https://youtu.be/NHc6OMSu0K4?si=SI_K4goOPEgwo6h2
ಜೆ.ಇ.ಇ ಮೈನ್-ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಅಂತಿಮ ಫಲಿತಾಂಶ ಪ್ರಕಟ
ಆಲ್ ಇಂಡಿಯ ರ‍್ಯಾಂಕ್ (ಜನರಲ್ ಮೆರಿಟ್) 100ರ ಒಳಗೆ 3 ವಿದ್ಯಾರ್ಥಿಗಳು, ಗಣಿತ ಶಾಸ್ತ್ರದಲ್ಲಿ ಇಬ್ಬರಿಗೆ ಶೇ.100 ಫಲಿತಾಂಶ
ಹಂಪಿ ಟೈಮ್ಸ್ ಕಾರ್ಕಳ:
ರಾಷ್ಟಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಅಂತಿಮ ಪರೀಕ್ಷೆಯ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಶೇ.99ಕ್ಕಿಂತ ಅಧಿಕ ಫಲಿತಾಂಶ ಗಳಿಸಿರುತ್ತಾರೆ.
ವಿದ್ಯಾರ್ಥಿಗಳಾದ ಬಿಪಿನ್ ಜೈನ್.ಬಿ.ಎಂ. 99.9754815ಪರ್ಸಂಟೈಲ್(ಗಣಿತ ಶಾಸ್ತ್ರ ಶೇ.100 , ಆಲ್ ಇಂಡಿಯಾ ರ‍್ಯಾಂಕ್ 22), ಕೇದಾರ್ ರಮೇಶ್ ಕುಲಕರ್ಣಿ ಶೇ.99.9670351 (ಆಲ್ ಇಂಡಿಯಾ ರ‍್ಯಾಂಕ್ 32), ಪ್ರಣವ್ ಕುಮಾರ್ ಭಂಡಿ ಶೇ.99.9069226 (ಆಲ್ ಇಂಡಿಯಾ ರ‍್ಯಾಂಕ್ 75), ಚೈತನ್ಯ ಚಲಿತ್ ಶೇ.99.7905759 (ಆಲ್ ಇಂಡಿಯಾ ರ‍್ಯಾಂಕ್ 169), ಸುಜಲ್ ಸಚಿನ್ ಯಾಡವಿ ಶೇ.99.7875065 (ಆಲ್ ಇಂಡಿಯಾ ರ‍್ಯಾಂಕ್ 176), ಚಿರಂತನ ಜೆ.ಎ. ಶೇ.99.7498546 (ಆಲ್ ಇಂಡಿಯಾ ರ‍್ಯಾಂಕ್ 209), ಪ್ರಿಯಾಂಶ್ ಎಸ್.ಯು. ಶೇ. 99.705255 (ಗಣಿತ ಶಾಸ್ತ್ರ ಶೇ.100, ಆಲ್ ಇಂಡಿಯಾ ರ‍್ಯಾಂಕ್ 245), ಅನುರಾಗ್ ಶೇ.99.3815893 (ಆಲ್ ಇಂಡಿಯಾ ರ‍್ಯಾಂಕ್ 492), ಹಾಗೂ ಕನ್ನಿಕಾ ದೀಪಕ್ ಶೆಟ್ಟಿ ಶೇ. 99.3699886 (ಆಲ್ ಇಂಡಿಯಾ ರ‍್ಯಾಂಕ್ 515) ಗಳಿಸಿದ್ದಾರೆ.
ಜೆ.ಇ.ಇ.ಮೈನ್ – ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ -2024 ಮೊದಲ ಹಂತದ ಪರೀಕ್ಷೆಯಲ್ಲಿ ಕೇದಾರ್ ರಮೇಶ್ ಕುಲಕರ್ಣಿ ಶೇ.99.9670351 ಫಲಿತಾಂಶದೊAದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಈಗಾಗಲೇ ಪ್ರಕಟಗೊಂಡ ಜೆ.ಇ.ಇ. ಮೈನ್ ಬಿ.ಟೆಕ್ -2024 ಅಂತಿಮ ಫಲಿತಾಂಶದಲ್ಲೂ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳ ಬಹುದು.
ವಿದ್ಯಾರ್ಥಿಗಳ ಸಾಧನೆ ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗದ ಪರಿಶ್ರಮಕ್ಕೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