https://youtu.be/NHc6OMSu0K4?si=SI_K4goOPEgwo6h2
ಮನುಷ್ಯ ಜೀವಿಯ ಮನಸ್ಸು ಮತ್ತು ನಡವಳಿಕೆಯ ಕುರಿತಾದ ವಿಸ್ತೃತವಾದ ವೈಜ್ಞಾನಿಕ ಅಧ್ಯಯನವನ್ನು ಮನಶಾಸ್ತ್ರ ಎಂದು ಕರೆಯುತ್ತಾರೆ. ಮಾನವ ಮನುಷ್ಯ ಶಾಸ್ತ್ರವು ಅಗಾಧವಾದ ವೈಜ್ಞಾನಿಕ ಮಾಹಿತಿಗಳನ್ನು, ಮನುಷ್ಯನ ನಡವಳಿಕೆಗಳು ಮತ್ತು ಮನಶಾಸ್ತ್ರ. ಇದು ವಿಜ್ಞಾನದ ಒಂದು ಶಾಖೆ. ಮಾನಸಿಕ ಪ್ರಕ್ರಿಯೆ ಮತ್ತು ಸ್ವಭಾವಕ್ಕೆ ಸಂಬಂಧಿಸಿದ್ದು.
ಮಾನವ ಮತ್ತು ಪ್ರಾಣಿಗಳ ವರ್ತನೆ, ಮನಸ್ಸು ಮತ್ತು ಆಲೋಚನೆಗಳ ವ್ಯವಸ್ಥಿತ ಅಧ್ಯಯನ. ಇದು ಮನಸ್ಸಿನ ಪ್ರಕ್ರಿಯೆ, ಭಾವನೆ, ಪ್ರೇರಣೆ, ಆಲೋಚನೆಯ ಅಧ್ಯಯನವನ್ನು ಒಳಗೊಂಡಿರುವಂಥದ್ದು. ಔಷಧಿ ಬದಲಿಗೆ ಆಪ್ತಸಲಹೆಯ ಮೂಲಕ ಆಲೋಚನಾ ವಿಧಾನಗಳಲ್ಲಿ ಬದಲಾವಣೆ ತರುವುದು ಈ ಚಿಕಿತ್ಸೆಯ ಸ್ವರೂಪ. ಇದೆಲ್ಲವೂ ನಡೆಯುವುದು ವೈಜ್ಞಾನಿಕ ಅಧ್ಯಯನದ ತಳಹದಿಯ ಮೇಲೆ.
ಮನೋವಿಜ್ಞಾನದ ಕುರಿತು ಗ್ರೀಸ್ ತತ್ವಜ್ಞಾನಿಗಳಾದ
ಪ್ಲೇಟೋ ಮತ್ತು ಅರಿಸ್ಟಾಟಲ್ ಮೊಟ್ಟ ಮೊದಲು ಚಿಂತಿಸಿದರು. ಮನುಷ್ಯನು ಅನುಭವಿಸುವ ಅನೇಕ ಕಾಯಿಲೆಗಳಿಗೆ ಆತನ ಮನಸ್ಸಿನಲ್ಲಿ ಉಂಟಾಗುವ ಕೋಲಾಹಲಗಳು, ಅನುಭವಿಸುವ ತೊಂದರೆಗಳು ಕಾರಣವಾಗುತ್ತವೆ ಎಂಬುದನ್ನು ನೂರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಅರಿತಿದ್ದರು.
20ನೇ ಶತಮಾನದ ಆದಿಯಲ್ಲಿ ಸಿಗ್ಮಂಡ್ ಫ್ರೈಡ್ ಎಂಬ ಮನಶಾಸ್ತ್ರ ಜ್ಞಾನ ಮನಸ್ಸಿನ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡಿ ಮಾನವನ ಮನಸ್ಸಿನಲ್ಲಿರುವ ಮೂರು ಮೂಲಭೂತ ವಿಷಯಗಳನ್ನು ಬೆಳಕಿಗೆ ತಂದರು. ಐ ಡಿ,ಇಗೋ ಮತ್ತು ಸೂಪರ್ ಇಗೋ. ಮನುಷ್ಯನಲ್ಲಿ ಮೂಲಭೂತವಾಗಿರುವ ಅಂತರ್ಮುಖ ಮತ್ತು ಬಹಿರ್ಮುಖ ವ್ಯಕ್ತಿತ್ವಗಳ ಕುರಿತು, ಆತನ ಮಾನಸಿಕ ಸ್ಥಿತಿಗತಿಗಳಿಗೆ ಆತನ ಸುತ್ತಲಿನ ವಾತಾವರಣ, ಶಿಕ್ಷಣ, ಆತನ ಮನೋದೈಹಿಕ ಚಟುವಟಿಕೆಗಳು ಯಾವ ರೀತಿ ಕಾರಣವಾಗುತ್ತದೆ ಎಂಬುದನ್ನು ವಿಸ್ತೃತವಾಗಿ ಅಧ್ಯಯನ ಮಾಡಿದ ಸಿಗ್ಮಂಡ್ ಫ್ರೈಡ್ ಮನುಷ್ಯನ ಸುಪ್ತ ಮನಸ್ಸಿನ ಕುರಿತು, ಕನಸುಗಳ ಕುರಿತು ವಿವರವಾಗಿ ಅಧ್ಯಯನ ವರದಿಗಳನ್ನು ಪ್ರಕಟಿಸಿದರು.
