September 14, 2024

Hampi times

Kannada News Portal from Vijayanagara

ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಅನಿವಾರ್ಯ: ಯಮುನಪ್ಪ ಎಂ.ಜಿ

https://youtu.be/NHc6OMSu0K4?si=SI_K4goOPEgwo6h2

 

 

 

ಹಂಪಿ ಟೈಮ್ಸ್‌ ಹೊಸಪೇಟೆ
ಪ್ರಸ್ತುತ ಸ್ಪರ್ಧಾತ್ಮಕ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದೆ ಎಂದು ಮರಬ್ಬಿಹಾಳ್ ಗ್ರಾ.ಪಂ ಸದಸ್ಯ ಯಮುನಪ್ಪ ಎಂ.ಜಿ ಹೇಳಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರ ಕೆರೆ ಗ್ರಾಮದಲ್ಲಿ ಮಂಗಳವಾರ ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಇವರ ಸಹಯೋಗದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಸಿ ಮಾತನಾಡಿದರು. ಗ್ರಾಮೀಣ ಭಾಗದ ಯುವಕ ಮತ್ತು ಯುವತಿಯರು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಿ – ಕಂಪ್ಯೂಟರ್ ಜ್ಞಾನ ಇಲ್ಲದೇ ಉದ್ಯೋಗ ಪಡೆಯು ವಲ್ಲಿ ವಿಫಲರಾಗುತ್ತಿದ್ದಾರೆ.
ನಾವು ಎಷ್ಟೇ ಶಿಕ್ಷಣ ಪಡೆದರೂ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೇ ಅನಕ್ಷರಸ್ಥರು ಇದ್ದ ಹಾಗೆ. ಹಾಗಾಗಿ ಉನ್ನತ ವಿದ್ಯಾಭ್ಯಾಸದ ಜತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಕಂಪ್ಯೂಟರ್ ಜ್ಞಾನ ಇದ್ದರೆ ಮಾತ್ರ ಉದ್ಯೋಗವಕಾಶಗಳು ಲಭ್ಯವಾಗುತ್ತವೆ ಇಲ್ಲವಾದರೆ ಉದ್ಯೋಗದಿಂದ ನಾವು ವಂಚಿತರಾಗುತ್ತೇವೆ.  ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ತೆರಳಿ ಹಣ ಕೊಟ್ಟು ಕಂಪ್ಯೂಟರ್ ಶಿಕ್ಷಣ ಪಡೆಯುವುದು ಬಡವರಿಗೆ ಕಷ್ಟವಾಗುತ್ತದೆ, ಈ ನಿಟ್ಟಿನಲ್ಲಿ ಬಸ್ ಸೌಲಭ್ಯ ಇಲ್ಲದೇ ನಮ್ಮೂರು ನಾರಾಯಣದೇವರ ಕೆರೆಗೆ ವಿದ್ಯಾರ್ಥಿಗಳಿದ್ದಲ್ಲಿಗೆ ತರಬೇತಿ ನೀಡುತ್ತಿರುವ  ಎಸ್.ಎಲ್.ಆರ್ ಮೆಟಾಲಿಕ್ಸ್ ಮತ್ತು ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ (ರಿ) ಸಂಸ್ಥೆಯ ಕಾರ್ಯ ಶ್ಲಾಘನೀಯ.
 ಗ್ರಾಮದ ಮುಖಂಡ ನಾಗಪ್ಪ ಮಾತನಾಡಿ, ನಮ್ಮೂರು ಬಸ್ ಸೌಲಭ್ಯದಿಂದ ವಂಚಿತವಾಗಿದೆ ಇಂತಹ ಹಳ್ಳಿಗೆ ಬಂದು ಕಂಪ್ಯೂಟರ್ ಶಿಕ್ಷಣ ನೀಡಿರುವುದು ನಿಜವಾಗಿಯೂ ಇದು ಶ್ಲಾಘನೀಯ ಕಾರ್ಯವಾಗಿದೆ.
ಯಷ್ಟೋ ಯುವಕ ಯುವತಿಯರು ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿ ಪಡೆದಿದ್ದರು ಕಂಪ್ಯೂಟರ್ ಶಿಕ್ಷಣ ಪಡೆದಿರಲಿಲ್ಲ ಈಗ ನಮ್ಮ ಗ್ರಾಮಕ್ಕೆ ಕಂಪ್ಯೂಟರ್ ತರಬೇತಿ ನೀಡಿದ್ದರಿಂದ ಅವರು ಕೂಡ ಕಂಪ್ಯೂಟರ್ ಶಿಕ್ಷಣ ಪಡೆದುಕೊಂಡಿದ್ದಾರೆ.
ಇಂತಹ ಕೆಲಸಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು.
ಗೋಪಿಕಾ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ. ಯು,  ಕುಮಾರಿ ವೀಣಾ ನಿರ್ವಹಸಿದರು.
ಈ ಸಂದರ್ಭದಲ್ಲಿ ಎಸ್.ಎಲ್.ಆರ್ ಕಂಪನಿಯ ಸಿಎಸ್.ಆರ್ ವಿಭಾಗದ ಮಾರುತಿ, ಐಟಿ ವಿಭಾಗದ ಗೋಕುಲ, ಗ್ರಾಮದ ಮುಖಂಡರಾದ ರವಿಕುಮಾರ್, ಕೆಂಗಪ್ಪ, ಸಂಸ್ಥೆಯ ಸಿಬ್ಬಂದಿಗಳಾದ ಭಾಗ್ಯ, ಇಂದಿರಾ ವಿದ್ಯಾರ್ಥಿಗಳಾದ ಪವಿತ್ರ, ಹೇಮಾ, ಉಮಾ ರಮೀಜಾ ಹಾಗೂ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!