https://youtu.be/NHc6OMSu0K4?si=SI_K4goOPEgwo6h2
ಒಂದು ಹಳ್ಳಿಯಲ್ಲಿ ಸೂರ್ಯಪ್ಪ ಮತ್ತು ಸಾವಿತ್ರಮ್ಮ ಎಂಬ ದಂಪತಿಗಳಿಗೆ ಅನಿತ ಎಂಬ ಮಗಳಿದ್ದಳು. ಬಡವರಾದರೂ ಸಹ ದಂಪತಿಗಳಿಗೆ ಮಗಳ ಮೇಲೆ ಬಹಳ ಪ್ರೀತಿ ಇತ್ತು. ಅದರಂತೆ ಅನಿತಾಳಿಗೆ ಓದುವುದರಲ್ಲಿ ತುಂಬಾ ಆಸಕ್ತಿ ಇತ್ತು. ಅನಿತಾಳ ತಂದೆ ಮಗಳಿಗೋಸ್ಕರ ದುಡಿಮೆ ಮಾಡಿ ಓದಿಸುತ್ತಿದ್ದ. ಅವಳಿಗೊಂದು ನೌಕರಿ ಬರಬೇಕು ಅಂತ ಕನಸು ಕಟ್ಟಿಕೊಂಡಿದ್ದರು. ಅನಿತ ಅದನ್ನು ನೆರವೇರಿಸುವ ಭರವಸೆ ನೀಡಿದ್ದಳು.
ಅನಿತಾ ಶಾಲೆಯಲ್ಲಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೊದಲನೆ ಸ್ಥಾನ ಪಡೆಯುತ್ತಿದ್ದಳು. ಓದಿನಲ್ಲೂ ಸಹ ಎಲ್ಲರಿಗಿಂತ ಮುಂದೆ ಇದ್ದಳು. ಇದನ್ನು ಗಮನಿಸಿದ ದಂಪತಿಗಳು ಅನಿತಳಿಗೆ ಓದಲು ಸಹಾಯವಾಗಲಿ ಎಂಬ ಆಶಯದಿಂದ ಒಂದು ಮೊಬೈಲ್ ಕೊಡಿಸಿದರು. ಅನಿತ ಒಂದಿಷ್ಟು ದಿನ ಅದನ್ನು ಓದಲು ಮಾತ್ರ ಬಳಸಿದಳು. ದಿನಕಳೆದಂತೆ ಯಾವಾಗಲೂ ಫೋನಿನಲ್ಲಿಯೇ ಕಾಲ ಕಳೆಯಲು ಪ್ರಾರಂಭಿಸಿದಳು. ಹೀಗಾಗಿ ಓದುವುದರ ಕಡೆ ಗಮನ ಕಡಿಮೆಯಾಯಿತು. ಕ್ರಮೇಣವಾಗಿ ಅನಿತ ಮೊಬೈಲ್‌ಗೆ ಅಂಟಿಕೊAಡಳು. ಮೊಬೈಲ್ ಬರುವುದಕ್ಕೂ ಮೊದಲು ಮಧ್ಯ ರಾತ್ರಿಯವರೆಗೂ ಓದುತ್ತಿದ್ದ ಅನಿತ, ಈಗ ಮಧ್ಯರಾತ್ರಿಯವರೆಗೂ ಮೊಬೈಲ್ ನೋಡುವುದರಲ್ಲೆ ಕಾಲಕಳೆಯತೊಡಗಿದಳು. ಮೊಬೈಲ್‌ಗೆ ಅಂಟಿಕೊAಡ ಅನಿತ ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದಳು. ಓದಿನಲ್ಲೂ ಹಿಂದುಳಿದಳು. ಮೊಬೈಲ್‌ನಿಂದ ಅವಳು ತುಂಬಾ ಹಾಳಾಗಿ ಬಿಟ್ಟಳು.
