, ಬಿ.ನಾಗೇಂದ್ರ, ಬಿ.ಎಂ.ನಾಗರಾಜ, ಮಾಜಿ ಸಚಿವ ಬಿ.ಎಸ್.ಆನಂದಸಿಂಗ್‌, ವಿಧಾನ ಪರಿಷತ್‌ ಸದಸ್ಯರಾದ ವೈ.ಎಂ.ಸತೀಶ್‌, ಅಮರನಾಥ ಪಾಟೀಲ್‌, ಶಶೀಲ್‌ ನಮೋಶಿ, ಮಾಜಿ ಶಾಸಕ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿರಾಜ್‌ ಶೇಖ್‌, ರಾಜ್ಯ ಹಾಲು ಒಕ್ಕೂಟದ ಅಧ್ಯಕ್ಷ ಎಲ್.ಬಿ.ಪಿ.ಭೀಮಾನಾಯ್ಕ್‌, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ, ಹುಡಾ ಅಧ್ಯಕ್ಷ ಎಚ್.ಎನ್.ಮಹ್ಮದ್‌ ಇಮಾಮ್‌ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎಸ್ಪಿ ಬಿ.ಎಲ್.ಹರಿಬಾಬು, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ, ಜಿ.ಪಂ.ಸಿಇಒ ಎನ್.ಎಂ.ಅಕ್ರಮ್‌ ಅಲಿ ಷಾ, ಸಹಾಯಕ ಆಯುಕ್ತ ಪಿ.ವಿವೇಕಾನಂದ, ತಹಶೀಲ್ದಾರ್‌ ಶೃತಿ ಎಂ.ಮಳ್ಳಪ್ಪಗೌಡ, ತಾಪಂ ಇಒ ಡಿ.ಲಕ್ಷ್ಮೀಕಾಂತ, ನ್ಯಾಷನಲ್‌ ಅಗ್ರಿಕಲ್ಚರಲ್‌ ಕೋ-ಆಪರೇಟಿವ್‌ ಮಾರ್ಕೆಂಟಿಂಗ್‌ ಫೆಡರೇಷನ್‌ ದೆಹಲಿಯ ಸಿದ್ದಪ್ಪ ಎಸ್‌ ಹೊಟ್ಟಿ, ಸಹಕಾರ ಸಂಘಗಳ ಜಂಟಿ ನಿಬಂಧಕರು ಕಲಬುರಗಿಯ ವಿಶ್ವನಾಥ ಮಹಾಂತಪ್ಪ ಮಲಕುಡು ಕೆಪಿಎಸ್‌, ಸಹಕಾರ ಸಂಘಗಳ ನಿಬಂಧಕ ಬಳ್ಳಾರಿಯ ಬಿ.ಎ.ಕೇಸರಿಮಠ, ಬಳ್ಳಾರಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿಬಂಧಕ ಜೆ.ಎಸ್.ವಿನಾಯಕ, , ಹೊಸಪೇಟೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ಎಸ್.ರವಿಕುಮಾರ್, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಚೊಕ್ಕಬಸವನಗೌಡ, ಮಾಜಿ ಶಾಶಕ ಟಿ.ಎಂ.ಚಂದ್ರಶೇಖರಯ್ಯಸ್ವಾಮಿ, ಬಿಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಜಯಪ್ರಕಾಶ, ಸಮಾಜ ಸೇವಕ ಬಿ.ಎಸ್.ದೀಪಕ್‌ಸಿಂಗ್‌, ಸಿಟಿ ಕೋ-ಆಪರೇಟಿವ್‌ ಬ್ಯಾಂಕ್‌ ಮಾಜಿ ಅಧ್ಯಕ್ಷ ಬಂಡೆ ರಂಗಪ್ಪ, ನಗರಸಭೆ ಮಾಜಿ ಅಧ್ಯಕ್ಷ ಆರ್.ಕೊಟ್ರೇಶ್‌, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್.ಎಸ್.ಆನಂದ, ಜಿಪಂ ಮಾಜಿ ಸದಸ್ಯ ಎಲ್.