https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಕೂಡ್ಲಿಗಿ
ತಾಲೂಕಿನ ಎಚ್. ಮ್ಯಾಸರಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ದುಡಿಯುವ ಮಗನಂತೆ ಬೆಳೆದು ನಿಂತಿದ್ದ ಎಲೆಬಳ್ಳಿ ತೋಟ ನೆಲಕಚ್ಚಿದ್ದು, ರೈತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಸರ್ವೇ ನಂ.677/3 ಮಲ್ಲಮ್ಮ ಗಂಡ ಪೂಜಾರಿ ಮಾರಣ್ಣಗೆ ಸೇರಿದ ಒಂದು ಎಕರೆ ಎಲೆಬಳ್ಳಿ ತೋಟ ನೆಲಕ್ಕುರುಳಿದ್ದನ್ನು ಕಂಡ ಕುಟುಂಬ ಕಣ್ಣೀರಿಡುತ್ತಿದೆ. ಮನೆ ಮಗನಂತೆ ಬೆಳೆಯನ್ನು ರಕ್ಷಿಸಿ ಬೆಳೆಸಿದ್ದೆವು. ವರುಣನ ಅಟ್ಟಹಾಸಕ್ಕೆ ನೆಲಕ್ಕುರಿಳಿದೆ. ಸಾಲವು ರೈತ ಕುಟುಂಬಕ್ಕೆ ಶೂಲವಾಗಿದೆ. ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ರೈತರ ನೆರವಿಗೆ ಧಾವಿಸಬೇಕು ಎಂದು ಮಲ್ಲಮ್ಮನ ಪುತ್ರ ನಾಗೇಶ ಕಣ್ಣೀರಿಟ್ಟಿದ್ದಾನೆ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