September 14, 2024

Hampi times

Kannada News Portal from Vijayanagara

ಮಕ್ಕಳಲ್ಲಿ ಏಕಾಗ್ರತೆ ನೆನಪಿನ ಶಕ್ತಿ ಇಮ್ಮಡಿಗೆ ರೀಡ್‌ ಎ ಥಾನ್‌ ಅಭಿಯಾನಕ್ಕೆ ಚಾಲನೆ

https://youtu.be/NHc6OMSu0K4?si=SI_K4goOPEgwo6h2

 

 

 

15ನೇ ವಾರ್ಡ್‌ ಕ್ಲಸ್ಟರ್‌ನಲ್ಲಿ ಮಕ್ಕಳ ಉತ್ಸಾಹ ಹೆಚ್ಚಿಸಿದ  ಓದು ಅಭಿಯಾನ

ಹಂಪಿ ಟೈಮ್ಸ್‌ ಹೊಸಪೇಟೆ

ಮಕ್ಕಳಲ್ಲಿ ಏಕಾಗ್ರತೆ ಮತ್ತು ಓದುವ ಹವ್ಯಾಸ ಹೆಚ್ಚಿಸಿಕೊಳ್ಳಲು ರೀಡ್‌ ಎ ಥಾನ್‌ ಸಹಕಾರಿಯಾಗಿದೆ. ಓದುವ ಹವ್ಯಾಸದಿಂದ ಮಕ್ಕಳ ವ್ಯಕ್ತಿತ್ತ ವಿಕಸನಗೊಳ್ಳಲಿದೆ. ಪ್ರತಿಯೊಬ್ಬರೂ ಓದುವಿಕೆಯಲ್ಲಿ  ತೊಡಗಿಸಿಕೊಳ್ಳಬೇಕು ಎಂದು ರೂಮ್ ಟು ರೀಡ ಪ್ರೊಗ್ರಾಮ್ ಕೋ ಆರ್ಡಿನೇಟರ್  ನಟರಾಜ್ ಬಿ ಹೇಳಿದರು.

ನಗರದ  ನೆಹರೂ ಕಾಲೋನಿಯ 15ನೇ ವಾರ್ಡ್  ಕ್ಲಸ್ಟರ್ ನ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಜೆ ಎಸ್ ಡಬ್ಲ್ಯೂ ರೂಮ್ ಟು ರೀಡ್ ವತಿಯಿಂದ ಹಮ್ಮಿಕೊಂಡಿದ್ದ ರೀಡ್ ಎ ಥಾನ್ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು. ಪುಸ್ತಕದ ಓದು ಜೀವನಕ್ಕೆ ಆಧಾರವಾಗಲಿದೆ. ಉತ್ತಮ ಪುಸ್ತಕಗಳ ಓದು ಸುಂದರ ಬದುಕಿಕೆ ಅಡಿಪಾಯವಾಗಲಿವೆ. ಮಕ್ಕಳು ನಿತ್ಯ ಸಮಯಸಿಕ್ಕಾಗಲೆಲ್ಲ ಮೊಬೈಲ್‌ ಬದಲಿಗೆ ಪುಸ್ತಕಗಳನ್ನು ಕೈಯಲ್ಲಿಡಿದು ಓದಿದರೆ ಮೌಲ್ಯಯುತ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದರು.

 

15ನೇ ವಾರ್ಡ್ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ  ಎನ್ ನಾಗರಾಜ್ ಮಾತನಾಡಿ, ಇಂದಿನ ಓದುಗರು ನಾಳಿನ ನಾಯಕರು” ಎಂಬ ಗಾದೆ ಮಾತಿನಂತೆ ಮಕ್ಕಳಲ್ಲಿ ಓದುವ ಕೌಶಲ್ಯಗಳು ಹಾಗೂ ಹವ್ಯಾಸ ಬೆಳೆಸುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ರೀಡ್‌ ಎ ಥಾನ್ ಅನುವು ಮಾಡಿಕೊಡಲಿದೆ. 1 ರಿಂದ 7ನೇ ತರಗತಿವರೆಗೆ ಓದುತ್ತಿರುವ ಮಕ್ಕಳಲ್ಲಿ ಓದುವ ಕೌಶಲ್ಯ ಸಂಸ್ಕೃತಿ ಮತ್ತು ಅಭ್ಯಾಸವನ್ನು ಬೆಳೆಸುವುದು ಓದು ಅಭಿಯಾನದ ಉದ್ದೇಶವಾಗಿದೆ. ಮಕ್ಕಳಲ್ಲಿ ಗ್ರಹಿಕೆ ಸಾಮರ್ಥ್ಯ ಹಾಗೂ ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಪುಸ್ತಕಗಳ ಓದು ಮಹತ್ವದ ಪಾತ್ರವಹಿಸುತ್ತವೆ. ಓದುವ ಅಭಿಯಾನದ ಅವಧಿಯು ಸೆಪ್ಟೆಂಬರ್ 3 ರಿಂದ18 ರವರೆಗೆ ಮತ್ತು ಸೆಪ್ಟೆಂಬರ್ 26 ರಿಂದ 30, 2024 ರವರೆಗೆ ನಡೆಯಲಿದೆ ಎಂದರು.

ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಅರ್ಧ ತಾಸು ಓದುವಿಕೆಯಲ್ಲಿ ತೊಡಗಿಸಲಾಯಿತು. ಶಿಕ್ಷಕರು ಸಹ ವಿದ್ಯಾರ್ಥಿಗಳೊಂದಿಗೆ ಓದಿದರು. ತಮಗಿಷ್ಟವಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದುವ ಅವಕಾಶದಲ್ಲಿ ಮಕ್ಕಳು ಸಂತೋಷದಿಂದ ಸಕ್ರಿಯವಾಗಿ ತೊಡಗಿಸಿಕೊಂಡರು. ಶಾಲಾ ಮುಖ್ಯಶಿಕ್ಷಕರು, ಶಿಕ್ಷಕರು ಇದ್ದರು.

‌ಮಕ್ಕಳಲ್ಲಿ ಓದುವ ಹವ್ಯಾಸ ಪುಷ್ಟೀಕರಿಸಲಿದೆ. ಏಕಾಗ್ರತೆ ಮತ್ತು ನೆನಪಿನ ಶಕ್ತಿ ಇಮ್ಮಡಿಗೊಳ್ಳಲಿದೆ. ಪುಸ್ತಕದ ಓದು ಮೊಬೈಲ್‌ ಬದಲಿಗೆ ಪುಸ್ತಕ ಓದಿನತ್ತ ಮಕ್ಕಳನ್ನು ಆಕರ್ಷಿಸಲು ಮತ್ತು ಪ್ರತಿ ಮಗುವಿನ ಸರ್ವತೋಮುಖ ಏಳ್ಗಿಗೆಗೆ  ರೀಡ್‌ ಎ ಥಾನ್‌ ಸಹಕಾರಿಯಾಗಲಿದೆ.

  • ರೇಖಾ, ಜಿಲ್ಲಾ ಸಂಯೋಜಕಿ.

 

 

ಜಾಹೀರಾತು
error: Content is protected !!