ಸಿದ್ದನಗೌಡ, ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷ ಎಂ.ದುರುಗಪ್ಪ, ಬಿಡಿಸಿಸಿ ಬ್ಯಾಂಕ್‌ ಮಾಜಿ ನರ್ದೇಶಕ ಬಿ.ಚಂದ್ರಶೇಖರ, ಪ್ರಾ.ಕೃಇ.ಪ.ಸ.ಸಂಘ ನಾಗೇನಹಳ್ಳಿ ಮಾಜಿ ಅಧ್ಯಕ್ಷ ದೇವರಮನಿ ಜಂಬಣ್ಣ, ಪ್ರಾ.ಕೃಇ.ಪ.ಸ.ಸಂಘ ನಾಗೇನಹಳ್ಳಿ ಮಾಜಿ ನಿರ್ದೇಶಕ ಸಿ.ಇಬ್ರಾಹಿಂ ಸಾಬ್‌, ಪ್ರಾ.ಕೃಇ.ಪ.ಸ.ಸಂಘ ನಾಗೇನಹಳ್ಳಿ ಮಾಜಿ ಅಧ್ಯಕ್ಷ ಟಿ.ಆರ್.ಯರಿಸ್ವಾಮಿ, ಪ್ರಾ.ಕೃಇ.ಪ.ಸ.ಸಂಘ ನಾಗೇನಹಳ್ಳಿ ಮಾಜಿ ಸದಸ್ಯ ಸಣ್ಣಕ್ಕಿ ಹನುಮಂತಪ್ಪ, ನಾಗೇನಹಳ್ಳಿ ಗ್ರಾಪಂ ಉಪಾಧ್ಯಕ್ಷೆ ತಳವಾರ ಸವಿತಾ, ಗ್ರಾಪಂ ಸದಸ್ಯರಾದ ಕೆ.ಅನ್ವರ ಬಾಷ, ಕೆ.ನಾಗಭೂಷಣ,ಎಚ್.ಎನ್.ಚನ್ನಬಸಪ್ಪ, ಟಿ.ಹೇಮಗಿರಿ, ಗುಜ್ಜಲ ಪಕ್ಕೀರಪ್ಪ, ಬಿ.ಮಹ್ಮದ್‌ ರಫೀಕ್‌, ಡಿ.ಹುಸೇನಪ್ಪ, ಎಲ್.ಭದ್ರಾನಾಯ್ಕ್‌, ಪಿ.ಭಾರತಿ ಪಾಟೀಲ್‌, ಕೆ.ರಾಹತ್‌ ಜಹಾನ್‌, ವೈ.ಜ್ಯೋತಿ, ಎಸ್.ಹುಲಿಗೆಮ್ಮ, ಎಚ್.ಟಿ.ಲಕ್ಷ್ಮೀ, ಎಲ್.ಲಕ್ಷ್ಮೀಬಾಯಿ, ಕೆ.ಮಾರೆಕ್ಕ, ಎಲ್.ದೀಪಾಬಾಯಿ, ಪಿಡಿಒ ಶಮೀಮ್‌ ಬಾನು ದಲಾಯತ್‌, ಕಾ‍ರ್ಯದರ್ಶಿ ಟಿ.ಕೆ.ವೀರಣ್ಣ ಹಾಗೂ ನಾಗೇನಹಳ್ಳಿ ವಿ.ಪ್ರಾ.ಗ್ರಾ.ಕೃ.ಸಂ.ಸಂ.ನಿ ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್.ವಿ.ಹನುಮಂತಪ್ಪ, ನಿರ್ದೇಶಕರಾದ ಅಲ್ಲಾಭಕ್ಷಿ.ಕೆ., ಡಿ.ಚನ್ನಬಸಪ್ಪ, ಎಸ್.ಕಳಕಪ್ಪ, ಡಾ.ಟಿ.ಆರ್.ಶ್ರೀನಿವಾಸ, ಕರಡಿ ತಿಮ್ಮಪ್ಪ, ಪಿ.ಷಡಾಕ್ಷರಿಗೌಡ, ಬಿ.ವೆಂಕಟೇಶ, ಎಚ್.ಬಸವರಾಜ, ಡಿ.ಲಲಿತಮ್ಮ, ಎ.ಆರ್.ದೇವಕಮ್ಮ, ಬ್ಯಾಂಕ್‌ ಪ್ರತಿನಿಧಿ ಎಚ್.ಜಿ.ಪುರೋಹಿತ್. ಬಿಡಿಸಿಸಿ ಬ್ಯಾಂಕ್‌ ಕ್ಷೇತ್ರಾಭಿವೃದ್ಧಿ ಅಧಿಕಾರಿ ಬಿ.ಜಂಬಯ್ಯ ಉಪಸ್ಥಿತರಿರಲಿದ್ದಾರೆ ಸಂಘದ ಸಿಬ್ಬಂದಿ ವರ್ಗ, ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು, ಗ್ರಾಮ ಮಟ್ಟದ ಆರೋಗ್ಯ, ಅಂಗನವಾಡಿ, ಆಶಾ ಕಾರ್ಯಕರ್ತರು,  ಮತ್ತು ಗ್ರಾಮದ ಹಿರಿಯ ಮುಖಂಡರು, ಯುವಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

 

ಜಾಹೀರಾತು
error: Content is protected !!