July 16, 2025

Hampi times

Kannada News Portal from Vijayanagara

ಟಿಬಿ ಡ್ಯಾಮ್‌ನಿಂದ ಹಂಪಿಗೆ ಸಾರಿಗೆ ಸೌಲಭ್ಯ: ವೇಳಾಪಟ್ಟಿ ಬಿಡುಗಡೆ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ 
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ಘಟಕದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜೂ.18ರಿಂದ ಟಿ.ಬಿ.ಡ್ಯಾಮ್‌ನಿಂದ ಹಂಪಿ ಸಂಪರ್ಕಿಸಲು ಅನುಸೂಚಿ ಸಂ: 301/1ರಲ್ಲಿ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಿಂದ ನಗರ ಸಾರಿಗೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗುತ್ತಿದ್ದು, ವಾಹನ ಬಿಡುವ ಮತ್ತು ತಲುಪುವ ಸಮಯವನ್ನು ಬಿಡುಗಡೆಮಾಡಲಾಗಿದೆ.
ಹಂಪಿ ಟು ಟಿ.ಬಿ.ಡ್ಯಾಂ:
ಹಂಪಿಯಿಂದ ಬೆಳಿಗ್ಗೆ 7.45ಕ್ಕೆ ಹೊರಟು 8.40ಕ್ಕೆ ಟಿ.ಬಿ.ಡ್ಯಾಮ್ ತಲುಪುತ್ತದೆ.  11.45ಕ್ಕೆ ಹೊರಟು 12.40ಕ್ಕೆ ತಲುಪುತ್ತದೆ.  3.45ಕ್ಕೆ ಹೊರಟು ಸಂಜೆ 4.40ಕ್ಕೆ ಟಿ.ಬಿ.ಡ್ಯಾಮ್ ತಲುಪುತ್ತದೆ.
ಟಿ.ಬಿ.ಡ್ಯಾಂ ಟು ಹಂಪಿ
ಟಿ.ಬಿ.ಡ್ಯಾಮ್‌ನಿಂದ ಬೆಳಿಗ್ಗೆ 8.55ಕ್ಕೆ ಹೊರಟು ಬೆಳಿಗ್ಗೆ 10 ಗಂಟೆಗೆ ಹಂಪಿಗೆ ತಲುಪುತ್ತದೆ,  ಮದ್ಯಾಹ್ನ 12.55ಕ್ಕೆ ಹೊರಟು 1.50ಕ್ಕೆ ತಲುಪುತ್ತದೆ.  ಸಂಜೆ 4.55ಕ್ಕೆ ಹೊರಟು 5.50ಕ್ಕೆ ಹಂಪಿಗೆ ತಲುಪುತ್ತದೆ. ಸಾರ್ವಜನಿಕರು ಈ ಸಾರಿಗೆ ಸೌಕರ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

 

ಜಾಹೀರಾತು
error: Content is protected !!