https://youtu.be/NHc6OMSu0K4?si=SI_K4goOPEgwo6h2
ಜಿ.ವಿ.ಸುಬ್ಬರಾವ್.
“ಏಳುಪದಗಳ ವಿಶೇಷ”
ಡಣಾಯಕನಕೆರೆ ಎಂಬ ಗ್ರಾಮವೆ ಏಳು ಪದಗಳ ಒ೦ದುಗ್ರಾಮವಾಗಿದ್ದರೂ, ಆ ಒಂದು ಪದದಲ್ಲೇ ಏಳುಗ್ರಾಮಗಳು ಸಮ್ಮಿಳಿತಗೊಂಡಿವೆ. ಇನ್ನೂ ಡಣಾಯಕನ ಕರೆಯುಕೂಡ ಏಳುಗ್ರಾಮಗಳ ಸುಮಾರು ಏಳುನೂರು ಕಾರ್ಮಿಕರು (ಒಡ್ಡರು), ಏಳುನೂರ ವರ್ಷಗಳ ಹಿಂದೆ ಕೆರೆಯನ್ನು ನಿರ್ಮಿಸಿದ ಎನ್ನುವ ಪ್ರತೀಕವಿದೆ. ಈ ಕೆರೆಗೆ ಏಳುಮದಗ, ಎರಡುಕೋಡಿ ಹಾಗೂ ಏಳೂರು ಕೆರೆಗಳನೀರು ಈ ಕೆರೆಗೆ ಹರಿದು ಬರುವುದು ಒಂದು ವಿಶೇಷ.
ಈ ಕೆರೆಯನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ದನಕಾಯುವ ಮುದ್ದ ಎಂಬುವವನು ನಿರ್ಮಿಸಿದ ಎಂಬುದು ಐತಿಹ್ಯ.
“ಸ್ವಪ್ನದಲ್ಲಿ ಸರ್ಪ”
ದನಗಾಯಿ ಮುದ್ದನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡ ಸರ್ಪದಿಂದಲೆ ಡಣಾಯಕನಕರೆ ನಿರ್ಮಿಸಿದ, ಸ್ವಪ್ನದಲ್ಲಿ ಕಾಣಿಸಿಕೊಂಡ ಸರ್ಪವು ಇಲ್ಲೊಂದು ಕೆರೆ ಕಟ್ಟು, ನಿನಗೆ ಏಳು ಕೊಪ್ಪರಿಕೆ ಹೊನ್ನು ಕೂಡ ಸಿಗುತ್ತದೆ,ಅದರಿಂದ ನೀನು ಕೆರೆ ಕಟ್ಟು ಎಂದು ಸ್ವಪ್ನವಾಗುತ್ತದೆ. ಅದರಂತೆಯೇ ಮರುದಿನ ತನ್ನನ್ನು ಹಿ೦ಬಾಲಿಸಲು ಹಾಗೂ ಹಿ೦ದಿರುಗಿ ನೋಡದಂತೆಯೂ ಅಪ್ಪಣೆ ನೀಡಿದಂತೆ, ಮುದ್ದನು ಸರ್ಪವನ್ನು ಹಿಂಬಾಲಿಸುತ್ತಾ ಒಂದೊಂದು ಕಲ್ಲನ್ನು ಇಡುತ್ತಾ ಸರ್ಪದ ಜತೆ ಸಾಗುತ್ತಾನೆ, ಮುಂದೆ ಸಾಗುತ್ತಾ ಒಮ್ಮೆ ಹಿ೦ದಿರುಗಿ ನೋಡಿದ ಸರ್ಪ ಮಾಯವಾಯಿತು.ಮುದ್ದನಿಗೆ ಏಳುಕೊಪ್ಪರಿಕೆ ಹೊನ್ನುದೊರೆಯಿತು. ತಾನುಸಾಗಿದ ಮಾರ್ಗದ ಹಿಂಬದಿಯಿಂದ ಕೆರೆಯನ್ನು ನಿರ್ಮಿಸಿದ
ಇದರಿ೦ದಲೆ ಏನೋ ಕೆರೆಯ ಮೇಲ್ಮೈ ನೇರವಾಗಿರದೆ, ಸರ್ಪದ ಹಾದಿಯ ಮಾದರಿಯಲ್ಲಿದೆ.
“ಕನ್ಯಾವೀರಾಂಬ”
ಕನ್ಯಾವೀರಾಂಬ ಡಣಾಯಕನಕೆರೆಗೆ ಏಳುಬಲಿಗಳಾಗಿವೆ ಅದರಲ್ಲಿ ರಾಂಬಳೆ ಕೆರೆಯ ಕೊನೆಯ ಬಲಿಯೂ ಕೂಡ ಆಗಿದ್ದಾಳೆಂಬ ಐತಿಹ್ಯವಿದೆ ಕೆರೆ ಸಂಪೂರ್ಣವಾಗಿನಿರ್ಮಿಸಲಾಯಿತಾದರೂ, ಕೆರೆಯ ಒಂದು ಭಾಗಮಾತ್ರ ಕುಸಿಯುತ್ತಲೆ (ಬೀಳುವುದು) ಇತ್ತು. ಅದನ್ನು ನಿರ್ಮಿಸಿದಂತೆ ಬೀಳುತ್ತಲೆ ಇತ್ತು, ಇದರಿಂದ ಚಿಂತಾಕ್ರಾಂತನಾದ ಮುದ್ದನಿಗೆ ಈ ಸ್ಥಳದಲ್ಲೊಂದು ಬಲಿಯಾಗ ದಿರುವುದು ಮನವರಿಕೆಯಾಗಿರುವ ವೇಳೆ, ಅಲ್ಲಿನ ಬ್ರಾಹ್ಮಣ( ಜೋಷಿ) ಮನೆತನದ ಬಾಲೆ ಕನ್ಯಾವೀರಾಂಬ ತಾನೆ ಸ್ವಚ್ಚೆಯಿಂದಲೆ ಕೆರೆಗೆ ಬಲಿಯಾಗಲು ಮು೦ದಾದಳೆಂದು ಶ್ರಾವಣಮಾಸದ ಎರಡನೇ ಶನಿವಾರದಂದು ಬಾಲೆ ಕನ್ಯಾವೀರಾಂಬಳನ್ನು ಕೆರೆಯ ಒಂದು ಭಾಗದಲ್ಲಿ ನಿರ್ಮಿಸಿದ ಸಣ್ಣ ಗೂಡಿನ ಮಾದರಿಯಲ್ಲಿ ಬಾಲೆ ಕನ್ಯಾವೀರಾಂಬಳು ಮಕ್ಕಳ ಆಟಿಕೆಗಳೊಂದಿಗೆ ಪ್ರವೇಶ ಮಾಡುತ್ತಾಳೆ.ಬಲಿಯನಂತರ ಕೆರೆಯ ಕಟ್ಟಡ ಬೀಳುವುದು ನಿ೦ತಿದೆ.ಅ೦ದಿನಿ೦ದ ಪ್ರತಿವರ್ಷ ಶ್ರಾವಣಮಾಸದ ಎರಡನೇಶನಿವಾರ ಕನ್ನೀರಮ್ಮನ ಶ್ರದ್ದಾ-ಭಕ್ತಿಗಳಿಂದಜಾತ್ರೆ ನಡೆಯುತ್ತಿದೆ.
ಡಣಾಯಕನಕೆರೆಗೆ ಊರಿನ ತಳವಾರನೂ ಹಾರವಾಗಿ,ಗ್ರಾಮಸ್ಥರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದ್ದಾನೆ.ಕೆರೆತುಂಬಿ ಇನ್ನೇನು ಒಡೆದೆ ಹೋಗುತ್ತದೆ ಎನ್ನುವಷ್ಟರಮಟ್ಟಿಗೆ ಬೋರ್ಗರೆಯುತ್ತಿರುವುದನ್ನು ತಡೆಯಲು, ಕನ್ನೀರಮ್ಮನ ಮೊರೆಹೋಗುತ್ತಾನೆ.ನೀ ಬರುವವರೆಗೂ ನಾನು ಕೆರೆಯನ್ನು ಕಾಯುವೆ,ಊರಿನವರಿಗೆ ವಿಷಯ ತಿಳಿಸಲು ಕಳುಹಿಸಿಕೊಟ್ಟಳು,ಅದರಂತೆ ತಳವಾರ ಊರಿನವರಿಗೆ ವಿಷಯ ಕೆರೆಯ ಕುರಿತು ಮಾಹಿತಿ ನೀಡಿದಾಕ್ಷಣ ಅವರಿಗೆ ಹೊಳೆದಿದ್ದು,ಇನ್ನೊಂದು ನರಬಲಿಯಾಗದಿರುವುದು,ಅದರಂತೆಯೇ ತಳವಾರನನ್ನು ಊರ ಅಗಸಿಬಾಗಿಲಲಿ ನರಬಲಿಕೊಡುತ್ತಾರೆ.ರುಂಡ ಒಂದೆಡೆ, ಮುಂಡ ಒಂದೆಡೆ ಕಲ್ಲಾಗಿ ಇಂದಿಗೂ ಕೆರಯ ಹಾರದಲಿ ತಳವಾರನೂ ಉಳಿದುಕೊಂಡಿದ್ದಾನೆ.
“ಇಷ್ಟಾರ್ಥ ಸಿದ್ಧಿ”
ಕನ್ನೀರಮ್ಮಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯದೈವವಾಗಿದ್ದಾಳೆ . ಹರಕೆಹೊತ್ತ ಭಕ್ತರ ಕೋರಿಕೆಗಳನ್ನು ದೇವಿ ಈಡೇರಿಸಿರುವ ಕುರಿತು ಕೆಲಭಕ್ತರು ತಮ್ಮ ಅನುಭವಗಳನ್ನು ಹೇಳುತ್ತಾರೆ.ಅಲ್ಲದೇ ದೇವಿಯ ಅನುಗ್ರಹವಾದವರಿಗೆ ಇಷ್ಟಾರ್ಥಗಳು ಸಿದ್ದಿಸಿವೆ. – “ಕನ್ನೀರಮ್ಮ ಕೇಲು”
“ಡಣಾಯಕನಕೆರೆ”
ಐತಿಹಾಸಿಕ ಹಿನ್ನೆಲೆಯುಳ್ಳ ಈಕೆರೆಯು ಹದಿನಾರನೆ ಶತಮಾನದಲ್ಲಿ ನಿರ್ಮಿಸಲಾಗಿದೆ. ಕೆರೆಯು ನಾಲ್ಕುಎಕರೆ ವ್ಯಾಪ್ತಿ ವಿಸ್ತೀರ್ಣ ಹೊಂದಿದೆ ಸುಮಾರು ಆರುನೂರು ಎಕರೆ ಕೃಷಿಜಮೀನು ಹೊಂದಿದ್ದ ಈಗ ಅದು ಸಾವಿರಾರು ಎಕರೆಗಳಷ್ಟು ವಿಸ್ತಾರವಾಗಿದೆ. ಅಲ್ಲದೆ ಕೆರೆಯಲ್ಲಿ ಸಾಕಷ್ಟು ಹೂಳುತುಂಬಿದೆ. ಇದರಿಂದ ಕೆರೆಯ ನೀರಿನ ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿದೆ.ಮಳೆಯು ಕಡಿಮೆಯಾಗಿದ್ದು,ನೀರಿನ ಸಂಗ್ರಹ ಸಾಮರ್ಥ್ಯಕುಸಿದಿದೆ.ಇತ್ತೀಚಿನ ಹಲವರ್ಷಗಳಿಂದ ಸರ್ಕಾರವು ತುಂಗಭದ್ರಾ ನದಿಯ ಹಿನ್ನೀರನ್ನು ಕೆರೆಗೆ ತುಂಬಿಸುಯೋಜನೆ ಅನುಷ್ಠಾನ ಗೊಳಿಸಿದೆ.ಐತಿಹಾಸಿಕ ಕೆರೆಯ ಭಾಗವನ್ನು ಪ್ರವಾಸಿತಾಣವಾಗಿಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ಹೊಂದುವುದು ಅವಶ್ಯಕ ಎಂಬುದು ಪ್ರಜ್ಞಾವಂತರ ಅಂಬೋಣ.
More Stories
40 ಕಿ.ಮೀ ಉದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : DC ಎಂ.ಎಸ್.ದಿವಾಕರ್
ಎಸ್.ಸಿ., ಎಸ್.ಟಿ ಕಲ್ಯಾಣ ಸಮಿತಿ ಸಭೆಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಿ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ
ಭಕ್ತರ ವಿಘ್ನ ಕಳೆಯಲು ಮನೆ ಮನೆಗೆ ಬಾ ಏಕದಂತ..!”