December 14, 2024

Hampi times

Kannada News Portal from Vijayanagara

ಹಗಲೊತ್ತಿನಲ್ಲೆ ಹೆಚ್ಚಿದ ಕಳ್ಳತನ, ಭದ್ರತೆಗೆ ಸಾರ್ವಜನಿಕರ ಆಗ್ರಹ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಕೂಡ್ಲಿಗಿ:

ರಾತ್ರಿ ಕಳ್ಳತನ ಮಾಡುತ್ತಿದ್ದ ಖದೀಮರ ಕೈಚಳಕ ಇದೀಗ ಹಗಲು ಮುಂದುವರೆದಿದೆ. ಪಟ್ಟಣದ 1 ಮತ್ತು 2 ನೇ ವಾರ್ಡಿನಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದು, ನಾಗರೀಕರು ಭಯಬೀತರಾಗಿದ್ದು ಆಸ್ತಿ ಹಾಗೂ ಪ್ರಾಣ ಕಾಪಡುವಂತೆ ಪಟ್ಟಣದ ನಾಗರೀಕರು ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ 1 ಮತ್ತು 2 ನೇ ವಾರ್ಡಿನಲ್ಲಿ ದಿನೇ ದಿನೇ ಸರಣಿ ಕಳ್ಳತನ ಹೆಚ್ಚಾಗಿ ಇದ್ದು, ಇಷ್ಟು ದಿವಸ ರಾತ್ರಿ ಕಳ್ಳತನ ಮಾಡುತ್ತಿದ್ದ ಖದೀಮರು, ಈಗ ಹಗಲು ಹೊತ್ತಿನಲ್ಲಿಯೇ ಬೀಗ ಹಾಕಿರುವ ಮನೆಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಇತ್ತೀಚೆಗೆ ಹಗಲಿನಲ್ಲಿಯೇ ಕಳ್ಳತನ ಮಾಡಿ ಬಂಗಾರ, ಹಣ, ವಸ್ತ್ರಗಳನ್ನು ಕದ್ದು ಒಯ್ಯುದಿದ್ದಾರೆ, ಇದು ತೀರ ನೋವಿನ ಸಂಗತಿ. ಈಗಾಗಲೇ ಅನೇಕರು ತಮ್ಮ ಮನೆಗಳಲ್ಲಿನ ಹಣ, ಬಂಗಾರ,ಬೆಳ್ಳಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ.

ಹಗಲು ಹೊತ್ತಿನಲ್ಲಿಯೇ ಕಳ್ಳತನ ನಡೆಯುತ್ತಿರುವುದರಿಂದ ಹೆಣ್ಣುಮಕ್ಕಳು ಮನೆಯಲ್ಲಿ ಇರಲು ಭಯ ಪಡುತ್ತಿದ್ದಾರೆ. ಪಟ್ಟಣದಲ್ಲಿ ಕಳ್ಳತನ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಹಾಗೂ ಮಕ್ಕಳು ಭಯಬೀತರಾಗಿದ್ದು. ನಿತ್ಯವು ಆತಂಕದಿಂದ ಜೀವನ ಮಾಡುವಂತಾಗಿದೆ. ಇನ್ನೂ ಮುಂದೆ ಹಣದಾಸೆಗೆ ಪ್ರಾಣಕ್ಕೂ ಸಂಚಕಾರ ತರಬಹುದೆಂದು ಮನೆಯವರು ಹೆದರಿದ್ದಾರೆ. ಪರಿಸ್ಥಿತಿ ಈಗಾದರೆ ಹೇಗೆ ಆದ್ದರಿಂದ ಸಾರ್ವಜನಿಕರ ಆಸ್ತಿ, ಪ್ರಾಣ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೋಲಿಸ್ ಇಲಾಖೆ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಖದೀಮರ ಹಿಡಿಯಲು ಬಲೆ ಬೀಸಬೇಕು, ಸಾರ್ವಜನಿಕರಿಗೆ ಭದ್ರತೆ ನೀಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮನವಿ ಪತ್ರ ಸ್ವೀಕಾರ ಮಾಡಿದರು. ಸಿಪಿಐ ವಿನಾಯಕ ಇದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಮಂಜುನಾಥ, ಉಪನ್ಯಾಸಕ ಟಿ.ದೇವಪ್ಪ, ಶಿಕ್ಷಕರಾದ ಅನಂತಕುಮಾರ, ಮಹೇಂದ್ರ ಕುಮಾರ್, ಸಿದ್ದಲಿಂಗಪ್ಪ, ಶಿವಕುಮಾರ್ ಸ್ವಾಮಿ, ವಿರುಪಾಕ್ಷಿ, ಗ್ರಾಪಂ ಮಾಜಿ ಸದಸ್ಯ ರಾಜಶೇಖರ ಸೇರಿದಂತೆ ಅನೇಕರು ಇದ್ದರು.

 

 

ಜಾಹೀರಾತು
error: Content is protected !!