November 7, 2024

Hampi times

Kannada News Portal from Vijayanagara

ಬೆಳೆ ಪರಿಹಾರದ ಮೊತ್ತ ಜಮಾ: ತಾಂತ್ರಿಕ ಕಾರಣಗಳ ಪರಿಶೀಲನೆಗೆ ರೈತರಿಗೆ ಅವಕಾಶ: ಎಂ.ಎಸ್.ದಿವಾಕರ

 

https://youtu.be/NHc6OMSu0K4?si=SI_K4goOPEgwo6h2

 

 

ಹಂಪಿ ಟೈಮ್ಸ್ ಹೊಸಪೇಟೆ 
ಅಕೌಂಟ್ ಇನ್ ವ್ಯಾಲಿಡ್, ಕ್ಲೋಸ್, ಬ್ಲಾಕ್, ಆಧಾರ್ ನಾಟ್ ಸೀಡಿಂಗ್ ಹಾಗೂ ಇತರೆ ತಾಂತ್ರಿಕ ಕಾರಣಗಳ ಸಮಸ್ಯೆಯಿಂದಾಗಿ ವಿಜಯನಗರ ಜಿಲ್ಲೆಯ ಕೆಲವು ರೈತರ ಖಾತೆಗಳಿಗೆ ಬೆಳೆ ಪರಿಹಾರದ ಮೊತ್ತವು ತಲುಪದೇ ವಾಪಸ್ಸು ಬಂದಿದ್ದು, ರೈತರು ಈ ಬಗ್ಗೆ ಕೂಡಲೇ ಪರಿಶೀಲಿಸಿಕೊಳ್ಳಲು ಜಿಲ್ಲಾಡಳಿತದಿಂದ ಅನುಕೂಲ ಕಲ್ಪಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ತಿಳಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಸಂಬAಧಿಸಿದAತೆ ಜಿಲ್ಲೆಯ 1,09,543 ರೈತರಿಗೆ ಬೆಳೆ ಪರಿಹಾರದ ಮೊತ್ತವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಈ ಪೈಕಿ 9,854 ರೈತರ ಖಾತೆಗಳಿಗೆ ಕೆಲವು ಕಾರಣಗಳಿಂದ ಹಣ ತಲುಪದೇ ವಾಪಸ್ಸು ಬಂದಿರುತ್ತದೆ.
ಕೆಲವು ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗದೇ ಇರಲು ರೈತರ ಹೆಸರು ಆಧಾರ್ ಮತ್ತು ಫ್ರುಟ್ಸ್ ಮ್ಯಾಚ್ ಆಗದೇ ಇರುವುದು, ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದೇ ಇರುವುದು., ರೈತರ ಬ್ಯಾಂಕ್‌ನ ಐ.ಎಫ್.ಎಸ್.ಸಿ ಕೋಡ್ ಸರಿಯಿರದೇ ಇರುವುದು., ರೈತರ ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿರುವುದು ಮತ್ತು ಇತರೆ ಕಾರಣಗಳಿಂದ ಎಂದು ತಿಳಿದು ಬಂದಿರುತ್ತದೆ.
ಈ ಮೇಲ್ಕಾಣಿಸಿದ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿರುತ್ತದೆ. ಈ ಬಗ್ಗೆ ರೈತರು ಗಮನ ಹರಿಸಬೇಕು. ರೈತರು ಮೊದಲು ಜಮೀನಿನ ಪಹಣಿಗೆ ತಮ್ಮ ಫ್ರುಟ್ಸ್ ಐಡಿ ಸಂಖ್ಯೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು., ತಮ್ಮ ಬ್ಯಾಂಕ್ ಖಾತೆಗೆ ಎನ್‌ಪಿಸಿಐ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು., ಎನ್‌ಪಿಸಿಐ ಲಿಂಕ್ ಇದ್ದಲ್ಲಿ ಇದ್ದಲ್ಲಿ ಎಫ್‌ಐಡಿ (ಫ್ರುಟ್ ಐಡಿ) ಇರತಕ್ಕಂತಹ ಬ್ಯಾಂಕ್ ಖಾತೆ ಖಾತೆ ಸಂಖ್ಯೆಗೂ ಎನ್‌ಪಿಸಿಐ ಲಿಂಕ್ ಇರುವ ಸಂಖ್ಯೆಯೂ ಒಂದೇ ಆಗಿರತಕ್ಕದ್ದು., ಎನ್‌ಪಿಸಿಐ ಲಿಂಕ್ ಹಾಗೂ ಫ್ರುಟ್ ಐಡಿನಲ್ಲಿ ಇರತಕ್ಕಂತಹ ಬ್ಯಾಂಕ್ ಖಾತೆ ಸಂಖ್ಯೆ ಬೇರೆ ಬೇರೆ ಇದ್ದಲ್ಲಿ ಎಫ್‌ಐಡಿಯಲ್ಲಿ ಇರುವ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಬದಲಾವಣೆ ಮಾಡಿಸಿಕೊಳ್ಳುವುದು., ಆಧಾರ್ ಕಾರ್ಡನಲ್ಲಿ ಇರುವ ಹೆಸರಿಗೂ ಬ್ಯಾಂಕ್ ಖಾತೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು., ಅಕೌಂಟ್ ಇನ್-ವ್ಯಾಲಿಡ್, ಕ್ಲೋಸ್, ಬ್ಲಾಕ್, ಆಧಾರ್ ನಾಟ್ ಸೀಡಿಂಗ್ ಹಾಗೂ ಇತರೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಳ್ಳುತ್ತಿದ್ದು ಪರಿಶೀಲಿಸಿಕೊಂಡು ಚಾಲ್ತಿ ಮಾಡಿಸಿಕೊಳ್ಳುವುದು. ಆಧಾರ್ ಕಾರ್ಡನಲ್ಲಿ ಇರುವ ಹೆಸರಿಗೂ ಪಹಣಿ ಪತ್ರಿಕೆಯಲ್ಲಿ ಇರುವ ಹೆಸರೂ ಒಂದೇ ಆಗಿರಬೇಕು. ಮುಂದುವರೆದು  https://parihara.karnataka.gov.in/service92 ಈ ವೆಬ್‌ಸೈಟಗೆ ಹೋಗಿ ಪರಿಶೀಲಿಸಿಕೊಳ್ಳಬೇಕು. ಸರ್ಕಾರದಿಂದ ಇನ್ನು ಹಂತಹAತವಾಗಿ ಪರಿಹಾರದ ಹಣವನ್ನು ಜಮೆ ಮಾಡಲಾಗುತ್ತಿರುತ್ತದೆ. ಈ ಮಾಹಿತಿಯು ತಮಗೆ ಅರ್ಥವಾಗದೇ ಗೊಂದಲಗಳು ಇದ್ದಲ್ಲಿ ಕೂಡಲೇ ಸಮೀಪದ ಕೃಷಿ ಇಲಾಖೆ ಅಥವಾ ತಾಲ್ಲೂಕು ಕಚೇರಿಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಲು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲೆಯಲ್ಲಿ ಬರಪರಿಸ್ಥಿತಿಯಿಂದ ಉಂಟಾದ ಬೆಳೆಹಾನಿಗೆ ಎಸ್.ಡಿ.ಆರ್.ಎಫ್ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಅರ್ಹತೆಯ ಅನುಗುಣವಾಗಿ ಈಗಾಗಲೇ ಮೊದಲನೇ ಹಂತದಲ್ಲಿ ಅರ್ಹ ರೈತರಿಗೆ ಗರಿಷ್ಟ 2000 ರೂ.ವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರದಿಂದ ಆದೇಶಿಸಲಾಗಿದೆ. ಅದರಂತೆ ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ ಫ್ರುಟ್ಸ್ ಐಡಿ ಹೊಂದಿರುವ ರೈತರಿಗೆ ಪರಿಹಾರ ತಂತ್ರಾAಶದ ಮೂಲಕ ಹಂತಹAತವಾಗಿ ಪರಿಹಾರ ವಿತರಣೆ ಮಾಡಲಾಗುತ್ತಿದ್ದು, ವಿಜಯನಗರ ಜಿಲ್ಲೆಯಲ್ಲಿ ಈವರೆಗೂ ಎರಡನೇ ಹಂತದಲ್ಲಿ ಒಟ್ಟು 1,09,543 ರೈತರಿಗೆ 130,08,07,810 ರೂ. ಇನ್ಪುಟ್ ಸಬ್ಸಿಡಿಯನ್ನು ಫ್ರುಟ್ಸ್ ಐಡಿನಲ್ಲಿರುವ ವಿಸ್ತೀರ್ಣವನ್ನು ಕ್ರಾಫ್ ಸರ್ವೆ ಯೊಂದಿಗೆ ಜೋಡಣೆ ಮಾಡಿ ತಂತ್ರಾAಶದ ಮುಖಾಂತರ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿರುತ್ತದೆ. ಈ ಪೈಕಿ 9854 ರೈತರಿಗೆ ತಾಂತ್ರಿಕ ಕಾರಣಗಳಿಂದಾಗಿ ಬೆಳೆ ಪರಿಹಾರದ ಮೊತ್ತವು ತಲುಪದೇ ವಾಪಸ್ಸು ಬಂದಿರುತ್ತದೆ.
ಅಕೌAಟ್ ಬ್ಲಾಕ್ ಆಗಿದ್ದಲ್ಲಿ ಅಥವಾ ಕ್ಲೋಸ್ ಆಗಿದ್ದಲ್ಲಿ ಅಂತಹ ರೈತರು ಕೂಡಲೇ ಬ್ಯಾಂಕ್‌ಗಳಿಗೆ ಹೋಗಿ ರಿ ಓಪನ್ ಮಾಡಿಸಬೇಕು. ಫ್ರುಟ್ಸ್ ತಂತ್ರಾAಶದಲ್ಲಿ ತಮ್ಮ ಹೆಸರನ್ನು ಅಫ್‌ಡೇಟ್ ಮಾಡಿಸಬೇಕು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದೇ ಇದ್ದಲ್ಲಿ, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗದೇ ಇದ್ದಲ್ಲಿ ಅಥವಾ ಫೇಲ್ಡ್ ಪೇಮೆಂಟ್ ಆಗಿದ್ದಲ್ಲಿ, ಐಎಫ್‌ಎಸ್‌ಸಿ ಕೋಡ್ ಇನ್‌ವಾಲಿಡ್ ಇದ್ದಲ್ಲಿ ಅಥವಾ ಎನ್‌ಪಿಸಿಐ ಜೋಡಣೆ ಮಾಡದೇ ಇದ್ದಲ್ಲಿ ರೈತರು ಕೂಡಲೇ ಬ್ಯಾಂಕ್‌ಗೆ ಹೋಗಿ ಎನ್‌ಪಿಸಿಐ ಮಾಡಿಸಬೇಕು. ಐಎಫ್‌ಎಸ್‌ಸಿ ಕೋಡನ್ನು ಅಪ್‌ಡೇಟ್ ಮಾಡಿಸಬೇಕು ಎಂದು ರೈತರಿಗೆ ಸಲಹೆ ಮಾಡಲಾಗಿದೆ.

 

 

ಜಾಹೀರಾತು
error: Content is protected !!