https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ 24ನೇ ವಾರ್ಷಿಕೋತ್ಸವದ ಸಿಂಚನ ಸಮಾರಂಭ ಮೇ 31 ಮತ್ತು ಜೂ.1 ರಂದು ಜರುಗಲಿದೆ ಎಂದು ಪಿಡಿಐಟಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಭಾಗದ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜನ್ಮತಾಳಿದ ವೀರಶೈವ ವಿದ್ಯಾವರ್ಧಕ ಸಂಘಕ್ಕೆ 109 ವರ್ಷಗಳಾಗಿದ್ದು, 50ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಜನಕವಾಗಿದೆ. ಗ್ರಾಮೀಣ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು 1997 ರಲ್ಲಿ ಹೊಸಪೇಟೆಯಲ್ಲಿ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪಿಸಿತು. ಕಳೆದ 24 ವರ್ಷಗಳಲ್ಲಿ ಈ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅನೇಕ ಪ್ರತಿಭಾವಂತ ಮಕ್ಕಳ ಪೈಕಿ 5000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೆಸರಾಂತ ಕಂಪನಿಗಳಲ್ಲಿ ಉದ್ಯೋಗ ಲಭಿಸಿದೆ ಅಲ್ಲದೆ ರೈತಾಪಿ ಬಡ ಮತ್ತು ಮಧ್ಯಮವರ್ಗದ ಕುಟುಂಬದ ಅನೇಕ ಮಕ್ಕಳಿಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಮೂಲಕ ಅವರ ಬುದಕಿದೆ ಬೆಳಕಾಗಿದೆ. ಭವಿಷ್ಯದಲ್ಲಿ ಕಾನೂನು ಪದವಿ ಕಾಲೇಜ್, ಎಂ.ಸಿ.ಎ ಸೇರಿದಂತೆ ಬೇಡಿಕೆ ಇರುವ ವಿವಿಧ ಕೋರ್ಸ್‌ಗಳನ್ನು ಆರಂಭಿಸುವ ಚಿಂತನೆ ಸಂಘಕ್ಕಿದೆ ಎಂದರು.
ಸಿಂಚನ24, ಪದವಿ, ಕ್ರೀಡಾ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಎರಡು ದಿನಗಳ ಕಾಲ ನಡೆಯಲಿದೆ. ಮೆ.31 ರಂದು ಬೆಳಿಗ್ಗೆ 10.30ಕ್ಕೆ ಪದವಿ ದಿನಾಚರಣೆ ನಡೆಯಲಿದ್ದು, ಕಲಬುರ್ಗಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಅನಿಲ್ ಕುಮಾರ್ ಬಿಡ್ವೆ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಜೆ.ತಿಪ್ಪೇರುದ್ರಪ್ಪ ಮುಖ್ಯ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಸಂಜೆ ೫ಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ಮತ್ತು ಬಲ್ಡೋಟ ಗ್ರೂಫ್‌ನ ಸಿಎ, ಕಂಪನಿ ಕಾರ್ಯದರ್ಶಿ ಅನಿಲ್ ಕವಾಡಿಯ ಉಪಸ್ಥಿತರಿರಲಿದ್ದಾರೆ.
ಜೂ.1 ಸಂಜೆ 5ಕ್ಕೆ ವಾರ್ಷಿಕೋತ್ಸವ ಸಮಾರಂಭ ಜರುಗಲಿದ್ದು, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಮಿಲ್ಸ್ ಜೆಎಸ್‌ಡಬ್ಲ್ಯೂ ಕಾರ್ಯಕಾರಿ ಉಪಾಧ್ಯಕ್ಷ ಎಸ್.ಸಿ.ವಿಶ್ವನಾಥ, ಸಮುತ್ಕರ್ಷ ಮಹಾನಿರ್ದೇಶಕ ಜಿತೇಂದ್ರ ಪಿ.ನಾಯಕ್ ಉಪಸ್ಥಿತರಿರಲಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಬಳ್ಳಾರಿ ವೀ.ವಿ.ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಧ್ಯಕ್ಷತೆವಹಿಸುವರು. ಉಪಾಧ್ಯಕ್ಷ ಜಾನೇಕುಂಟೆ ಬಸವರಾಜ, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಸಹಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಕೋಶಾಧಿಕಾರಿ ಬೈಲುವದ್ದಿಗೇರಿ ಯರ್ರಿಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ರೋಹಿತ್ ಯು.ಎಂ. ಮಾತನಾಡಿ, ಪಿಡಿಐಟಿ ಕಾಲೇಜಿನಲ್ಲಿ ಕೃತಕ ಬುದ್ದಿಮತ್ತೆ ಹಾಗೂ ಯಂತ್ರ ಕಲಿಕೆ (ಎಐಎಂಎಲ್) ನಂತಹ ವಿಶಿಷ್ಟ ವಿಭಾಗಗಳನ್ನು ಹೊಂದಿದ್ದು, ಎಂಬಿಎ ಪದವಿಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ಕೊಡಮಾಡುತ್ತಿದೆ. 6 ಬಿಇ ಪದವಿ ವಿಭಾಗಗಳು, 2 ಎಂ.ಟೆಕ್ ಸ್ನಾತಕೋತ್ತರ, 2 ಸಂಶೋಧನಾ ಘಟಕಗಳು ಜೊತೆಗೆ ಎಂಬಿಎ ಸ್ನಾತಕೋತ್ತರ ತರಗತಿಗಳು ನಡೆಯುತ್ತಿದ್ದು ಸ್ಥಳೀಯ ಸೇರಿದಂತೆ ರಾಜ್ಯ, ಹೊರರಾಜ್ಯದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲಾ ವಿಭಾಗಗಳ ಸೇರಿ ಒಟ್ಟು 1300 ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದರು.
ಉಪಪ್ರಾಂಶುಪಾಲರು, ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಪಾರ್ವತಿ ಕಡ್ಲಿ ಉಪಸ್ಥಿತರಿದ್ದರು.
More Stories
ಪುಟ್ಟ ಕನಸು : ಟಿ. ದುರುಗಮ್ಮ
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