September 14, 2024

Hampi times

Kannada News Portal from Vijayanagara

ಬೆಳೆಹಾನಿ ಪರಿಹಾರ ಪಾವತಿಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಸೂಚನೆ

https://youtu.be/NHc6OMSu0K4?si=SI_K4goOPEgwo6h2

 

 

 

ಹಂಪಿ ಟೈಮ್ಸ್ ಹೊಸಪೇಟೆ 
ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನಿಯಮಾನುಸಾರ ಪಾವತಿಸಲು ಕಾರ್ಯವಿಧಾನ ಹಾಗೂ ಷರತ್ತು ನಿಬಂಧನೆಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರವು ನಿರ್ಧರಿಸಿ ಆದೇಶಿಸಿರುವುದನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ  ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
2024-25 ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿಗೆ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು 2023ರ ಜುಲೈ 11ರಂದು ಹೊರಡಿಸಿರುವ ಮಾರ್ಗಸೂಚಿಗಳನ್ವಯ ನಿಯಮಾನುಸಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸಬುದಾದ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಪರಿಹಾರ ತಂತ್ರಾಂಶದ ಮುಖಾಂತರ ಮಾತ್ರವೇ ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಅರ್ಹತೆ ಅನುಗುಣವಾಗಿ ಪಾವತಿಸಲು ತೀರ್ಮಾನಿಸಿ, ಅದರಂತೆ ಸ್ಥಳಿಯವಾಗಿ ಉಂಟಾಗುವ ಬೆಳೆ ಹಾನಿಗಳಿಗೆ ಪರಿಹಾರವನ್ನು ನಿಯಮಾನುಸಾರ ಪಾವತಿಸಲು ಕಾರ್ಯವಿಧಾನ ಹಾಗೂ ಷರತ್ತು ಮತ್ತು ನಿಬಂಧನೆಗಳನ್ನು ಸರ್ಕಾರವು ನಿಗಧಿಪಡಿಸಿದೆ.
ಮುಂದುವರೆದು ಸರ್ಕಾರವು 2024ರ ಆಗಸ್ಟ್ 16ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ ನಿಯಮಗಳಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಹೊಸಪೇಟೆ ಮತ್ತು ಹರಪನಹಳ್ಳಿ ಸಹಾಯಕ ಆಯುಕ್ತರು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಮತ್ತು ವಿಜಯನಗರ ಜಿಲ್ಲೆಯ ಎಲ್ಲ ತಾಲೂಕಿನ ತಹಸೀಲ್ದಾರಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

 

 

ಜಾಹೀರಾತು
error: Content is protected !!