September 14, 2024

Hampi times

Kannada News Portal from Vijayanagara

ಗೌರಿ ಬಾಗಿನ :  ಗೌರಿ ಮತ್ತು ಗಣೇಶ ಹಬ್ಬವು ಹಿಂದುಗಳು ಅಚ್ಚರಿಸುವ ಪವಿತ್ರವಾದ ಹಬ್ಬ

https://youtu.be/NHc6OMSu0K4?si=SI_K4goOPEgwo6h2

 

 

 

ಸ್ವರ್ಣ ಗೌರಿ ಪೂಜೆ ಹೇಗೆ ಆಚರಣೆಗೆ  ಬಂದಿತು ಎಂಬುದಕ್ಕೆ ಒಂದು ಸುಂದರ ಪೌರಾಣಿಕ ಹಿನ್ನೆಲೆ ಇದೆ
ಚಂದ್ರಪ್ರಭು ಎಂಬ ಅರಸ ಒಮ್ಮೆ ಬೇಟೆಯಾಡಲು ಅರಣ್ಯಕ್ಕೆ ಹೋದಾಗ ಒಂದು ಮೋಹಕ ಸರೋವರದ ಬಳಿ ಅನೇಕ ಅಪ್ಸರೆಯರು ಸ್ವರ್ಣ ಗೌರಿ  ಪೂಜೆಯನ್ನು ಮಾಡುವುದರಲ್ಲಿ ನಿರತರಾಗಿರುವುದನ್ನು ಕಾಣುತ್ತಾನೆ . ಪೂಜೆ ಮುಗಿಯುವವರೆಗೂ ಕಾದಿದ್ದು ನಂತರ ಆ ಪೂಜೆಯ ಮಹತ್ವವನ್ನು ತನಗೆ ತಿಳಿಸಬೇಕಾಗಿ ಕೋರಿಕೊಳ್ಳುತ್ತಾನೆ . ಆಗ ಅಪ್ಸರೆಯರು ಆತನಿಗೆ ವ್ರತದ ಆಚರಣೆಯ ವಿಧಾನವನ್ನು ಹಾಗೂ ಅದರ ಮಹಿಮೆಯನ್ನು ಆತನಿಗೆ ತಿಳಿಸುತ್ತಾರೆ . ಈ ವ್ರತದ ಆಚರಣೆಯಿಂದ ದಂಪತಿಗಳಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂದು ಹೇಳಿ ಭಾದ್ರಪದ ಶುದ್ಧ ತದಿಗೆಯಂದು ಇದನ್ನು ಆಚರಿಸಬೇಕಾಗಿ ಹೇಳಿ  16 ಗಂಟಿನ ದಾರವನ್ನು ಆತನಿಗೆ ನೀಡುತ್ತಾರೆ
ರಾಜನು ಅರಮನೆಗೆ ಮರಳಿ ದಾರವನ್ನು ತನ್ನ ಮೊದಲನೆಯ ಪತ್ನಿಗೆ ನೀಡುತ್ತಾನೆ . ಆದರೆ ಮೊದಲನೆಯ ಪತ್ನಿ ಅದನ್ನು ತಿರಸ್ಕರಿಸಿ ಒಣಗಿದ ಗಿಡದ ಮೇಲೆ ಎಸೆಯುತ್ತಾಳೆ . ಆದರೆ ದಾರದ ಮಹಿಮೆಯಿಂದ ಒಣಗಿದ ಗಿಡವು ಚಿಗುರುತ್ತದೆ . ಇದನ್ನು ಕಂಡ ಎರಡನೇ ಪತ್ನಿ ಆ ದಾರವನ್ನು ಧರಿಸಿ ಸ್ವರ್ಣಗೌರಿ ವ್ರತವನ್ನು ಆಚರಿಸುತ್ತಾಳೆ . ಅದರ ಮಹಿಮೆಯಿಂದ ಪತಿ ಪತ್ನಿಯರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ . ಅವರು ಸುಖವಾಗಿ ಸಂಸಾರ ನಡೆಸಿ ಕೊನೆಗೆ ಶಿವ ಸಾನ್ನಿಧ್ಯ ಪಡೆಯುತ್ತಾರೆ , ಮುಕ್ತಿಯನ್ನು ಹೊಂದುತ್ತಾರೆ ಎಂಬ ಪ್ರತೀತಿ ಪುರಾಣ ಕಥೆಗಲ್ಲಿದೆ
ಗೌರಿಬಾಗಿನವನ್ನು ನವ ವಿವಾಹಿತೆಯರು ಮೊದಲ ಗೌರಿ ಹಬ್ಬದಂದು  16 ಜನ ಮುತೈದೆಯರಿಗೆ ನಂತರದ ವರ್ಷಗಳಲ್ಲಿ 5 ಜನ ಮುತೈದೆಯರಿಗೆ ಮರದ ಬಾಗಿನವನ್ನು ನೀಡುವ ಸಂಪ್ರದಾಯ ನಮ್ಮಲಿದೆ. ಮರದಲ್ಲಿ ಬಾಗಿನ ನೀಡುವುದೇ ಗೌರಿ ಬಾಗಿನದ ವಿಶೇಷ. ಮೊರವನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ. ಮೊರದಲ್ಲಿ ಬಾಗಿನವನ್ನು ನೀಡಿದರೆ ಉತ್ತಮ ಆರೋಗ್ಯ ಸುಖ,ಶಾಂತಿ,ನೆಮ್ಮದಿ,ಸಮೃದ್ಧಿ ಹಾಗೂ ಸದಾ ಕಾಲ ಮುತೈದೆಯ ಬಾಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ 16 ಜನ ಮುತೈದೆಯರು ಪಾರ್ವತಿಯ ಒಂದೊಂದು ಅವತಾರ ಎಂದು ಭಾವಿಸಿ ಇವರಿಗೆ ಬಾಗಿನವನ್ನು ನೀಡಲಾಗುತ್ತದೆ. ಆದ್ದರಿಂದ ಮೊರಕ್ಕೆ ಅರಿಶಿನ ಕುಂಕುಮ ಹಚ್ಚಿ ಅದರಲ್ಲಿ ಧಾನ್ಯಗಳು,ಬೆಲ್ಲ,ತೆಂಗಿನಕಾಯಿ,ಬಳೆ ಬಿಚ್ಚೋಲೆ,ಕನ್ನಡಿ,ವಸ್ತ್ರ, ಬಗೆ ಬಗೆಯ ಹಣ್ಣುಗಳು,ವೀಳ್ಯದ ಎಲೆ,ಅಡಿಕೆಯನ್ನು ಇಟ್ಟು ಮುತೈದೆಯರಿಗೆ ನೀಡಲಾಗುತ್ತದೆ. ಒಟ್ಟಿನಲ್ಲಿ ಅಡಿಗೆ ಸಾಮಾಗ್ರಿ,ಮಂಗಳಕರ ಸಾಮಾಗ್ರಿ, ಸೌಂದರ್ಯ ಸಾಮಾಗ್ರಿ ಗಳನ್ನು ಕೊಟ್ಟು ಅವರನ್ನು ಸಂತೈಸಿ ಅವರಿಂದ ಆಶೀರ್ವಾದ ಪಡೆಯುವುದು ಇದರ ಉದ್ದೇಶ.
~ಚೇತನ ಭಾರ್ಗವ,    ಬೆಂಗಳೂರು

 

 

ಜಾಹೀರಾತು
error: Content is protected !!