https://youtu.be/NHc6OMSu0K4?si=SI_K4goOPEgwo6h2
ಗಣೇಶೋತ್ಸವ ಹಬ್ಬಕ್ಕೆ ಕ್ಷಣಗಣನೆ| ಗಣಪನನ್ನು ಆರಾಧನೆಗೆ ವೇದಿಕೆಗಳು ಸಿದ್ಧ
ಭಾರತೀಯರು ಹಬ್ಬ ಪ್ರೀಯರು. ಗಣೇಶ ಚತುರ್ಥಿ ಅನ್ನುವದು ರಾಷ್ಟ್ರೀಯ ಹಬ್ಬ. ಬ್ರೀಟಿಷರಿಗೆ ಭಾರತವನ್ನು ಬಿಟ್ಟು ತೊಲಗಿಸಲು ಅಂದು ನಮ್ಮ ನೆಚ್ಚಿನ ರಾಷ್ಟ್ರಾಭಿಮಾನಿಯಾದ ಬಾಲಗಂಗಾಧರ ತಿಲಕ ರವರು ಭಾರತೀಯರನ್ನು ಒಂದುಗೂಡಿಸುವ ಸಲ್ಲುವಾಗಿ ಈ ಗಣೇಶನನ್ನು ಸಾರ್ವಜನಿಕವಾಗಿ ಕೂರಿಸುವ ಉತ್ಸವವನ್ನು ಪ್ರಾರಂಭಿಸಿದರು.
ಅಂದಿನಿಂದ ರಾಷ್ಟ್ರ ವ್ಯಾಪಿಯಾಗಿ ಪ್ರತಿವರ್ಷವೂ ಭಾದ್ರಪದ ಮಾಸದ ಚತುರ್ಥಿಯಂದು ಶಿವ-ಗೌರಿಸುತ್ತನಾದ ಗಣಪತಿಯನ್ನು ನಗರ-ಗ್ರಾಮೀಣ ಪ್ರದೇಶವೆನ್ನದೇ ಎಲ್ಲಡೇಯೂ ಭಕ್ತಿ ಪೂರ್ವಕವಾಗಿ ಆರಾಧನೆ ಮಾಡುವುದು ಜೋರಾಗಿರುತ್ತದೆ. ಗಣೇಶ ಚತುರ್ಥಿ ಬಂದರೆ ಸಾಕು ಪಟ್ಟಣವೇಲ್ಲ ವಿಘ್ನೇಶನ ಆರಾಧನೆಯಲ್ಲಿ ಮಗ್ನಗೊಳುವದು. ಅದರಲ್ಲೂ ಚಿಕ್ಕ ಪುಟ್ಟ ಮಕ್ಕಳಿಗಂತು ಗಣೇಶ ಕೂರಿಸುವದು ಒಂದು ಸಡಗರ ಹಾಗೂ ಸಂಭ್ರಮದ ಹಬ್ಬವಾಗಿದೆ. ಪ್ರತಿ ವರ್ಷವೂ ಪಟ್ಟಣದಲ್ಲಿ ನೂರಾರೂ ಕಡೆಗಳಲ್ಲಿ ವಿಘ್ನ ನಿವಾರಕನನ್ನು ಕೂಡಿಸುವದು ಸರ್ವೆ ಸಾಮಾನ್ಯ.
