December 5, 2024

Hampi times

Kannada News Portal from Vijayanagara

ಪದವೀಧರರು ಹೀಗೆ ಮತದಾನ ಮಾಡಿದರೆ ಅಸಿಂಧು , ಎಲ್ಲೆಲ್ಲಿವೆ ಮತಗಟ್ಟೆ ಗೊತ್ತಾ?

 

https://youtu.be/NHc6OMSu0K4?si=SI_K4goOPEgwo6h2

21 ಮತಗಟ್ಟೆಗಳಲ್ಲಿ ಮತದಾನ  18,233 ಮತದಾರರು | ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಮಸ್ಟರಿಂಗ್ ಕಾರ್ಯ ಯಶಸ್ವಿ

ಹಂಪಿ ಟೈಮ್ಸ್ ಹೊಸಪೇಟೆ 
ಜೂನ್ 3ರಂದು ನಡೆಯಲಿರುವ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಕೇಂದ್ರಗಳಿಗೆ ಚುನಾವಣಾ ಸಾಮಗ್ರಿಗಳನ್ನು ಕಳುಹಿಸುವ ಮಸ್ಟರಿಂಗ್ ಕಾರ್ಯವು ಜೂನ್ 2ರಂದು ವಿಜಯನಗರ ಜಿಲ್ಲೆಯ ವಿವಿಧೆಡೆ ಅಚ್ಚುಕಟ್ಟಾಗಿ ನಡೆಯಿತು.

ಈ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಿದ್ದು ಮತದಾನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ಪಡೆದುಕೊಂಡು ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.

ಒಟ್ಟು 18,233 ಮತದಾರರು: ವಿಜಯನಗರ ಜಿಲ್ಲೆಯ 6 ತಾಲೂಕಿನ 21 ಮತಗಟ್ಟೆ ಕೇಂದ್ರಗಳಲ್ಲಿ ಜೂನ್ 3ರ ಬೆಳಗ್ಗೆ 8 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮಹಿಳಾ ಮತದಾರರು 6336 ಹಾಗೂ ಪುರುಷ ಮತದಾರರು 11,895 ಮತ್ತು ಇತರೆ 2 ಇಬ್ಬರು ಸೇರಿ ಒಟ್ಟು 18,233 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲಿದ್ದಾರೆ.

21 ಮತಗಟ್ಟೆಗಳಲ್ಲಿ ಮತದಾನ: ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜು ರೂಂ.ನA.01 ಹೂವಿನಹಡಗಲಿ., ಜಿ.ಪಿ.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜ ರೂಂ.ನA.02 ಹೂವಿನಹಡಗಲಿ., ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಇಟ್ಟಿಗಿ., ವೀರಪ್ಪ ಕೊಗಪ್ಪ ಕೊಂಪಿ ಸರ್ಕಾರಿ ಪದವಿ ಪೂರ್ವ ಕಾಲೇಜ್, ಹಿರೇಹಡಗಲಿ., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-01)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮನಗರ, ಹಗರಿಬೊಮ್ಮನಹಳ್ಳಿ (ಕೊಠಡಿ-02)., ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಪಸಾಗರ., ಗ್ರಾಮ ಪಂಚಾಯತಿ ಕಚೇರಿ ತಂಬ್ರಹಳ್ಳಿ., ಗ್ರಾಮ ಪಂಚಾಯತಿ ಕಚೇರಿ, ಕೋಗಳಿ., ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು, ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು., ಸರಕಾರಿ ಪದವಿ ಪೂರ್ವ (ಬಾಲಕರ) ಕಾಲೇಜು., ಪೂರ್ವ ಭಾಗ, ಉಜ್ಜಿನಿ ರಸ್ತೆ, ಕೊಟ್ಟೂರು., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ., (ಕೊಠಡಿ ನಂ 01)., ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಪಿ.ಬಿ.ಎಸ್.) ಚಿತ್ತವಾಡಿಗಿ, ಹೊಸಪೇಟೆ. (ರೂಮ್ ನಂಬರ್ 2)., ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಬಸ್‌ಸ್ಟ್ಯಾಂಡ್ ಹತ್ತಿರ, ಕಮಲಾಪುರ., ಸರ್ಕಾರಿ ಪ್ರೌಡಶಾಲೆ, ಮರಿಯಮ್ಮನಹಳ್ಳಿ., ತಾಲೂಕು ಪಂಚಾಯಿತಿ ಕೂಡ್ಲಿಗಿ., ಗ್ರಾಮ ಪಂಚಾಯತಿ ಕಾರ್ಯಾಲಯ, ಗುಡೆಕೋಟೆ., ಉನ್ನತಿಕರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜ್ ಹರಪನಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜು ಹರಪನಹಳ್ಳಿ., ಸರ್ಕಾರಿ ಜೂನಿಯರ್ ಕಾಲೇಜು, ಹರಪನಹಳ್ಳಿ (ಜೆ.ಒ.ಸಿ. ಹಾಲ್)ನಲ್ಲಿ  ಮತದಾನ ನಡೆಯಲಿದೆ.

