March 15, 2025

Hampi times

Kannada News Portal from Vijayanagara

ನಿಶಾ ಐಎಫ್‌ಎಸ್‌ಗೆ ಆಯ್ಕೆ ಗ್ರಾಮೀಣ ಪ್ರತಿಭೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ

 

https://youtu.be/NHc6OMSu0K4?si=SI_K4goOPEgwo6h2

 

 ಹಂಪಿ ಟೈಮ್ಸ್ ಕೂಡ್ಲಿಗಿ:

ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ ಸಿ) ನಡೆಸಿದ ಭಾರತೀಯ ಅರಣ್ಯ ಸೇವೆ(IFS) ಪರೀಕ್ಷೆಯಲ್ಲಿ  ಪಟ್ಟಣದ ನಿವಾಸಿಯಾಗಿರುವ ಎಸ್.ಎನ್.ನಿಶಾ 4 ನೇ ಪ್ರಯತ್ನದಲ್ಲಿ 147 ವಿಧ್ಯಾರ್ಥಿಗಳಲ್ಲಿ 90 ನೆ  ರ್ಯಾಂಕ್ ಪಡೆದು ಸಾಧನೆಗೈದಿದ್ದು, ರಾಜ್ಯದಲ್ಲಿ 11 ಜನ ಐಎಫ್ಎಸ್ ಗೆ ಆಯ್ಕೆಯಾಗಿದ್ದು ಅದರಲ್ಲಿ ನಿಶಾ ಒಬ್ಬರಾಗಿರುವುದು ಕುಟುಂಬದ ಸದಸ್ಯರು  ಹರ್ಷಗೊಂಡಿದ್ದಾರೆ.

ಆರಂಭದಿಂದ ಪಿಯುಸಿ ವರೆಗೂ ಕೂಡ್ಲಿಗಿ ಯಲ್ಲಿಯೇ ವಿಧ್ಯಾಭ್ಯಾಸ ಮಾಡಿರುವ ನಿಶಾ, ಈ ಮೊದಲು ಎಂಬಿಬಿಎಸ್ ಮಾಡುವ ಕನಸು ಹೊಂದಿದ್ದರು. ಆದರೆ ನಿರೀಕ್ಷಿತ ಅಂಕಗಳಿಸದೇ ಒಲ್ಲದ ಮನಸ್ಸಿನಿಂದ ಬಿಎಸ್ಸಿ ಫಾರೆಸ್ಟರಿ ಆಯ್ಕೆ ಮಾಡಿಕೊಂಡು ಕೊಡುಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಅಭ್ಯಾಸ ಆರಂಭ ಮಾಡಿದ್ದರು.  ಆದರೆ ಪಿಯುಸಿಯಲ್ಲಿ ಉನ್ನತ ಗುರಿ ಹೊಂದಿದ್ದ ಇವರು, ಏನಾದರೂ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಸದಾ ಹಾತೊರೆಯುತ್ತಲೆ ಇತ್ತು. ಪೊನ್ನಂ ಪೇಟೆಯಲ್ಲಿ ಇವರ ಉಪನ್ಯಾಸಕರು ಬಿಎಸ್ಸಿ ಯಲ್ಲಿಯೇ ನೀನು ಐಎಫ್ಎಸ್ ಮಾಡಬಹುದು ಎಂದು ಸಲಹೆಯನ್ನಿತ್ತಿದ್ದರು. ಸಾಮಾನ್ಯ ಜ್ಞಾನ (ಜಿಕೆ) ಕಡೆ ಹೆಚ್ಚಿನ ಅಭ್ಯಾಸ ಮಾಡುವ ಆಲೋಚನೆ ಮಾಡಿ ಪುಸ್ತಕಗಳನ್ನು ಓದಿದೆ. ಬಿಎಸ್ಸಿ ಕೊನೆಯ ವರ್ಷದಲ್ಲಿಯೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಕ್ಕೆ ಆರಂಭದಲ್ಲಿ ಬೇಕಾದ ತಯಾರಿಗೆ ನಾನು ಮಾನಸಿಕವಾಗಿ ಸಿದ್ದಳಾದೆ‌. ನಂತರ ಸಮಾಜ ಕಲ್ಯಾಣ ಇಲಾಖೆವತಿಯಿಂದ ಉಚಿತ ಕೋಚಿಂಗ್ ಪರೀಕ್ಷೆ ಇತ್ತು ಅದರಲ್ಲಿ ನಾನು ಪರೀಕ್ಷೆ ಬರೆದು ಅರ್ಹತೆ ಹೊಂದಿದೆ. ನಂತರ ಶಂಕರ್ ಐಎಎಸ್ ಕೋಚಿಂಗ್ ಸೆಂಟರ್ ನಲ್ಲಿ ಯುಪಿಎಸ್ ಸಿ ಕೊಚೀಂಗ್ ತೆಗೆದುಕೊಂಡೆ, ಮೊದಲ ಪ್ರಯತ್ನದಲ್ಲಿ ಅಷ್ಟಾಗಿ ತಯಾರಿ ಇರಲಿಲ್ಲ ಆದರೂ ಕೋವಿಡ್ ನಿಂದಾಗಿ ಸ್ವಲ್ಪ ಹಿನ್ನಡೆಯಾಯಿತು.