ಈ ಬಾರಿಯೂ ವ್ಯಾಪಾರಿ ನಗರಿ ಚಡಚಣ ಪಟ್ಟಣದಲ್ಲಿ ಗಣೇಶ ಚತುರ್ಥಿ ನಿಮಿತ್ಯವಾಗಿ ಗಣೇಶನ ಮೂರ್ತಿಯನ್ನು ಮನೆ, ಗಲ್ಲಿ, ಸರ್ಕಾರಿ ಕಛೇರಿ, ಸಂಘ-ಸಂಸ್ಥೆ, ಪ್ರಮುಖ ಬಿದಿಗಳಲ್ಲಿ ಐದು ದಿನ, ಏಳು ದಿನ, ಒಂಬತ್ತು ದಿನ ಹೀಗೆ ಆಯಾ ಮಂಡಳಿಗಳು ಪ್ರತಿಷ್ಠಾಪಿಸಿ ಮೋದಕ ಪ್ರೀಯ ಗಣೇಶನಿಗೆ ವಿಶೇಷ ತಿಂಡಿ ಕಡಬು, ಲಾಡು, ಗರಿಕೆ, ಹಣ್ಣು ಹಂಪಲ್‌ಗಳು ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಲಾಗುವುದು. ಭಾದ್ರಪದ ಶುಕ್ಲದ ಚೌತಿಯಂದು ಹಸ್ತಾ ನಕ್ಷತ್ರವಿರುವ ದಿನವೇ ಗಣೇಶ ಚತುರ್ಥಿ ದಿವಸ. ಈ ದಿವಸ ಶಿವ-ಗೌರಿ ದಂಪತಿಗಳಿಗೆ ವಿನಾಯಕನಾಗಿ ಜನಿಸಿದ ಗಣೇಶನ ಹುಟ್ಟಿದ ದಿನ. ಈ ದಿನವನ್ನು ಕರ್ನಾಟಕ, ಮಹಾರಾಷ್ಟ್ರ ಎನ್ನದೇ ಭಾರತದ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಗಣೇಶನನ್ನು ಕೂರಿಸಿ, ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ.
ನಮ್ಮ ವಿಜಯಪೂರ ಜಿಲ್ಲೆಯ ಗ್ರಾಮೀಣ ಭಾಗದಲ್ಲಂತು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ, ನಿತ್ಯವೂ ರಾತ್ರಿ ಒಂದೊಂದು ತರಹದ ಮನರಂಜನೆ, ನಾಟಕ, ಡ್ಯಾನ್ಸ್, ಹಾಡು, ಮಿಮಿಕ್ರೀಗಳು ಗಣೇಶ ಮಂಡಳಿಯವರು ಆಯೋಜಿಸುತ್ತಾ ಜನರನ್ನು ಭೇದ-ಭಾವವಿಲ್ಲದೇ ಒಂದೂಗೂಡಿಸುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಸಂಭ್ರಮಿಸುವ ಜತೆಯಲ್ಲಿ ಕೊನೆಯ ದಿನದಂದು ಭಕ್ತರಿಗಾಗಿ ಮಹಾಪ್ರಸಾದ ವ್ಯವಸ್ಯೆಯೂ ಮಾಡುವವರು. ಹಳ್ಳಿಗಳಲ್ಲಿ ದೊಡ್ಡ ದೊಡ್ಡ ಗಣಪತಿ ಊರೋಳಗಡೆ ಕುಳಿತರೆ, ಜನರು ತಮ್ಮ ಮನೆಗಳಲ್ಲಿ ಪುಟ್ಟ ಪುಟ್ಟ ವಿನಾಯಕನ್ನು ಕೂರಿಸಿ ಹಬ್ಬವನ್ನು ಎಲ್ಲ ಹಬ್ಬಕ್ಕಿಂತ ವಿಜೃಂಭಣೆಯಿಂದ ಆಚರಿಸುವರು.
ಈ ಬಾರಿ ಪ್ರತಿಯೊಬ್ಬರೂ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಗಣಪನ ಮೂರ್ತಿ ವಿಸರ್ಜನೆ ಸಮಯದಲ್ಲಿ ಮುನ್ನೆಚ್ಚರಿಕೆ ವಹಿಸಿ, ಶಾಂತಿಯುತ ಹಬ್ಬವನ್ನು ಆಚರಣೆ ಮಾಡುವಂತಾಗಲಿ ಎನ್ನುವದು ನನ್ನ ಆಶಯ.
– ರೇವಣಸಿದ್ದ ಬಗಲಿ
(ಪತ್ರಿಕೋದ್ಯಮ ಪ್ರಶಿಕ್ಷಣಾರ್ಥಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)
More Stories
ನವಮಿಗೆ ಶಕ್ತಿ ದೇವತೆಗಳ ಸಮ್ಮಿಲನ ಧರ್ಮದ ಗುಡ್ಡದಲ್ಲಿ ದೇವರ ಬನ್ನಿ ಅದ್ಧೂರಿ
ಮೊಮ್ಮಗನಿಗೊಂದು ಪತ್ರ ಮುದ್ದು ಮೊಮ್ಮಗನೇ.
ಹಂಪಿ ಪರಿಸರದ ಧರ್ಮರ ಗುಡ್ಡದ ಮಾರ್ನಾಮಿ ಹಬ್ಬ