September 14, 2024

Hampi times

Kannada News Portal from Vijayanagara

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ15 ಶಿಕ್ಷಕರು ಆಯ್ಕೆ

https://youtu.be/NHc6OMSu0K4?si=SI_K4goOPEgwo6h2

 

 

 

ಹಂಪಿ ಟೈಮ್ಸ್‌ ಹೊಸಪೇಟೆ

ಶಾಲಾ ಶಿಕ್ಷಣ ಇಲಾಖೆ ನೀಡುವ 2024-25ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳಿಗೆ ವಿಜಯನಗರ ಜಿಲ್ಲೆಯ ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದ ತಲಾ ಐವರು ಆಯ್ಕೆಗೊಂಡಿದ್ದು, ಒಟ್ಟು  15 ಶಿಕ್ಷಕರು ಆಯ್ಕೆಯಾಗಿದ್ದಾರೆ. ಸೆ.9 ರಂದು ಬೆಳಿಗ್ಗೆ 10ಕ್ಕೆ ನಗರದ ಸಾಯಿಲೀಲಾ ರಂಗ ಮಂದಿರಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ವಿಜಯನಗರ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎ.ಹನುಮಕ್ಕ ತಿಳಿಸಿದ್ದಾರೆ.

15 ಶಿಕ್ಷಕರ ಪೈಕಿ 7 ಶಿಕ್ಷಕಿಯರು, 8 ಶಿಕ್ಷಕರಿದ್ದಾರೆ. ಪ್ರತಿ ತಾಲೂಕಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ. ಹರಪನಹಳ್ಳಿ ತಾಲೂಕಿನಿಂದ ಮೂವರು ಶಿಕ್ಷಕಿಯರು ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹೊಸಪೇಟೆ: ತಾಲೂಕು ಗೌಸಿಯಾ ಬೇಗಂ.ಎಂ. (ಸ.ಉರ್ದು ಕಿರಿಯ ಪ್ರಾ.ಶಾಲೆ. ಪಿ.ಕೆ.ಹಳ್ಳಿ)

ಎಂ.ಹನುಮವ್ವ ( ಸ.ಹಿ.ಪ್ರಾ.ಶಾಲೆ, ವ್ಯಾಸನಕೆರೆ)

ಸುಧಾಕರ.ಎ ( ಬಾಲಕೀಯರ ಸ.ಪದವಿ ಪೂರ್ವ ಕಾಲೇಜ್(ಪ್ರೌ.ವಿ.) ಹೊಸಪೇಟೆ.

 

ಹೂವಿನ ಹಡಗಲಿ ತಾಲೂಕು:  ಜಯಪ್ಪ ಎಂ (ಸ.ಕಿ.ಪ್ರಾ.ಶಾಲೆ. ಬ್ಯಾಡರಗೇರೆ ಮಾಗಳ)

ಎ.ಚಂದ್ರಪ್ಪ (ಸ.ಮಾ.ಹಿ.ಪ್ರಾ.ಶಾಲೆ. ಎ.ಕೆ.ಕಾಲೋನಿ ಹೊಳಲು)

ಕೆ.ನಿಂಗಪ್ಪ (ಸ.ಪ್ರೌ.ಶಾಲೆ. ಮಾನ್ಯರ ಮಸಲವಾಡ)

 

 

ಹಗರಿಬೊಮ್ಮನಹಳ್ಳಿ ತಾಲೂಕು: ಹೆಚ್.ಸುರೇಶ (ಸ.ಕಿ.ಪ್ರಾ.ಶಾಲೆ ಸಕ್ರಿಹಳ್ಳಿ )

ಹಿರೇಮಠದ ಬಸಯ್ಯ (ಸ.ಹಿ.ಪ್ರಾ.ಶಾಲೆ ಬಾಚಿಗೊಂಡನಹಳ್ಳಿ)

ಲಕ್ಷ್ಮೀ.ಎಸ್.ಬಿ. (ಸ.ಪ್ರೌ.ಶಾಲೆ. ಅಂಕಸಮುದ್ರ)

 

ಕೂಡ್ಲಿಗಿ ತಾಲೂಕು:  ಟಿ.ತಿಪ್ಪೇಸ್ವಾಮಿ ( ಸ.ಕಿ.ಪ್ರಾ.ಶಾಲೆ. ನುಂಕನಹಳ್ಳಿ)

ಸೌಭಾಗ್ಯಲಕ್ಷ್ಮೀ (ಸ.ಹಿ.ಪ್ರಾ.ಶಾಲೆ.ಕೆಂಚಮಲ್ಲನಹಳ್ಳಿ)

ಗೋಪಾಲನಾಯ್ಕ.ಟಿ. (ಕರ್ನಾಟಕ ಪಬ್ಲಿಕ್‌ ಶಾಲೆ (ಪ್ರೌ.ಶಾ.ವಿ.) ಗುಡೆಕೋಟೆ)

 

ಹರಪನಹಳ್ಳಿ ತಾಲೂಕು:  ಬಿ.ಜಿ.ಭಾನು ( ಉನ್ನತೀಕರಿಸಿದ ಸ.ಹಿ.ಪ್ರಾ.ಶಾಲೆ ಉಚ್ಚಂಗಿದುರ್ಗ)

ಶ್ವೇತಾ ಜಿ. (ಸ.ಹಿ.ಪ್ರಾ.ಶಾಲೆ ಹಾರಕನಾಳು

ಪರ್ವೀನ್‌ ಬಾನು (ಸ.ಆದರ್ಶ ವಿದ್ಯಾಲಯ ಅನಂತನಹಳ್ಳಿ)

 

 

ಜಾಹೀರಾತು
error: Content is protected !!