February 10, 2025

Hampi times

Kannada News Portal from Vijayanagara

ಸಿ. ಜಿ. ಪಿ. ಎ. ಒಂದೇ ಯಶಸ್ಸಿಗೆ ಕಾರಣವಲ್ಲ, ಕಠಿಣ ಪರಿಶ್ರಮವೇ  ಭವಿಷ್ಯದ ದಿಕ್ಸೂಚಿ : ಡಿಸಿ ದಿವಾಕರ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ

ವಿದ್ಯಾರ್ಥಿಗಳು ಸಿ.ಜಿ.ಪಿ.ಎ. (ಕ್ಯುಮಿಲೇಟಿವ್ ಗ್ರೇಡ್ ಪಾಯಿಂಟ್ ಆವರೇಜ್) ಕಡಿಮೆ ಇದ್ದರೂ ದೃತಿಗೆಡಬಾರದು,  ಸಿ.ಜಿ.ಪಿ.ಎ. ಒಂದೇ ಯಶಸ್ಸಿಗೆ ಕಾರಣವಾಗುವುದಿಲ್ಲ. ಕಠಿಣ ಪರಿಶ್ರಮವೇ ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ ಎಂದು ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿ‌  ಎಂ.ಎಸ್.ದಿವಾಕರ ಅಭಿಪ್ರಾಯಪಟ್ಟರು.
ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಸಿಂಚನ 2024 ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಓದಿನ ಗುಂಗು ಇರಬೇಕೆ ವಿನಾಃ ಬೇರೆ ಚಿಂತೆಗಳಲ್ಲಿ ತೊಡಗಬಾರದು. ಪದವಿ ಎಂಬುದು ಅವರ ಜೀವನದ ಬುನಾದಿ, ಅದರ ನಂತರದಲ್ಲಿ ಪಡುವ ಕಠಿಣ ಪರಿಶ್ರಮ ಅವರ ಜೀವನದ ದಿಕ್ಕನ್ನೇ ಬದಲಿಸುತ್ತದೆ, ವಿದ್ಯಾರ್ಥಿಗಳು ತಮ್ಮ ಇಚ್ಚೆಗೆ ಅನುಸಾರವಾಗಿ ಭವಿಷ್ಯದ ದಾರಿಯನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿಗಳು ತಮಗೆ ರಾಜಕೀಯ ಬಲವಿಲ್ಲ, ಮನೆಯಲ್ಲಿ ಶಿಕ್ಷಣದ ವಾತಾವರಣವಿಲ್ಲ, ಆರ್ಥಿಕವಾಗಿ ದುರ್ಬಲತೆ ಇದೆ, ಸರಕಾರಿ ನೌಕರಿ ವ್ಯವಸ್ಥೆ ಇಲ್ಲ ಎಂದು ಮರುಗದೇ ಸತ್ಯ ಮತ್ತು ಭ್ರಮೆಗಳ ಬಗ್ಗೆ ಸರಿಯಾಗಿ ಅರಿತುಕೊಂಡು ಜ್ಞಾನಾರ್ಜನೆಗೆ ಒತ್ತು ಕೊಡಬೇಕು, ಕಠಿಣ ಪರಿಶ್ರಮಕ್ಕೆ ಮತ್ತೊಂದು ಪರ್ಯಾಯವಿಲ್ಲ. ಯಾವುದೇ ದುರ್ವ್ಯಸನಕ್ಕೆ ಬಲಿಯಾಗದೇ ತಂದೆ ತಾಯಿ ಗುರುಗಳಿಗೆ ಮತ್ತು ತಾವು ಓದಿದ ಶಾಲೆಗೆ ವಿಧೇಯದಿಂದ ನಡೆದುಕೊಂಡರೆ ಯಶಸ್ಸು ನಿಮ್ಮ ಹಿಂದೆ ಇರುತ್ತದೆ. ಅವಕಾಶಗಳಲ್ಲಿ ಕೈ ಹಾಕಿ ಅನೇಕ ಸೋಲುಗಳು ಬಂದ ನಂತರವೇ ಯಶಸ್ಸು ದೊರಕುತ್ತದೆ  ಎಂದು ಸ್ಪೂರ್ತಿದಾಯಕ ಮಾತುಗಳನ್ನು ತಿಳಿಸಿದರು.

ಜೆ.ಎಸ್.ಡಬ್ಲೂ ತೋರಣಗಲ್ಲಿನ ಕಾರ್ಯಕಾರಿ ಉಪಾಧ್ಯಕ್ಷ ಎಸ್.ಸಿ.ವಿಶ್ವನಾಥ,  ಸಮುತ್ಕರ್ಷ ಟ್ರಸ್ಟ್‌ನ ಮಹಾ ನಿರ್ದೇಶಕರಾದ ಜಿತೇಂದ್ರ ಪಿ.ನಾಯಕ್, ವೀ.ವಿ. ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್ ಮಾತನಾಡಿದರು. ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್  ಅಧ್ಯಕ್ಷತೆವಹಿಸಿ ಮಾತನಾಡಿದರು.

ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಮಾತನಾಡಿ, ಕಾಲೇಜ್‌ದಿನಗಳಲ್ಲಿ  ಕಲಿಕೆಯಲ್ಲಿ ಏಕಾಗ್ರತೆ ಬೆಳೆಸಿಕೊಳ್ಳಬೇಕು. ಮಕ್ಕಳ ಓದಿಗಾಗಿ ತಂದೆ ತಾಯಿಗಳ ಪರಿಶ್ರಮ, ತ್ಯಾಗವನ್ನು ನೆನೆದು, ಓದಿಗೆ  ಹೆಚ್ಚು ಆದ್ಯತೆ ನೀಡಿದಲ್ಲಿ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.

ಟಾಪರ್ಸ್‌ಗಳಿಗೆ ಸನ್ಮಾನ: ಮೆಕಾನಿಕಲ್‌ ವಿಭಾಗದ ಎ ಪವನ್‌ ಕುಮಾರ್‌ ರಾಜು, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದ ಆಕಾಶ್‌ ಉಪ್ಪಿನ್‌, ಗಣಕಯಂತ್ರದ ವಿಭಾಗದ ಅಫ್ರೀನ್‌ ಹೆಚ್.‌,ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಮೊಹಮ್ಮದ್‌ ಮುಸ್ತಾಫ, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ವಿಭಾಗದ ಮೋಮೀನಾ ಕೌಸರ್‌, ಎಂ.ಬಿ.ಎ ವಿಭಾಗದ ಸುಹಾಸಿ ಎಸ್‌ ಭಾಟಿಯಾ ವಿದ್ಯಾರ್ಥಿಗಳನ್ನು ಎಂಎಸ್‌ಪಿಎಲ್‌ ಸಂಸ್ಥೆವತಿಯಿಂದ ಚಿನ್ನದ ಪದಕ ಮತ್ತು ಸಂಘದವತಿಯಿಂದ ತಲಾ 10 ಸಾವಿರ ನಗದು ರೂ. ನೀಡಿ. ಸನ್ಮಾನಿಸಲಾಯಿತು.

ಡಾಕ್ಟರೇಟ್‌ ಪದವಿ ಪಡೆದ ಕಾಲೇಜಿನ ಉಪನ್ಯಾಸಕರಾದ    ಡಾ.ನವೀನಗ್‌ ಆರ್.ಗಣೇಶ, ಡಾ.ವೇಣುಮಾಧವ.ಎಂ., ಡಾ.ವಸಂತಮ್ಮ, ಡಾ.ಕೆ.ಹೆಚ್‌.ಮಂಜುನಾಥ ಹಾಗೂ ಡಾ.ಗಿರಿಜಾ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವೀ.ವಿ. ಸಂಘದ ಉಪಾಧ್ಯಕ್ಷರಾದ ಜಾನೆಕುಂಟೆ ಬಸವರಾಜ್, ಕೋಶಾಧಿಕಾರಿ  ಬೈಲುವದ್ದಿಗೇರಿ ಯರ್ರಿಸ್ವಾಮಿ,  ವೀ.ವಿ. ಸಂಘದ ಕಾರ್ಯಕಾರಣಿ ಮಂಡಳಿ ಸದಸ್ಯರಾದ ಎಂ.ಶರಣ ಬಸವನಗೌಡ ಹಾಗೂ ಮೆಟ್ರಿ ಮಲ್ಲಿಕಾರ್ಜುನ, ಸಿ ಎನ್ ಮೋಹನ್ ರೆಡ್ಡಿ, ದರೂರ್ ಶಾಂತನಗೌಡ, ಎಳುಬೆಂಚಿ ರಾಜಶೇಖರ, ಪಲ್ಲೆದ್ ಪ್ರಭುಲಿಂಗ ಮತ್ತು ಹಾಗೂ ಕೆ.ಬಿ.ಶ್ರೀನಿವಾಸ್ ಸೇರಿದಂತೆ  ಅಜೀವ ಸದಸ್ಯರುಗಳು, ಪಿಡಿಐಟಿ ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಉಪ ಪ್ರಾಂಶುಪಾಲರಾದ ಪ್ರೊ. ಪಾರ್ವತಿ ಕಡ್ಲಿ, ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಹ ಸಂಯೋಜಕರಾದ ಪ್ರೊ. ರವಿಕುಮಾರ್ ಎಸ್.ಪಿ ಸಂಯೋಜಕರಾದ ಪ್ರೊ. ಪಾರ್ವತಿ ಕಡ್ಲಿ, ಡಾ. ಶರಣಬಸಮ್ಮ, ಪ್ರೊ. ಎಚ್.ಎಂ. ನಿರ್ವಹಿಸಿದರು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,

 

 

ಜಾಹೀರಾತು
error: Content is protected !!