ಎರಡನೆ ಪ್ರಯತ್ನದಲ್ಲಿ ಜಿಕೆ ಮತ್ತು ಸಿಸ್ಯಾಟ್ ಪರೀಕ್ಷೆಗಳಲ್ಲಿ ಸಿಸ್ಯಾಟ್ ನಲ್ಲಿ 66 ಅಂಕಗಳನ್ನು ಪಡೆಯಬೇಕಿತ್ತು ಅದರಲ್ಲಿ ಹಿನ್ನಡೆಯಾಗಿತ್ತು, ಛಲ ಬಿಡದೇ ಮೂರನೇ ಪ್ರಯತ್ನ ಮಾಡಿದೆ ಅಲ್ಲಿ ಸಂದರ್ಶನದ ವರೆಗೂ ಹೋಗಲು ಮಾತ್ರ ಸಾಧ್ಯವಾಯಿತು. ಅದರೂ ಮನೆಯವರ ಬೆಂಬಲ ಮತ್ತು ಪ್ರೋತ್ಸಾಹ ಹಾಗೂ ನನ್ನ ಅಚಲ ಗುರಿ ಮಾತ್ರ ನಾನು ಬಿಡಲಿಲ್ಲ. ನಾಲ್ಕನೇ ಬಾರಿ ಕಠಿಣ ಅಭ್ಯಾಸ ಮಾಡಿ ಪರೀಕ್ಷೆ ಎದುರಿಸಿ ಈ ಯಶಸ್ಸುನ್ನು ಮುಡಿಗೇರಿಸಿಕೊಂಡೆ ಎಂದು ಅತ್ಯಂತ ಭಾವುಕಗಳಾಗಿ ಹೇಳಿದರು.

ನನ್ನ ಈ ಸಾಧನೆಗೆ ನನ್ನ ತಂದೆ ದಿವಂಗತ ಡಾ.ಶ್ರೀನಿವಾಸ್ ಅವರೇ ಪ್ರೇರಣೆ ಮತ್ತು ನನ್ನ ಈ ಯಶಸ್ಸಿಗೆ ನನ್ನ ತಾಯಿ ಜಯಮ್ಮ ಹಾಗೂ ದೊಡ್ಡಮ್ಮ ನಾಗಮಣಿ ಜಿಂಕಾಲ್ ಅವರೇ ಕಾರಣ ಆರಂಭದಲ್ಲಿ ಸೋಲು ಕಂಡರು ಯಾವ ಕಾರಣಕ್ಕೂ ಎದೆಗುಂದದೆ ಪರೀಕ್ಷೆ ಎದುರಿಸು ಎಂದು ಬೆಂಬಲ ನೀಡಿದ್ದು ನಾನು ನೆನಯಬೇಕು ಎಂದು ಹೇಳಿದ ನಿಶಾ, ನಾವು ಗ್ರಾಮೀಣ ವಿಧ್ಯಾರ್ಥಿಗಳು ಎಂಬ ಕೀಳಿರಿಮೆ ಯಾವ ವಿಧ್ಯಾರ್ಥಿಗಳು ಹೊಂದ ಬೇಡಿ, ಉನ್ನತ ಗುರಿಯೊಂದಿಗೆ, ಒಬ್ಬ ಗುರುವಿನ ಮಾರ್ಗದರ್ಶನದಲ್ಲಿ ಸತತ ಪ್ರಯತ್ನ, ಹಾಗೂ ಸತತ ಅಭ್ಯಾಸ ಇದ್ದರೆ ಖಂಡಿತವಾಗಿ ಯಶಸ್ಸು ಸಾಧ್ಯ ಎನ್ನುತ್ತಾರೆ. ಆನ್ಲೈನ್ ತರಬೇತಿ ಅವಕಾಶಗಳು ಸಾಕಷ್ಟು ಇವೆ ಅವುಗಳ ಸಹಾಯ ಪಡೆದು ಗ್ರಾಮೀಣ ಪ್ರದೇಶದಲ್ಲಿಯೇ ಓದಿ, ಆದರೆ ಸತತ ಓದು ಹಾಗೂ ಪತ್ರಿಕೆಗಳನ್ನು ಹೆಚ್ಚಾಗಿ ಓದಿದರೆ ನಿಮಗೆ ಉನ್ನತ ಗುರಿ ಮುಟ್ಟಲು ಸಾಧ್ಯ ಎನ್ನುತ್ತಾರೆ.

 

 

ಜಾಹೀರಾತು
error: Content is protected !!