November 7, 2025

Hampi times

Kannada News Portal from Vijayanagara

ಕಾಯಕ ಜೀವಿಗಳ ಚಳುವಳಿಯ ಹರಿಕಾರ ಬಸವಣ್ಣ: ಡಾ ಕೆ ರವೀಂದ್ರನಾಥ ‌

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಹೊಸಪೇಟೆ

ಸಾಂಸ್ಕೃತಿಕ ನಾಯಕ ಬಸವಣ್ಣ ತಳ ಸಮುದಾಯದ ಜನರನ್ನು ಒಗ್ಗೂಡಿಸಿ ಚಳುವಳಿಗೆ ಮುಂದಾದದ್ದು ನಾಡಿನ ಇತಿಹಾಸದಲ್ಲಿ ಮರೆಯಲಾರದ ಸಂದರ್ಭ. ಸರಳವಾದ ತತ್ವಗಳನ್ನು ನಿರೂಪಿಸಿದ ಬಸವಣ್ಣನವರು ಶ್ರಮ ಸಂಸ್ಕೃತಿಗೆ ಒತ್ತುಕೊಟ್ಟು ಕಾಯಕ ಮತ್ತು ದಾಸೋಹ ಸಿದ್ದಾಂತಗಳನ್ನು ಅನುಷ್ಠಾನಗೊಳಿಸಿದರು ಎಂದು ಡಾ.ಕೆ.ರವೀಂದ್ರನಾಥ ಹೇಳಿದರು

ವಿಜಯನಗರ ಜಿಲ್ಲಾ ಶರಣ ಸಾಹಿತ್ಯ, ಹೊಸಪೇಟೆ ತಾಲೂಕು ಘಟಕ ಹಾಗೂ ಮಹಿಳಾ ಕದಳಿ ವೇದಿಕೆ ಸಹಯೋಗದಲ್ಲಿ  ತಾಲೂಕಿನ ವಡ್ಡರಹಳ್ಳಿಯ ಸಮುದಾಯ ಭವನದಲ್ಲಿ  ಬಸವ ಜಯಂತಿ ಹಾಗೂ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮದ  ಅಧ್ಯಕ್ಷತೆವಹಿಸಿ ಮಾತನಾಡಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಸೌಭಾಗ್ಯ ಲಕ್ಷ್ಮಿ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,  ಕಾಯಕ ಜೀವಿಗಳ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನಿಟ್ಟ ಬಸವಣ್ಣನವರು ರಾಷ್ಟ್ರದ ಅಭಿವೃದ್ಧಿಗೆ ಇವರ ಪರಿಶ್ರಮ ಅತಿ ಮುಖ್ಯ ಎಂದು ವಿವರಿಸಿದರು. ದೇವರು, ದೇವಾಲಯ, ಧರ್ಮ, ಭಕ್ತಿ ಮುಂತಾದ ವಿಚಾರಗಳಲ್ಲಿ ಹೊಸತನವನ್ನು ರೂಪಿಸಿದ ಬಸವಣ್ಣನವರು ಸಾಂಸ್ಕೃತಿಕ ನಾಯಕರಾಗಿದ್ದಾರೆ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಬಿ ಸತೀಶಗೌಡ ಪ್ರಾಸ್ತಾವಿಕವಾಗಿ  ಮಾತನಾಡಿದರು. ಇದೇ ಸಂದರ್ಭದಲ್ಲಿ ಕಾಯಕ ಜೀವಿಗಳಾದ  ಬಡಿಗೇರ ಪರಶುರಾಮಪ್ಪ,  ಅಕ್ಕಸಾಲಿ ಅಕ್ಷಯ ಕುಮಾರ, ಮಸಣ ಕಾರ್ಮಿಕ ಅಂಕ್ಲಪ್ಪ, ಸ್ವಚ್ಛತಾ ