https://youtu.be/NHc6OMSu0K4?si=SI_K4goOPEgwo6h2
ಆತಂಕ ಬೇಡ ಮುನ್ನೆಚ್ಚರಿಕೆ ಅಗತ್ಯ: ಡಿಸಿ ದಿವಾಕರ
ಹಂಪಿ ಟೈಮ್ಸ್ ಹೊಸಪೇಟೆ
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಂಡಿ ಶನಿವಾರ ರಾತ್ರಿ ಕಳಚಿರುವುದರಿಂದ 60 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದ್ದು, ಹಂತ ಹಂತವಾಗಿ ಹೆಚ್ಚಳಗೊಳ್ಳಲಿದೆ. ನದಿಪಾತ್ರದ ಜನರು ಆತಂಕ ಪಡದೇ, ಮುನ್ನೆಚ್ಚರಿಕೆವಹಿಸಬೇಕು. ಅಣೆಕಟ್ಟು ವೀಕ್ಷಣೆಗೆ ಹೆಚ್ಚನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಜನರ ಮತ್ತು ಜಲಾಶಯದ ಭದ್ರತೆ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮವಹಿಸುವುದು ಅವಶ್ಯಕವಾಗಿದೆ. ಹಾಗಾಗಿ ತುಂಗಭದ್ರಾ ಅಣೆಕಟ್ಟಿನ ಗೇಟ್‌ಗಳ ಹತ್ತಿರ ಹಾಗೂ ಅಣೆಕಟ್ಟಿನ ಸುತ್ತಮುತ್ತ ಇರುವ ಸೇತುವೆಗಳ ವ್ಯಾಪ್ತಿ ಪ್ರದೇಶದಲ್ಲಿ ಸಾರ್ವಜನಿಕರು ಸುಳಿಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಆದೇಶ ಹೊರಡಿಸಿದ್ದಾರೆ.
ನಿಬಂಧನೆಗಳು:
ನಿಷೇಧಿತ ಪ್ರದೇಶದಲ್ಲಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ
ತುಂಗಭದ್ರಾ ಜಲಾಶಯದಲ್ಲಿ ಇಳಿಯುವುದು, ಸೇತುವೆಗಳ ಮೇಲೆ ನಿಂತು ಫೋಟೊ ತೆಗೆಯುವುದನ್ನು ನಿರ್ಬಂಧಿಸಲಾಗಿದೆ.
ಡ್ಯಾಂನ ಗೇಟುಗಳು ಮತ್ತು ಸೇತುವೆ ಮೇಲೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ
ಗಣ್ಯಮಾನ್ಯರು ಜಲಾಶಯಕ್ಕೆ ಬಾಗಗಿನ ಸಮರ್ಪಣೆ ಮಾಡುವ ಸಂದರ್ಭ ಅನ್ವಯಿಸುವುದಿಲ್ಲ ಮತ್ತು ಬಾಗಿನ ಬಿಡುವಾಗ ನೀರಿಗೆ ಇಳಿಯುವುದು, ಈಜಾಡುವುದು ನಿಷೇಧಿಸಲಾಗಿದೆ.
ಆಯುಧ, ಶಸ್ತ್ರಾಸ್ತ್ರ ಮತ್ತು ಮಾರಕಾಸ್ತ್ರಗಳನ್ನು ತೆಗೆದುಕೊಂಡು ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಯಾವುದೇ ರೀತಿಯ ಸರ್ಕಾರಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡತಕ್ಕದಲ್ಲ.
ಕಾನೂನು ಸುವ್ಯವಸ್ಥೆಗೆ ಭಂಗತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗಿದಲ್ಲಿ ಅವರು ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ಎಚ್ಚರಿಸಿದ್ದಾರೆ.
More Stories
40 ಕಿ.ಮೀ ಉದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ : DC ಎಂ.ಎಸ್.ದಿವಾಕರ್
ಎಸ್.ಸಿ., ಎಸ್.ಟಿ ಕಲ್ಯಾಣ ಸಮಿತಿ ಸಭೆಗೆ ಸ್ಪಷ್ಟವಾಗಿ ಮಾಹಿತಿ ಒದಗಿಸಿ: ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ15 ಶಿಕ್ಷಕರು ಆಯ್ಕೆ