https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ಶತಮಾನ ಪೂರೈಸಿದ ಹೊಸಪೇಟೆಯ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ರೈತ್ನಸ್ನೇಹಿಯಾಗಿದ್ದು, ಕಳೆದ 48 ವರ್ಷಗಳಿಂದ ಲಾಭದಾಯಕವಾಗಿ ಮುನ್ನಡೆಯುತ್ತಾ ಬಂದಿದೆ. 2023-24ನೇ ಸಾಲಿನಲ್ಲಿ ರೂ.12.53 ಕೋಟಿ ರೂ. ಲಾಭ ಗಳಿಸಿದೆ. ಬ್ಯಾಂಕ್ ಸದೃಢ ಮತ್ತು ಸಶಕ್ತವಾಗಿದೆ ಎಂದು ನಬಾರ್ಡ್ ಪರಿಗಣಿಸಿ ಬ್ಯಾಂಕಿಗೆ `ಎ’ ಶ್ರೇಣಿ ನೀಡಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ತಿಳಿಸಿದರು.
ನಗರದ ಶ್ರೀ ವೆಂಕಟೇಶ್ವರ ಕಲ್ಯಾಣಮಂಟಪದಲ್ಲಿ ಶನಿವಾರ ಜರುಗಿದ ಬ್ಯಾಂಕಿನ 102ನೇ ಸರ್ವಸದಸ್ಯರ ಸಾಮಾನ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದ 21 ಡಿಸಿಸಿ ಬ್ಯಾಂಕುಗಳ ಪೈಕಿ ಯುಪಿಐ ಸೇವೆ ಪ್ರಾರಂಭಿಸಿದ ಮೊದಲ ಡಿಸಿಸಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಹೊಸಪೇಟೆಯ ಬಿಡಿಸಿಸಿ ಬ್ಯಾಂಕ್ ಪಾತ್ರವಾಗಿದೆ. ಬ್ಯಾಂಕ್ 650 ಸಹಕಾರಿಗಳ ಸದಸ್ಯತ್ವ ಹೊಂದಿದೆ. ರೂ.127.86 ಕೋಟಿ ಷೇರು ಬಂಡವಾಳ, ರೂ.158.62 ಕೋಟಿ ಕಾಯ್ದಿಟ್ಟ ನಿಧಿ ಸೇರಿದಂತೆ ರೂ.286.49 ಕೋಟಿ ಸ್ವಂತ ಬಂಡವಾಳ ಹೊಂದಿದೆ. ಆರ್‌ಬಿಐ ಪ್ರಕಾರ್ ಸಿಆರ್‌ಎಆರ್ ಶೇ.9ಕ್ಕಿಂತ ಹೆಚ್ಚು ಇರಬೇಕೆಂದಿದ್ದು, ಬ್ಯಾಂಕಿನ ಸಿಆರ್‌ಎಆರ್ ಶೇ.12.80 ಹೊಂದಿದ್ದು, ಸುಸ್ಥಿರ ಬಂಡವಾಳ ಪ್ರಮಾಣ ಹೊಂದಿರುತ್ತದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ 11 ತಾಲೂಕುಗಳ ಕಾರ್ಯವ್ಯಾಪ್ತಿಯಲ್ಲಿ 33 ಶಾಖೆಗಳನ್ನು ಹೊಂದಿದ್ದು, 291 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ನಿರ್ದೇಶಕರ ಮತ್ತು ಸಹಕಾರಿಗಳ ಸಹಕಾರ, ಸಿಬ್ಬಂದಿಗಳ ಪರಿಶ್ರಮ ಹಾಗೂ ಸಾಲಗಾರರು ಸಕಾಲದೊಳಗೆ ಸಾಲ ಮರುಪಾವತಿ ಮಾಡುತ್ತಿರುವುದರಿಂದಾಗಿ ಬ್ಯಾಂಕ್ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ.
ಠೇವಣಿ ಸಂಗ್ರಹ: ಸಹಕಾರ ಸಂಘಗಳಿಂದ 257.19 ಕೋಟಿ ರೂ ಠೇವಣಿ ಮತ್ತು ವ್ಯಕ್ತಿಗತ ಠೇವಣಿ 1306.71 ಕೋಟಿ ರೂ ಸಏರಿದಂತೆ ಒಟ್ಟು 1563.90 ಕೋಟಿ ರೂ ಠೇವಣಿ ಹೊಂದಿದೆ.
