December 14, 2024

Hampi times

Kannada News Portal from Vijayanagara

ಜೀವವಿಮಾ ಪ್ರತಿನಿಧಿಗಳ ಸಂಘಟಿತ ಹೋರಾಟಕ್ಕೆ ಫಲ ನಿಶ್ಚಿತ: ಸೈಯದ್‌ ಬಶೀರ್‌ ಅಹಮದ್

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಹೊಸಪೇಟೆ

ಜೀವ ವಿಮಾ ಪ್ರತಿನಿಧಿಗಳ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜೀವವಿಮಾ ಪ್ರತಿನಿಧಿಗಳು ಸಂಘಟಿತರಾಗಬೇಕಿದೆ. ಸಂಘಟಿತ ಹೋರಾಟಕ್ಕೆ ಫಲ ನಿಶ್ಚಿತ, ಸಂಘಟನೆಯನ್ನು ಬಲಿಷ್ಠವಾಗಿಸಲು ಎಲ್ಲಾ ಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಜೀವ ವಿಮಾ ಪ್ರತಿನಿಧಿ ಸಂಘಟನೆಯ ಹೊಸಪೇಟೆ ಘಟಕದ ನೂತನ ಅಧ್ಯಕ್ಷ ಸೈಯದ್ ಬಶೀರ್ ಅಹಮದ್ ಹೇಳಿದರು.

ನಗರದ ಗೌತಮ್ ಬುದ್ಧ ಫಂಕ್ಷನ್ ಹಾಲಿನಲ್ಲಿ ಶನಿವಾರ ನಡೆದ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆಯ 13ನೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬರು ತಾವಿರುವ ಮನೆ ಸುಭದ್ರವಾಗಿರಬೇಕೆಂಬುದು ಆಶಿಸಿದಂತೆನ ನಮಗೆ ನಮ್ಮ ಎಲ್‌ಐಸಿ ನಿಗಮದಷ್ಟೇ ನಮ್ಮ ಸಂಘಟನೆಯೂ ಮುಖ್ಯವಾಗಿದೆ. ನ್ಯಾಯೋಚಿತ ಹಕ್ಕು ಮತ್ತು ಬೇಡಿಕೆಗಳ ಈಡೇರಿಕೆಗೆ ಪ್ರತಿನಿಧಿಗಳು ದುಡಿಮೆಯ ಕೆಲ ಭಾಗವನ್ನು ಸಂಘಟನೆಗೆ ಮೀಸಲಿಡಬೇಕು. ಜೀವ ವಿಮಾದ ಬಗ್ಗೆ ಜನರಲ್ಲಿನ ನಂಬಿಕೆಗೆ ತಕ್ಕಂತೆ ಕೆಲಸ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಅಖಿಲ ಭಾರತ ಸಮಿತಿಯ ಕಾರ್ಯಾಧ್ಯಕ್ಷ ಎಲ್ ಮಂಜುನಾಥ್ ಮಾತನಾಡಿ, ಜೀವ ವಿಮಾ ಪ್ರತಿನಿಧಿಗಳ ಸಮೂಹವು ನಿರಂತರ ಶ್ರಮಪಡುತ್ತಿದೆ. ಪ್ರತಿನಿಧಿಗಳು ಸಂಘಟಿತರಾಗಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು, ಬೇಡಿಕೆ ಈಡೇರಿಕೆಗೆ ಹೋರಾಟವೊಂದೇ ಮಾರ್ಗ. ಕೇಂದ್ರ ಸರ್ಕಾರದ ನೀತಿಗಳು ಪ್ರತಿನಿಧಿಗಳ ವ್ಯಾಪಾರಕ್ಕೆ ಮಾರಕವಾಗಿವೆ ಮತ್ತು ಕೇಂದ್ರ ಸರ್ಕಾರ ಐಆರ್‌ಡಿಎ ಮುಖಾಂತರ ನಾನಾ ಕಾನೂನುಗಳನ್ನು ಪ್ರತಿನಿಧಿಗಳ ಮೇಲೆ ಹೇರುತ್ತಿದೆ ಇದರ ಪರಿಣಾಮ ನೇರವಾಗಿ ಪ್ರತಿನಿಧಿಗಳ ಮೇಲೆ ಆಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ 27 ಸದಸ್ಯರನ್ನು ಒಳಗೊಂಡ ನೂತನ ಕಾರ್ಯಕಾರಿ ಸಮಿತಿ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಯಿತು.‌

ಜೀವ ವಿಮಾ ಪ್ರತಿನಿಧಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ನೂತನ ಅಧ್ಯಕ್ಷರಾಗಿ ಸೈಯದ್ ಬಶೀರ್ ಅಹಮದ್, ಉಪಾಧ್ಯಕ್ಷರಾಗಿ ಕೆ ಪಂಪಾಪತಿ ಹೆಚ್ ಕೊಟ್ರೇಶಪ್ಪ, ಸರಸ್ವತಿ, ಕೆ ನೌಶಾದ್ ಅಲಿ ಆಯ್ಕೆಯಾದರು, ಖಜಾಂಚಿಯಾಗಿ ಖಾಸಿಂಸಾಬ್, ಸಹ ಕಾರ್ಯದರ್ಶಿಗಳಾಗಿ ತಿಮ್ಮರಾಜು, ಕೆ ಮಲ್ಲಿಕಾರ್ಜುನ ಚೆನ್ನಪ್ಪ, ಶಿಲ್ಪಾ ರಾಣಿ, ಮತ್ತು ಖಜಾಂಚಿಯಾಗಿ  ಟಿ ಪಾಂಡುರಂಗ ರಾವ್ ಇವರನ್ನು ಆಯ್ಕೆ ಮಾಡಲಾಯಿತು.

ಭಾಸ್ಕರ್ ಬಳಗಾನೂರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಎ ಎಸ್ ಲೋಕೇಶ್ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಡಿಸಿ ಶಿವಮೂರ್ತಿ, ಎಸ್ ವಲಿ ಮೋಹಿದೀನ್, ಜಿಎನ್ ತಿಪ್ಪೇಸ್ವಾಮಿ, ಎಂ ಎಸ್ ಭಟ್, ಡಿ ಶ್ರೀನಿವಾಸ್ ಮತ್ತು ಸಿಐಟಿಯು ವತಿಯಿಂದ ಆರ್ ಭಾಸ್ಕರ್ ರೆಡ್ಡಿ, ಜೆ ಪ್ರಕಾಶ್ ಹಾಜರಿದ್ದರು. ಕೆ ನೌಶಾದ್ ಅಲಿ ಕಾರ್ಯಕ್ರಮವನ್ನು  ನಿರೂಪಿಸಿದರು.

ಸಮಾರಂಭದಲ್ಲಿ ಶತಕ ವೀರ ಪ್ರತಿನಿಧಿಗಳು ಎಂ ಡಿ ಆರ್ ಟಿ ಪ್ರತಿನಿಧಿಗಳು ಮತ್ತು 25 ವರ್ಷ ಪೂರೈಸಿದ ಎಲ್ಲಾ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಎ ಭಾಸ್ಕರ್ ರಾವ್. ರಾಜ ಪಿ ಮಂಜುನಾಥ್ ರಮೇಶ್ ಶೆಟ್ಟಿ, ಭಾರತಿ ದಿನಕರ ಶಾರದ, ಶಶಿಕಲಾ, ಜಮೀರ ಬೇಗಂ, ದೇವರಾಜ್, ಮುಂತಾದ ಪ್ರತಿನಿಧಿಗಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!