ಒಂದು ದಿನ ಶಾಲೆಯಲ್ಲಿ ಶಿಕ್ಷಕರು ಮೊಬೈಲ್ ಬಗ್ಗೆ ತರಗತಿಯಲ್ಲಿ ಚರ್ಚೆ ನಡೆಸುತ್ತಿದ್ದರು. ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಆಗುವ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಉದಾಹರಣೆ ಸಮೇತ ಎಳೆ ಎಳೆಯಾಗಿ ತಿಳಿಸಿದರು. ಶಿಕ್ಷಕರು ಹೇಳುತ್ತಿರುವುದನ್ನು ಕೇಳುತ್ತ ಕೂತಿದ್ದ ಅನಿತಗೆ ತನಗೆ ಹೇಳುತ್ತಿದ್ದಾರೆ ಎನಿಸಿತು. ಶಿಕ್ಷಕರು ಹೇಳಿದ ಪ್ರತಿಯೊಂದು ಲಕ್ಷಣಗಳು ಅವಳಲ್ಲಿದ್ದವು. ತಾನು ಇದರಿಂದ ಹೊರಬರದ ಹೊರತು ತನಗೆ ಬೇರೆ ದಾರಿ ಇಲ್ಲ ಎಂಬುದನ್ನು ಅರಿತುಕೊಂಡಳು.
ತರಗತಿ ಮುಗಿದ ನಂತರ ಆಫೀಸ್ ರೂಂಗೆ ತೆರಳಿದ ಅನಿತ ತಮ್ಮ ಮೊಬೈಲ್ ಸಮಸ್ಯೆಯನ್ನು ಶಿಕ್ಷಕರೆದುರು ಹೇಳಿಕೊಂಡಳು. ಶಿಕ್ಷಕರು ಅವಳ ಎಲ್ಲಾ ಸಮಸ್ಯೆಗಳನ್ನು ಆಲಿಸಿ, ಮೊಬೈಲ್‌ನಿಂದ ದೂರ ಉಳಿಯುವಂತೆ ಸಲಹೆ ನೀಡಿದರು. ಅಂದಿನಿಂದ ಅನಿತ ಮೊಬೈಲ್‌ನ್ನು ತನ್ನ ವೈರಿ ಎಂಬಂತೆ ದೂರ ಇಟ್ಟಳು. ಕನಿಷ್ಠ ಕಾಲ್ ಮಾಡಲೂ ಸಹ ಬಳಸಲಿಲ್ಲ. ತಾನು ಮಾಡಿದ ತಪ್ಪಿಗೆ ತಂದೆ ತಾಯಿಯ ಬಳಿ ಕ್ಷಮೆ ಕೇಳಿದಳು. ಅಂದಿನಿಂದ ಪುನಃ ಪುಸ್ತಕಗಳ ಸಹವಾಸ ಮಾಡಿದಳು.
ಎಂದಿನಂತೆ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಳು. ಅನಿತ ಮೊದಲಿನಂತೆ ಆದುದು ಎಲ್ಲರಿಗೂ ಸಂತಸ ತಂದಿತ್ತು. ಶಾಲೆಯ ಪ್ರತಿ ಭಾಷಣದಲ್ಲೂ ಮೊಬೈಲ್‌ನಿಂದ ಆಗುವ ತೊಂದರೆಗಳನ್ನು ತನ್ನ ಉದಾಹರಣೆಯೊಂದಿಗೆ ಹೇಳುತ್ತ, ತನ್ನ ಸ್ನೇಹಿತರೂ ಮೊಬೈಲ್‌ನಿಂದ ದೂರ ಇರುವಂತೆ ಮನವಿ ಮಾಡಿದಳು. ನಮಗೆ ಮೊಬೈಲ್ ಒಂದು ಸಾಧನವಾಗಿ ಬೇಕೇ ಹೊರತು, ಅದೇ ಜೀವನವಲ್ಲ ಎಂಬ ಕಟುಸತ್ಯವನ್ನು ಎಲ್ಲರಿಗೂ ತಿಳಿಸಿದಳು. ಈಗ ನಿಮ್ಮ ಸರದಿ. ಮೊಬೈಲ್‌ನಿಂದ ದೂರ ಇದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು.
ಜಿ. ಶ್ವೇತ, ಜಿ.ಕೋಡಿಹಳ್ಳಿ
ಹಗರಿಬೊಮ್ಮನಹಳ್ಳಿ(ತಾ) ವಿಜಯನಗರ(ಜಿ)
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