ಹೂಡಿಕೆಗಳು: ರಿಸರ್ವ್ ಬ್ಯಾಂಕಿನ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದ್ದು, ಸರ್ಕಾರದ ಭದ್ರತೆಗಳಲ್ಲಿ ರೂ.272.84 ಕೋಟಿ ಎಸ್‌ಎಲ್‌ಆರ್ ಹೂಡಿಕೆಗಳು ಸೇರಿದಂತೆ ಅಪೆಕ್ಸ್ ಬ್ಯಾಂಕ್ ಮತ್ತು ಇತರೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಒಟ್ಟೂ ರೂ.643.05 ಕೋಟಿ ರೂಗಳನ್ನು ಹೂಡಿಕೆ ಮಾಡುವುದರ ಮೂಲಕ ಠೇವಣಿದಾರರ ಹಿತ ಕಾಪಾಡಿಕೊಂಡು ಸಾಕಷ್ಟು ಆರ್ಥಿಕ ಸದೃಢತೆಯನ್ನು ಹೊಂದಿರುತ್ತದೆ.
ಸಾಲ ಮತ್ತು ಮುಂಗಡ: ಜಿಲ್ಲೆಯ 1,15,365 ರೈತರಿಗೆ ಶೂನ್ಯ ಬಡ್ಡಿ ದರದ ಕೆ.ಸಿ.ಸಿ. ಸಾಲ ರೂ.1074.08 ಕೋಟಿ. ಮತ್ತು ಶೇ.3 ಬಡ್ಡಿದರದಲ್ಲಿ ಟ್ರಾಕ್ಟರ್, ಪೈಪ್‌ಲೈನ್, ಭೂಅಭಿವೃದ್ಧಿ ಮತ್ತು ಹೈನುಗಾರಿಕೆಗೆ ರೂ.65.62 ಕೋಟಿ ಸಾಲ ನೀಡಲಾಗಿದೆ. ಕೃಷಿ ಸಾಲದ ಪ್ರಮಾಣ ಶೇ.66 ರಷ್ಟಿದ್ದು, ಕೃಷಿಯೇತರ ಸಾಲ ಶೇ.34ರಷ್ಟಿದೆ. ನಬಾರ್ಡ್ ಸೂಚನೆಯಂತೆ ಕೃಷಿ ಮತ್ತು ಕೃಷಿಯೇತರ ಸಾಲವನ್ನು ಶೇ.50:50 ಇರುವಂತೆ ಕ್ರಮವಹಿಸಲಾಗುವುದು.
ಸಾಲ ವಸೂತಿ & ಎನ್‌ಪಿಎ ನಿರ್ವಹಣೆ: ಬ್ಯಾಂಕಿನಿಂದ ನೀಡಿದ ಸಾಲಗಳು ಸುಸ್ತಿಯಾಗದಂತೆ ಹಾಗೂ ಎನ್‌ಪಿಎ ಆಗದಂತೆ ತೀವ್ರ ನಿಗಾವಹಿಸಲಾಗುತ್ತಿದೆ. ಸಾಲ ವಸೂಲಾತಿ ಶೇ.94.56 ರಷ್ಟಿರುತ್ತದೆ. ಆರ್‌ಬಿಐ ನಿಯಮಗಳ ಪ್ರಕಾರ ಸಿಆರ್‌ಎಆರ್ ಶೇ.9 ಇರಬೇಕಿದ್ದು, ಪ್ರಸ್ತುತ ಶೇ.12.80 ರಷ್ಟಿದ್ದು ಬ್ಯಾಂಕ್ ಸಧೃಡತೆಯನ್ನು ಖಚಿತಪಡಿಸಿದೆ. ಸಾಲದ ಮುಂಗಡಗಳ ನಿರ್ವಹಣೆಯೂ ಉತ್ತಮವಾಗಿದೆ.