ಪದವೀಧರರು ಮತದಾನ ಮಾಡುವಾಗ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಸಲಹೆ ಮಾಡಿದ್ದಾರೆ.

ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಪ್ರಾಶಸ್ತ್ರ ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗದ ಚಿಹ್ನೆ ಹೊಂದಿರುವ ವಯೋಲೇಟ್ ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು., ಮತದಾನಕ್ಕಾಗಿ, ಮತಗಟ್ಟೆ ಅಧಿಕಾರಿ ನಿಮಗೆ ಒದಗಿಸಿದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ. ಬೇರೆ ಯಾವುದೇ ಬಣ್ಣದ ಲೇಖನವನ್ನು ಬಳಸಬಾರದು.,

ನಿಮ್ಮ ಮೊದಲ ಪ್ರಾಶಸ್ತ್ರವಾಗಿ ನೀವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಲಾದ “ಪ್ರಾಶಸ್ತö್ಯ ಕ್ರಮ” ಎಂದು ಗುರುತಿಸಲಾದ ಅಂಕಣದಲ್ಲಿ “1” ಅಂಕಿ ನಮೂದಿಸುವ ಮೂಲಕ ಮತ ಚಲಾಯಿಸಿ. ಈ ಅಂಕಿ “1” ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಮಾತ್ರ ಬರೆಯಬೇಕು., ಒಟ್ಟು ಅಭ್ಯರ್ಥಿಗಳ ಸಂಖ್ಯೆಯಷ್ಟು ಪ್ರಾಶಸ್ತ್ರ ಮತವನ್ನು ಚಲಾಯಿಸುವುದು.,

ನಿಮ್ಮ ಪ್ರಾಶಸ್ತö್ಯ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳ ಹೆಸರುಗಳ ಎದುರು “ಪ್ರಾಶಸ್ತö್ಯದ ಕ್ರಮ” ಎಂದು ಗುರುತಿಸಲಾದ ಕಾಲಂನಲ್ಲಿ, ನಂತರದ ಅಂಕಿಗಳು ಅಂದರೆ 2,3,4 ಇತ್ಯಾದಿಗಳನ್ನು ನಮೂದಿಸುವ ಮೂಲಕ ಉಳಿದ ಅಭ್ಯರ್ಥಿಗಳಿಗೆ ನಿಮ್ಮ ಪ್ರಾಶಸ್ತö್ಯಗಳನ್ನು ಮತ ಚಲಾಯಿಸಬಹುದು.,

ನೀವು ಯಾವುದೇ ಅಭ್ಯರ್ಥಿಯ ಹೆಸರಿನ ಎದುರು ಕೇವಲ ಒಂದು ಅಂಕಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಒಂದೇ ಅಂಕಿ ಒಂದಕ್ಕಿAತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ಹಾಕಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು., ಪ್ರಾಶಸ್ತ್ರವನ್ನು ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು, ಅಂದರೆ 1, 2, 3 ಇತ್ಯಾದಿ ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪದಲ್ಲಿ, ರೋಮನ್ (1, 11, I, Iಗಿ) ರೂಪದಲ್ಲಿ ಅಥವಾ ಕನ್ನಡದಲ್ಲಿ (1, 2, 3, 4) ಗುರುತಿಸಬಹುದು.,

ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ ಮತ್ತು ಮತಪತ್ರದಲ್ಲಿ ನಿಮ್ಮ ಸಹಿ ಅಥವಾ ಕಿರುಸಹಿ ಉಪನಾಮ ಇತ್ಯಾದಿಗಳನ್ನು ಹಾಕಬೇಡಿ. ಅಲ್ಲದೆ, ನಿಮ್ಮ ಹೆಬ್ಬೆರಳಿನ ಗುರುತನ್ನು ಹಾಕಬೇಡಿ. ಇವುಗಳು ನಿಮ್ಮ ಮತಪತ್ರವನ್ನು ಅಸಿಂಧುಗೊಳಿಸುತ್ತವೆ., ನಿಮ್ಮ ಪ್ರಾಶಸ್ತ್ರವನ್ನು ಸೂಚಿಸಲು ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಎದುರು ಯಾವುದೇ ಗುರುತನ್ನು ಅಥವಾ ಎಕ್ಸ್ ಅಥವಾ ಎಸ್ ಗುರುತನ್ನು ಹಾಕಬೇಡಿ.,

ನಿಮ್ಮ ಮತಪತ್ರವನ್ನು ಮಾನ್ಯ ಮಾಡಲು, ಯಾವುದಾದರೂ ಒಂದು ಅಭ್ಯರ್ಥಿಯ ಎದುರು ಅಂಕಿ “1” ಅನ್ನು ನಮೂದಿಸುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ರವನ್ನು ಸೂಚಿಸುವುದು ಅವಶ್ಯಕ. ಇತರ ಪ್ರಾಶಸ್ತö್ಯಗಳು ಐಚ್ಛಿಕವಾಗಿರುತ್ತವೆ.

ಮತಪತ್ರವು ಹೇಗೆ ಅಸಿಂಧುವಾಗುತ್ತದೆ: ಯಾವುದೇ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತö್ಯವನ್ನು ನಿಯಮಾನುಸಾರ ಗುರುತಿಸದಿರುವುದು., ಒಂದಕ್ಕಿAತ ಹೆಚ್ಚಿನ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತö್ಯವನ್ನು ಗುರುತಿಸಿರುವುದು., 1ನೇ ಪ್ರಾಶಸ್ತö್ಯವನ್ನು ನಿಗದಿತ ಅಂಕಣದಲ್ಲಿ ಗುರುತಿಸದೆ ಇರುವುದರಿಂದ 1ನೇ ಪ್ರಾಶಸ್ತö್ಯವನ್ನು ಯಾವ ಅಭ್ಯರ್ಥಿಗೆ ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅಸಾಧ್ಯವಾಗಿರುವುದು., ಅಂಕಿ 1 ಮತ್ತು 2, 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು., ಪ್ರಾಶಸ್ತö್ಯವನ್ನು ಅಂಕಿಗಳ ಬದಲಿಗೆ ಪದಗಳಲ್ಲಿ ಚಲಾಯಿಸಿದ (ಒಂದು, ಎರಡು/ ಒನ್ ಟೂ) ಮತಗಳು ಅಮಾನ್ಯವಾಗಿರುತ್ತದೆ., ಮತದಾರರನ್ನು ಗುರುತಿಸುವಂತಹ ಯಾವುದೇ ಗುರುತು ಅಥವಾ ಬರಹವಿರುವುದು. ಮತ್ತು ನೇರಳೆ ಬಣ್ಣದ ಸ್ಕೆಚ್ ಪೆನ್ ಅನ್ನು ಹೊರತುಪಡಿಸಿ ಬೇರೆ ಲೇಖನಿಯನ್ನು ಬಳಸಿರುವುದರಿಂದ ಮತಪತ್ರವು ಅಸಿಂಧುವಾಗುತ್ತದೆ.

 

 

ಜಾಹೀರಾತು
error: Content is protected !!