https://youtu.be/NHc6OMSu0K4?si=SI_K4goOPEgwo6h2
ಅಮ್ಮ ಮಗಳು
ಉದ್ದನೆ ಕೂದಲು ಬೇಕಮ್ಮ
ಎರಡು ಜಡೆಯ ಕಟ್ಟಮ್ಮ
ಶಾಲೆಗೆ ತಡವಾಯಿತಮ್ಮ
ಬೇಗ ಬೇಗ ಜಡೆ ಹೆಣೆಯಮ್ಮ
ಕೂದಲಿಗೆ ಹಚ್ಚುವೆ ಮೊದಲು ಎಣ್ಣೆ
ಕೈ ಕಟ್ಟಿ ಕುಳಿತುಕೊ ಸುಮ್ಮನೆ
ನಾಳೆಯಿಂದ ಬೇಗನೆ ಏಳಬೇಕು
ಬೇಗ ಬೇಗ ನೀನು ತಯಾರಾಗಬೇಕು
ದಿನವು ಇವರದ್ದು ಇದೆ ಮಾತು
ಕೇಳಿ ಕೇಳಿ ಸಾಕಾಯಿತು
ನನಗು ದೋಸೆಯು ಬರುವುದು ತಡವಾಯಿತು
ಮನದಲೆ ನುಡಿಯುತ ಟಾಮಿಯು ಮಲಗಿತು
– ಸುವರ್ಣಾ ಭಟ್ಟ.
More Stories
ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಿ….ಜಯ ನಿಮ್ಮದೇ….
ಸತಿ ಸಹಗಮನ : ವೀಣಾ ಹೇಮಂತ್ ಗೌಡ ಪಾಟೀಲ್
ಮಹಿಳೆಯರ ಸಂರಕ್ಷಣೆ ಕಾಯ್ದೆ ಹಾಗೂ ಪ್ರಗತಿ ಯೋಜನೆಗಳು ನಮಗೆಷ್ಟು ಗೊತ್ತು? : ಗವಿಸಿದ್ದಪ್ಪ ಹೊಸಮನಿ