ಮನಶಾಸ್ತ್ರವನ್ನು ಅಧ್ಯಯನ ರೂಪದಲ್ಲಿ ಇಪ್ಪತ್ತನೇ ಶತಮಾನದ ಆದಿಯಲ್ಲಿ ಪಾವ್ಲೋ, ಸ್ಪಿನ್ನರ್ ಮತ್ತು ಇತರ ತಜ್ಞರು ಮತ್ತಷ್ಟು ವಿಸ್ತೃತ ಅಧ್ಯಯನಗೈದು ವ್ಯಕ್ತಿಯೋರ್ವನ ಸಮಸ್ಯಾತ್ಮಕ ನಡವಳಿಕೆ ಆತನ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಕುರಿತು ವಿವರಣೆಗಳನ್ನು ನೀಡಿದ್ದಲ್ಲದೆ ಮನುಷ್ಯನಆಂತರಂಗಿಕ ಮತ್ತು ಬಹಿರಂಗ ವ್ಯಕ್ತಿತ್ವದ ಕುರಿತ ಹಲವಾರು ವಿಷಯಗಳನ್ನು ಪ್ರಸ್ತುತಪಡಿಸಿದರು.
ಮಾನವ ಸಾಮಾಜಿಕ ನಡವಳಿಕೆ, ಮಕ್ಕಳ ಬೆಳವಣಿಗೆ ಮತ್ತು ವೈಯಕ್ತಿಕ ವ್ಯತ್ಯಾಸಗಳ ಎಲ್ಲಾ ಅಂಶಗಳನ್ನು ತನಿಖೆ ಮಾಡುವ ವೈಜ್ಞಾನಿಕ ಶಿಸ್ತು, ಹಾಗೆಯೇ ಪ್ರಾಣಿಗಳ ಮನೋವಿಜ್ಞಾನ, ಸಂವೇದನೆ , ಗ್ರಹಿಕೆ , ಸ್ಮರಣೆ ಮತ್ತು ಕಲಿಕೆಯ ಕ್ಷೇತ್ರಗಳಾಗಿವೆ.
ಕ್ಲಿನಿಕಲ್ ಸೈಕಾಲಜಿಯಲ್ಲಿನ ತರಬೇತಿಯು ಫ್ರಾಯ್ಡಿಯನ್ ಮನೋವಿಜ್ಞಾನ ಮತ್ತು ಅದರ ಶಾಖೆಗಳಿಂದ ಹೆಚ್ಚು ಪ್ರಭಾವಿತವಾಗಿದೆ. ಆದರೆ ಕೆಲವು ಕ್ಲಿನಿಕಲ್ ಸಂಶೋಧಕರು, ಸಾಮಾನ್ಯ ಮತ್ತು ತೊಂದರೆಗೊಳಗಾದ ಜನಸಂಖ್ಯೆಯೊಂದಿಗೆ ಕೆಲಸ ಮಾಡುತ್ತಾರೆ, ಸಾಮಾಜಿಕ ನಡವಳಿಕೆಯ ಮೇಲೆ ಪ್ರಭಾವ ಬೀರುವ ಮತ್ತು ನಿಯಂತ್ರಿಸುವ ಕಲಿಕೆಯ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ಅನ್ವಯಿಸಲು ಪ್ರಾರಂಭಿಸಿದರು. ಈವರ್ತನೆಯ ಚಿಕಿತ್ಸಾ ಆಂದೋಲನವು ಸಮಸ್ಯಾತ್ಮಕ ನಡವಳಿಕೆಗಳನ್ನು (ಉದಾಹರಣೆಗೆ, ಆಕ್ರಮಣಶೀಲತೆ , ವಿಲಕ್ಷಣವಾದ ಮಾತಿನ ಮಾದರಿಗಳು, ಧೂಮಪಾನ , ಭಯದ ಪ್ರತಿಕ್ರಿಯೆಗಳು) ವ್ಯಕ್ತಿಯ ಸಮಸ್ಯಾತ್ಮಕ ನಡವಳಿಕೆಯ ಮೇಲೆ ಪ್ರಭಾವ ಬೀರುವ ಗಮನಿಸಬಹುದಾದ ಘಟನೆಗಳು ಮತ್ತು ಪರಿಸ್ಥಿತಿಗಳ ಪ್ರಕಾರ ವಿಶ್ಲೇಷಿಸಿದೆ. ವರ್ತನೆಯ ವಿಧಾನಗಳು ಒಳನೋಟ, ಅರಿವು ಅಥವಾ ಸುಪ್ತಾವಸ್ಥೆಯ ಪ್ರೇರಣೆಗಳನ್ನು ಬಹಿರಂಗಪಡಿಸುವ ಮೂಲಕ ಅಲ್ಲ ಆದರೆ ನಡವಳಿಕೆಯನ್ನು ಪರಿಹರಿಸುವ ಮೂಲಕ ಸಮಸ್ಯಾತ್ಮಕ ನಡವಳಿಕೆಯನ್ನು ಮಾರ್ಪಡಿಸಲು ಕೆಲಸ ಮಾಡುವ ಮೂಲಕ ಚಿಕಿತ್ಸೆಗಾಗಿ ನಾವೀನ್ಯತೆಗಳಿಗೆ ಕಾರಣವಾಯಿತು.
