November 7, 2024

Hampi times

Kannada News Portal from Vijayanagara

ಉಜ್ಜಿನಿ ಶ್ರೀ ಮರಳಸಿದ್ಧೇಶ್ವರ ಸ್ವಾಮಿ ರಥೋತ್ಸವದಲ್ಲಿ ಜನಸಾಗರ 

 

https://youtu.be/NHc6OMSu0K4?si=SI_K4goOPEgwo6h2

 

 

ಹಂಪಿ ಟೈಮ್ಸ್ ಕೊಟ್ಟೂರು‌

ಉಜ್ಜಿನಿ ಸದ್ಧರ್ಮ ಪೀಠದ ಶ್ರೀ ಮರಳಸಿದ್ಧಶ್ವರ ಸ್ವಾಮಿಯ ರಥೋತ್ಸವವು ಭಾನುವಾರ ಸಂಜೆ 6 ರ ವೇಳೆಗೆ ಅಸಂಖ್ಯಾತ ಭಕ್ತಸ್ತೋಮದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀಸ್ವಾಮಿಯ ಪಟವನ್ನು 2 ಲಕ್ಷ ರೂ.ಗೆ ಚಿತ್ರದುರ್ಗದ ಸಿದ್ದಾಪುರದ ಪ್ರವೀಣ್ ಸವಾಲಿನಲ್ಲಿ ಸ್ವೀಕರಿಸಿದರು.ಶ್ರೀ ಶೈಲ ಕೊಟ್ರೇಶ್ 80 ಸಾವಿರಕ್ಕೆ. ಹೂವಿನ ಹಾರವನ್ನು ಪಡೆದರು.

ಸವಾಲು ಪ್ರಕ್ರಿಯೆ ಮುನ್ನ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ನೆರದಭಕ್ತರ ಸಮ್ಮುಖದಲ್ಲಿ, ನಾಡಿನೆಲ್ಲೆಡೆ, ಮಳೆ,ಬೆಳೆ ಸಮೃದ್ಧವಾಗಿ ಆಗಿ, ರೈತರ ಬದುಕು ಅಸನಾಗಲಿ, ನಾಡಿನ ಸದ್ಬಕ್ತರಿಗೆ ಸನ್ಮಂಗಲ ಉಂಟಾಗಲಿ ಎಂದು ಆಶಿರ್ವಚನ ನೀಡಿ ಸಂಭ್ರಮದ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವ ಪ್ರಾರಂಭ ಆಗುತ್ತಿದ್ದಂತೆ, ಭಕ್ತರು ಬಾಳೆ ಹಣ್ಣು, ಉತ್ತುತ್ತಿ ,ಧವನ ಎಸೆದು ಮುಗಿಲು ಮುಟ್ಟುವಂತೆ ಜಯ ಘೋಷಣೆ ಹಾಕಿದರು. ರಥೋತ್ಸವ ಸಾಗುವ ಮುನ್ನ ಉತ್ಸವದ ಮೂರ್ತಿಗೆ ಶ್ರೀಮಠದಲ್ಲಿ ಧಾರ್ಮಿಕ ಪದ್ಧತಿಯಂತೆ ಪೂಜಾ ಕೈಂಕಾರ್ಯಗಳನ್ನು ಪೂರೈಸಿ, ಉತ್ಸವ ಮೂರ್ತಿಯನ್ನು 4.30 ರ ಸರಿಸುಮಾರಿಗೆ ಗರ್ಭಗುಡಿಯಿಂದ ಹೊರಗೆ ತಂದು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಮಂಗಳವಾದ್ಯಗಳ ಮೆರವಣಿಗೆಯೊಂದಿಗೆ ರಥದಬಳಿ ಭಕ್ತರು ಸಂಭ್ರಮದಿಂದ ಹೊತ್ತು ತಂದರು.

ಶ್ರೀಸ್ವಾಮಿಯ ಪಲ್ಲಕ್ಕಿ ಉತ್ಸವವು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಮೂರ್ತಿಯನ್ನು ರಥದ ಮೇಲೇರುಸುತ್ತಿದ್ದಂತೆ ಭಕ್ತರು ಹರ್ಷೋದ್ಗಾರದೊಂದಿಗೆ ಬಾಳೆ ಹಣ್ಣು, ಉತ್ತುತ್ತಿ ದವನ ಎಸೆದು ಭಕ್ತಿ ಸಮರ್ಪಿಸಿದರು.ರಥಕ್ಕೆ ಹಾಕಿದ ವಿವಿದ ಬಣ್ಣದ ಪೇಪರ್ ಚೂರಿನಿಂದ ಮಾಡಲಾದ ಬೃಹತ್ತಾದ ಮಾಲೆಯು ಜನರನ್ನು ಆಕರ್ಷಿಸಿತು.

ನಂತರ ರಥೋತ್ಸವವು ಪಾದಗಟ್ಟೆಯವರೆಗೆ ರಾಜ ಗಾಂಭೀರ್ಯದಿಂದ ಸಾಗಿ ಮತ್ತೆ ಸಹಸ್ರಾರು ಭಕ್ತರು ಜಯಘೋಷದೊಂದಿಗೆ 6.50 ರ ವೇಳೆಗೆ ಮೂಲಸ್ಥಾನಕ್ಕೆ ಮರುಳಿತು.ರಥೋತ್ಸವ ಮೂಲಸ್ಥಾನಕ್ಕೆ ನಿಲ್ಲುತ್ತಿದ್ದಂತೆ ಭಕ್ತರು ಸಂಭ್ರಮದಿಂದ ಜಯಕಾರ ಹಾಕಿ ಭಕ್ತಿಸಮರ್ಪಿಸಿದರು, ಉತ್ಸವ ಮೂರ್ತಿಯನ್ನು ಯತಾರೀತಿ ಶ್ರೀಮಠಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ರಥೋತ್ಸವ ವೇಳೆ ಕೂಡ್ಲಿಗಿ ಪ್ರಶಾಂತ್ ಸಾಗರ ಶಿವಾಚಾರ್ಯ ಸ್ವಾಮಿ,ಹರಪನಹಳ್ಳಿ ತಗ್ಗಿನಮಠದ ಸ್ವಾಮಿ ಸೇರಿದಂತೆ ವಿವಿಧ ಶಿವಾಚಾರ್ಯ ಸ್ವಾಮಿಗಳು,ವಿಜಯನಗರ ಎಸ್ಪಿ ಶ್ರೀಹರಿಬಾಬು,ಅಸಂಖ್ಯಾತ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಮರಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ ನಾಳೆ  : ಐತಿಹಾಸಿಕ ಪ್ರಸಿದ್ಧ ಶ್ರೀ ಉಜ್ಜಿನಿ ಮರಳಸಿದ್ಧೇಶ್ವರ ಸ್ವಾಮಿಯ ಶಿಖರ ತೈಲಾಭಿಷೇಕ ನಾಳೆ ಅಸಂಖ್ಯಾತ ಭಕ್ತ ಸ್ತೋಮದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ.

 

 

ಜಾಹೀರಾತು
error: Content is protected !!