ಬ್ಯಾಂಕಿನ ಸೇವೆಗಳು: ಎರಡು ಮೊಬೈಲ್ ವ್ಯಾನ್‌ಗಳ ಮೂಲಕ ಗ್ರಾಮೀಣ ಭಾಗದ ಗ್ರಾಹಕರಿಗೂ ಸೇವೆ ನೀಡಲಾಗುತ್ತಿದೆ. ಖಜಿಟಲ್ ಬಾಂಕಿಂಗ್ ಬಳಕೆ ಮತ್ತು ಉಪಯೋಗದ ಕುರಿತು ಎಚ್ಚರಿಕೆ ಕ್ರಮಗಳ ಅನುಸರಿಸುವ ಕುರಿತು 800 ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ರಾಜ್ಯದಲ್ಲಿಯೇ ಮಾದರಿಯಾದ ಆನ್‌ಲೈನ್ ಡ್ರಾಯಲ್ ವ್ಯವಸ್ಥೆಯ ಜಾರಿಗೊಳಿಸಲಾಗಿದೆ. ಇದರಿಂದ ರೈತರ ಉಳಿತಾಯ ಖಾತೆಗೆ ಕೆಸಿಸಿ ಸಾಲದ ಮೊತ್ತ ಜಮಾ ಆಗುತ್ತಿದೆ. 4624 ಸ್ವಸಹಾಯ ಗುಂಪುಗಳನ್ನು ರಚಿಸುವುದರ ಮೂಲಕ ಗ್ರಾಮೀಣ ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲಾಗುತ್ತಿದೆ.
ಭವಿಷ್ಯದ ಯೋಜನೆಗಳು: ರೂ.10 ಲಕ್ಷಗಳವರೆಗೆ ಬ್ಯಾಂಕಿನ ಮೂಲಕ ನೇರವಾಗಿ ರೈತರಿಗೆ ಸ್ವಾಭಿಮಾನಿ ಕಿಸಾನ್ ಕ್ರೆಡಿಟ್ ಸಾಲ ನೀಡುವುದು., ಎಲ್ಲಾ ಪ್ರಾ.ಕೃ.ಪ.ಸಹಕಾರ ಸಂಘಗಳನ್ನು ಗಣಕೀಕರಣಗೊಳಿಸಿ, ಆನ್‌ಲೈನ್ ಮೂಲಕ ಕೆಸಿಸಿ ಸಾಲ ನೀಡುವುದು., ಅವಳಿ ಜಿಲ್ಲೆಗಳಲ್ಲಿ 14 ಹೊಸ ಶಾಖೆಗಳನ್ನು ಪ್ರಾರಂಭಿಸಲು ಆರ್‌ಬಿಐ ಪರವಾನಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ., ಬ್ಯಾಂಕಿನ ಶಾಖೆಗಳಿಲ್ಲದ ಪ್ರದೇಶಗಳಲ್ಲಿ ಆಫ್‌ಸೈಟ್ ಎಟಿಎಂ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಐ.ದಾರುಕೇಶ್, ನಿರ್ದೇಶಕರಾದ ಲತಾ ಮಲ್ಲಿಕಾರ್ಜುನ, ಚೊಕ್ಕಬಸವನಗೌಡ, ಎಲ್.ಎಸ್.ಆನಂದ, ಚಿದಾನಂದ ಐಗೋಳ, ಪಿ.ಮೂಕಯ್ಯಸ್ವಾಮಿ, ವೈ.ಅಣ್ಣಪ್ಪ, ಬಿ.ನವೀನ್‌ಕುಮಾರರೆಡ್ಡಿ, ಹುಲುಗಪ್ಪ ನಾಯಕರ, ಜೆ.ಎಂ.ಶಿವಪ್ರಸಾದ್, ವಿ.ಆರ್.ಸಂದೀಪ್ ಸಿಂಗ್, ಪಿ.ವಿಶ್ವನಾಥ, ಸರ್ಕಾರದ ಪ್ರತಿನಿಧ ಟಿ.ಎಂ.ಚAದ್ರಶೇಖರಯ್ಯ, ಸಹಕಾರ ಸಂಘಗಳ ಉಪನಿಬಂಧಕ ಬೇರುಂಡದಾರ ಎ.ಕೇಸರಿಮಠ ಇತರರು ಇದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