ದೇಹಕ್ಕೆ ರೋಗ ಬರುವಂತೆ ಮನಸ್ಸಿಗೂ ಕೂಡ ರೋಗ ಬರುತ್ತದೆ ಅದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯ ಎಂಬುದನ್ನು ಇಂದಿಗೂ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆಯನ್ನು ಪಡೆಯುವುದನ್ನು ತುಸು ಶಂಕೆಯಿಂದಲೇ ನೋಡುವ ಜನರಿಂದಾಗಿ ಎಷ್ಟೋ ಮಾನಸಿಕ ಕಾಯಿಲೆಗಳು ಗುಣವಾಗದೆ ಹೋಗುತ್ತಿವೆ. ಮತ್ತೆ ಸಮಾಜದ ಕೆಲ ಜನರ ವೈಚಾರಿಕತೆಯ ಕೊರತೆಯಿಂದಾಗಿ ಮನೋ ಚಿಕಿತ್ಸಕರ ಬಳಿ ಹೋಗಲು ಕೂಡ ಜನ ಹಿಂಜರಿಯುತ್ತಿರುವುದು ಗಣನೀಯವಾಗಿದೆ.
ಮನಶಾಸ್ತ್ರದಲ್ಲಿ ಹಲವಾರು ಶಾಖೆಗಳಿದ್ದು ಮಕ್ಕಳ ಮನೋವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಸಾಮಾಜಿಕ ಮನೋವಿಜ್ಞಾನ ಔದ್ಯಮಿಕ ಮನೋವಿಜ್ಞಾನ, ವರ್ತನಾ ಚಿಕಿತ್ಸೆಯ ಮನೋವಿಜ್ಞಾನ, ಸಮುದಾಯ ಮನೋವಿಜ್ಞಾನ,ಶಾರೀರಿಕ ಮನೋವಿಜ್ಞಾನ ಎಂದು ಹತ್ತು ಹಲವಾರು ವಿಭಾಗಗಳಲ್ಲಿ ವಿಸ್ತೃತ ಅಧ್ಯಯನ ಕೈಗೊಳ್ಳಲು ಅವಕಾಶವಿದೆ.
ಕ್ಲಿನಿಕಲ್ ಸೈಕಾಲಜಿಯಲ್ಲಿ ಪೀಡಿತ ವ್ಯಕ್ತಿಯ ವೈಯುಕ್ತಿಕ ತೊಂದರೆಗಳು ಮತ್ತು ವರ್ತನಾ ದೋಷಗಳಲ್ಲಿನ ವ್ಯತ್ಯಾಸಗಳ ಕುರಿತು ಅಧ್ಯಯನ ಮತ್ತು ಸಮಾಲೋಚನೆಯ ಮೂಲಕ ಆ ಎಲ್ಲ ತೊಂದರೆಗಳ ಮೂಲಕ್ಕೆ ಹೋಗಿ ಗುಣಪಡಿಸಲು ಸಾಧ್ಯವಾಗುತ್ತದೆ.
