December 14, 2024

Hampi times

Kannada News Portal from Vijayanagara

ಅ.ಭಾ.ವೀರಶೈವ ಮಹಾಸಭಾ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಐ.ಸಂಗನ ಬಸಪ್ಪ, ಹೊಸಪೇಟೆ ತಾಲೂಕಧ್ಯಕ್ಷರಾಗಿ ಎಸ್.ಎಂ.ರವಿಕಾಂತ ಅವಿರೋಧ ಆಯ್ಕೆ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಅಖಿಲ ಭಾರತ ವೀರಶೈವ ಮಹಾಸಭಾ(ರ) ಬೆಂಗಳೂರು, ವಿಜಯನಗರ ಜಿಲ್ಲಾ ಘಟಕಕ್ಕೆ ಜರುಗಿದ ಚುನಾವಣೆಯಲ್ಲಿ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಬುಕ್ಕಸಾಗರದ ಐ.ಸಂಗನ ಬಸಪ್ಪ,, ಹೊಸಪೇಟೆ ತಾಲೂಕಧ್ಯಕ್ಷರಾಗಿ ಎಸ್.ಎಂ.ರವಿಕಾಂತ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಸೋಮವಾರ ಸಂಜೆ ಘೋಷಿಸಿದರು.

ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರು, ಜಿಲ್ಲಾ ಘಟಕದ ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ ನಿಗದಿಪಡಿಸಿದಂತೆ 30 ಸದಸ್ಯರು ಮಾತ್ರ ಕಣದಲ್ಲಿ ಉಳಿದಿದ್ದರಿಂದ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರು, ತಾಲೂಕು ಘಟಕದ ಕಾರ್ಯನಿರ್ವಾಹಕ ಸದಸ್ಯ ಸ್ಥಾನಕ್ಕೆ ನಿಗದಿಪಡಿಸಿದಂತೆ 20 ಸ್ಥಾನಗಳಿಗೆ ಸದಸ್ಯರು ಮಾತ್ರ ಕಣದಲ್ಲಿದ್ದರಿಂದ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ವಿಜಯನಗರ ಜಿಲ್ಲಾ ಘಟಕದ ಪದಾಧಿಕಾರಿಗಳು:

ಐ ಸಂಗನ ಬಸಪ್ಪ (ಅಧ್ಯಕ್ಷ), ಕಾರ್ಯನಿರ್ವಾಹಕ ಸದಸ್ಯರಾಗಿ ಪ್ರಕಾಶ ಕೋರಿ, ಪಿ.ಎಮ್.ಗುರುಬಸವರಾಜ, ಪ್ರತಾಪ ಜವಳಿ, ವಿಶ್ವನಾಥ ಗೊಗ್ಗ, ವಿಜಯ ಎಮ್.ಸಿಂದಗಿ, ಶಿವರುದ್ರಪ್ಪ ಮುಧೋಳ, ಎನ್.ಎಮ್.ಪಂಪಾಪತಿ, ಎಂ.ಮಂಜುನಾಥ, ಎಮ್.ಗುರುಸಿದ್ದನಗೌಡ, ಒ.ಎಮ್.ಮಲ್ಲಿಕಾರ್ಜುನ, ಟಿ.ಜಿ.ಎಮ್.ಕೊಟ್ರೇಶ, ಟಿಎಚ್.ಎಮ್.ಮಲ್ಲಿಕಾರ್ಜುನ, ಹೆಚ್.ಎಂ.ಮಧುರಚೆನ್ನ, ಕಲಿವೀರಪ್ಪ ಉದಾಸಿ, ಕೆ.ನಾಗರಾಜ, ಕೆ.ಎಸ್.ಮಂಜುನಾಥ, ಕೆ.ಚಂದ್ರಶೇಖರ, ಗುರುಸಿದ್ಧೇಶ ಎಚ್.ಕೋತಂಬ್ರಿ, ಗಡಿಗಿ ಕೃಷ್ಣಪ್ಪ, ಚೋಳರಾಜೇಂದ್ರ ಮೇಟಿ, ಗೀತಾ ಯಲಿಗಾರ, ಸುವರ್ಣ ಬಿ. ಸಿ.ಶಶಿಕಲಾ, ಅಕ್ಕಿ ಲಲತಾ, ಎಮ್.ವಿ.ರಾಧಾ, ಹೆಚ್.ಎಮ್.ಶೃತಿ, ಹೆಚ್.ಎಮ್.ಬಿಂದುಶ್ರೀ, ಕೆ.ಸುಮಾ, ಕೆ.ಅನ್ನಪೂರ್ಣ ಮತ್ತು ಡಿ.ಶಶಿಕಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾ ಹೊಸಪೇಟೆ ತಾಲೂಕು ಘಟಕದ ಪದಾಧಿಕಾರಿಗಳು:

ಎಸ್.ಎಂ.ರವಿಕಾಂತ (ಅಧ್ಯಕ್ಷ), ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎ.ಎಮ್.ಬಸವರಾಜ, ತಿಪ್ಪೇಸ್ವಾಮಿ ಅಂಗಡಿ, ಮಂಜುನಾಥ ಅಂಗಡಿ, ಕೆ.ಎಂ.ಮಹೇಶ, ಪಿ.ಉದ್ದಾನಯ್ಯ, ಎಮ್.ಎಮ್.ತಿಪ್ಪೇಸ್ವಾಮಿ, ಕೆ.ಹೇಮರೆಡ್ಡಿ, ಡಿ.ಸುರೇಶ್, ಸಿ.ಮಲ್ಲನಗೌಡ, ಹೆಚ್.ಶ್ರೀನಿವಾಸ, ಎಮ್.ಚನ್ನಬಸವರಾಜ್, ಸುನಿಲ್ ಅನ್ನಿ, ಬಿ.ಚನ್ನಬಸಯ್ಯ, ಎ.ಎಮ್.ರೇಖಾರಾಣಿ, ಪುಷ್ಪಾ ಹಎಚ್. ಶಿಲ್ಪಾ ಹೆಚ್.ಎಸ್., ವೀಣಾ ನವಲಹಳ್ಳಿ, ಎಸ್.ಜಿ.ಶಾಂತಾ, ವೀಣಾ ಜೆ ಮತ್ತು ಎಲ್.ಎಮ್.ಸುಮಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜು.8 ಮಧ್ಯಾಹ್ನ 3 ರವರೆಗೆ ನಾಮಪತ್ರ ಹಿಂಪಡೆಯಲು ಕೊನೆದಿನವಾಗಿತ್ತು. ಕಣದಲ್ಲಿ ನಿಗದಿಪಡಿಸಿದಂತೆ ಅಭ್ಯರ್ಥಿಗಳು ಕಣದಲ್ಲಿದ್ದರಿಂದ ಅವಿರೋಧವಾಗಿ ಸೋಮವಾರ ಘೋಷಿಸಲಾಯಿತು. ಚುನಾವಣೆ ಪ್ರಕ್ರಿಯೆ ಎಲ್ಲರ ಸಹಕಾರದೊಂದಿಗೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಸುಸೂತ್ರವಾಗಿ ನಡೆದಿದೆ. ಅವಿರೋಧವಾಗಿ ಆಯ್ಕೆಗಳು ಒಗ್ಗಟ್ಟನ್ನು ಪ್ರದರ್ಶಿಸುತ್ತದೆ. ಚುನಾವಣೆ ಪ್ರಕ್ರಿಯೆಗೆ ಸಹಕರಿಸಿದ ವಿ.ವೀ.ಸಂಘದ ಅಧ್ಯಕ್ಷರಿಗೆ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ, ಸಮಾಜಬಾಂಧವರಿಗೆ ಚುನಾವಣಾಧಿಕಾರಿ ಎಚ್.ಎಂ.ಚಂದ್ರಶೇಖರ ಶಾಸ್ತ್ರಿ ಧನ್ಯವಾದಗಳನ್ನು  ತಿಳಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ಒಪ್ಪತ್ತೆಪ್ಪ ಯಲಿಗಾರ, ಡಾ.ಹನುಮಂತಗೌಡ.ಜಿ. ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!