https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ನಗರದ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ 2023-24 ನೇ ಸಾಲಿನಲ್ಲಿ ರೂ. 14,15,317/- ನಿವ್ವಳ ಲಾಭಗಳಿಸಿದ್ದು. ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸಲಾಗುವುದು ಎಂದು ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ,ವಿ.ಪತ್ತಾರ ತಿಳಿಸಿದರು.
ನಗರದ ಸಂಘದ ಕಛೇರಿ ಆವಣದಲ್ಲಿ ಭಾನುವಾರ ಜರುಗಿದ 19ನೇ ವಾರ್ಷಿಕ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಹಕಾರಿಯ ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಹಕಾರಿಯು ಪ್ರಗತಿಯ ಹಾದಿಯಲ್ಲಿ ಸಾಗಿದೆ. ಸದಸ್ಯರ ವಿಶ್ವಾಸರ್ಹತೆ ಪಡೆದಿದ್ದು, ಸದಸ್ಯರಿಗೆ ಉತ್ತಮ ಸೇವೆನೀಡಲಾಗಿತ್ತಿದೆ. ಸಣ್ಣ ಹಾಗೂ ಮಧ್ಯಮ ವ್ಯಾಪರಸ್ಥರ ಮಳಿಗೆ ಬಾಗಿಲುಗಳಿಗೆ ತೆರಳಿ ನಿತ್ಯ ಪಿಗ್ಮಿಸಂಗ್ರಹಿಸಲಾಗುತ್ತಿದೆ. ಪಿಗ್ಮಿ ಸಂಗ್ರಹಕರು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಪಿಗ್ಮಿ ಕಟ್ಟುವ ಸದಸ್ಯರ ಸಂಖ್ಯೆಯು ಹೆಚ್ಚಾಗುತ್ತದೆ. ಸಹಕಾರಿಯ ಸದಸ್ಯರಿಗೆ ಜಾಮೀನು ಸಾಲ, ತೋರಾಯ್ಕೆ ಸಾಲ, ವಾಹನ ಸಾಲ, ಬಂಗಾರದ ಆಭರಣ ಆಧಾರಿತ ಸಾಲ, ಮುದ್ದತ್ತುಠೇವು ಸಾಲ, ಪಿಗ್ಮಿ ಆಧಾರಿತ ಸಾಲ ನೀಡಲಾಗಿದೆ. ಪಿಗ್ಮಿ ಕಟ್ಟಿ ಉಳಿತಾಯ ಮಾಡಬೇಕೆನ್ನುವರು ಸಹಕಾರಿ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.
ನಮ್ಮ ಸಹಕಾರಿ ಸಂಘದ ಸದಸ್ಯರುಗಳಲ್ಲಿ ಗರಷ್ಠ ವ್ಯವಹಾರದಲ್ಲಿ ತೊಡಗಿಸಿಕೊಂಡು ಅತಿ ಹೆಚ್ಚು ಮುದ್ದತ್ತು ಠೇವಣೆ ಮಾಡಿದ ಸದಸ್ಯರಾದ ಬಿ.ಆರ್ ಮಹೇಶ, ಎಮ್.ಗೋಪಾಲಶೆಟ್ಟಿ, ಅನ್ಸರ್‌ಅಹ್ಮದ್ ಹಾಗೂ 2023-24 ನೇ ಸಾಲಿನಲ್ಲಿ ಸಂಘದಿAದ ಅತಿ ಹೆಚ್ಚು ಸಾಲ ಪಡೆದು ಪ್ರಮಾಣಿಕವಾಗಿ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ಕೆ.ಟಿ.ಶ್ರೀನಿವಾಸಮೂರ್ತಿ, ಆಬ್ದುಲಕರೀಂ.ಎಮ್, ಕೆ.ಶ್ರೀನಾಥ ಇವರನ್ನು ಸಹಕಾರಿಯಿಂದ ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಸಹಕಾರಿಯ ಉಪಾಧ್ಯಕ್ಷ ಐ.ಭೀಮಾಜೀ, ನಿರ್ದೆಶಕರಾದ ಎ.ಕೃಷ್ಣಪ್ಪ. ಕೆ.ಸುರೇಶಆಚಾರ. ಬಿ.ರಾಮಚಂದ್ರ. ಕೆ.ಹೇಮಾವತಿ, ಆರ್.ಮುರಳೀಧರ್, ಬಿ.ಕಮಲ, ಬಿ.ಸಿರಿಯಾಚಾರ್, ಪ್ರಸನ್ನಾಚಾರ, ವಿಷೇಶ ಅಹ್ವಾನಿತರಾದ ಎಸ್.ಕೆ ರಾಜಶೇಖರಾಚಾರ ಹಾಗೂ ಸಿಇಒ ಕೆ.ನಾಗರಾಜ ಸೇರಿದಂತೆ ಸಿಬ್ಬಂದಿ ಉಪಸ್ಥಿರಿದ್ದರು.
More Stories
ಈ.ತುಕಾರಾಮ್ ಈ ಬಾರಿ 1200 ಕೋಟಿ ಅನುದಾನವನ್ನು ಸಂಡೂರು ಜನತೆಗಾಗಿ ತಂದಿದ್ದಾರೆ: ಸಿ.ಎಂ.ಸಿದ್ದರಾಮಯ್ಯ
ನವಮಿಗೆ ಶಕ್ತಿ ದೇವತೆಗಳ ಸಮ್ಮಿಲನ ಧರ್ಮದ ಗುಡ್ಡದಲ್ಲಿ ದೇವರ ಬನ್ನಿ ಅದ್ಧೂರಿ
ಮೊಮ್ಮಗನಿಗೊಂದು ಪತ್ರ ಮುದ್ದು ಮೊಮ್ಮಗನೇ.