ಸಾಮಾಜಿಕ ಮನೋವಿಜ್ಞಾನದಲ್ಲಿ…. ಒಳ್ಳೆಯ ಮೌಲ್ಯಯುತ ನಡವಳಿಕೆಗಳು ಮತ್ತು ಸಂಸ್ಕೃತಿ, ಸಂಸ್ಕಾರ, ಮಾನವೀಯ ಪ್ರಜ್ಞೆಯುಳ್ಳ ಸಾಮಾಜಿಕ ಪರಿಸರ ಮತ್ತು ಅನಾರೋಗ್ಯಕರ ಹವ್ಯಾಸಗಳನ್ನು ಹೊಂದಿರುವ, ದುಶ್ಚಟಗಳ ದಾಸರಾಗಿರುವ, ಕಳ್ಳತನ ಕೊಲೆ ಸುಲಿಗೆಗಳಂತಹ ಕೆಟ್ಟ ಕೆಲಸಗಳನ್ನು ಮಾಡುವ ಜನರ ಬದುಕಿನ ವಿಸ್ತೃತ ಅಧ್ಯಯನದ ಮೂಲಕ ವ್ಯಕ್ತಿಯ ನಡವಳಿಕೆಯ ದೋಷವನ್ನು ಗುರುತಿಸಿ ಅವರಲ್ಲಿ ಉನ್ನತ ಸಾಮಾಜಿಕ ಬದಲಾವಣೆಯನ್ನು ತರುವ ಉದ್ದೇಶ ಸಾಮಾಜಿಕ ಮನೋವಿಜ್ಞಾನದಲ್ಲಿ ಕಂಡುಬರುತ್ತದೆ.
ಶೈಕ್ಷಣಿಕ ಮತ್ತು ಮಕ್ಕಳ ಮನೋವಿಜ್ಞಾನದಲ್ಲಿ…. ಪಾಲಕರ ನಡುವಿನ ಪರಸ್ಪರ ಪ್ರೀತಿ ವಿಶ್ವಾಸ ಮತ್ತು ಗೌರವಗಳು ಮಕ್ಕಳ ಮನಸ್ಥಿತಿಯ ಮೇಲೆ ಬೀರುವ ಪರಿಣಾಮಗಳು ಮತ್ತು ಮಗುವಿನ ಬೆಳವಣಿಗೆಯಲ್ಲಿ ಈ ವಿಷಯಗಳು ವಹಿಸುವ ಪಾತ್ರದ ಕುರಿತು ಅಧ್ಯಯನ ನಡೆಸಲಾಗಿದ್ದು… ಇದೀಗ ವಿಶ್ವದ ಎಲ್ಲ ಬಾಲ ಮಕ್ಕಳ ಕಲಿಕಾ ಕೇಂದ್ರಗಳಲ್ಲಿ ಶಿಕ್ಷಣಾರ್ಥಿಗಳಿಗೆ ಮಕ್ಕಳ ಮನೋವಿಜ್ಞಾನದ ಕುರಿತ ಒಂದು ವಿಷಯವನ್ನೇ ಅಧ್ಯಯನಕ್ಕೆ ಇಡಲಾಗಿದೆ.
ಹೀಗೆ ಮನೋವಿಜ್ಞಾನವು ನಮ್ಮ ಜೀವನದ ಬಹಳಷ್ಟು ವಿಷಯಗಳಲ್ಲಿ ಮಾಹಿತಿ ನೀಡುವ, ವರ್ತನಾ ದೋಷಗಳನ್ನು ತಿದ್ದುವ, ವೈಜ್ಞಾನಿಕ ಮತ್ತು ಶಾರೀರಿಕ ಸ್ವಾಸ್ಥ್ಯದ ಕುರಿತಾದ ಸಾಮಾಜಿಕ ತಿಳುವಳಿಕೆಯನ್ನು ಹಂಚುವ, ಜನರಲ್ಲಿ ಜಾಗೃತಿಯನ್ನು ಮೂಡಿಸುವ, ಭಾವನೆಗಳನ್ನು ನಿಯಂತ್ರಣದಲ್ಲಿರುವ, ಅರಿವಿನ ಕೌಶಲ್ಯವನ್ನು ಹೆಚ್ಚಿಸುವ ವಿಜ್ಞಾನವಾಗಿದ್ದು ಇನ್ನೂ ಬಾಲ್ಯಾವಸ್ಥೆಯಲ್ಲಿಯೇ ಇರುವಂತೆ ತೋರುವ ಈ ವಿಜ್ಞಾನದ ಕುರಿತು ಮತ್ತಷ್ಟು ಹೆಚ್ಚು ಅಧ್ಯಯನಗಳು ಬೆಳಕಿಗೆ ಬರಬೇಕಿದೆ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
More Stories
ಮೊಮ್ಮಗನಿಗೊಂದು ಪತ್ರ ಮುದ್ದು ಮೊಮ್ಮಗನೇ.
ಹಂಪಿ ಪರಿಸರದ ಧರ್ಮರ ಗುಡ್ಡದ ಮಾರ್ನಾಮಿ ಹಬ್ಬ
ಬದುಕಿಗೆ ಬೇಕು ಆಶಾವಾದದ ಬೆಳಕು : ಜಯಶ್ರೀ.ಎಂ.ಕರ್ಜಗಿ. ಹುಬ್ಬಳ್ಳಿ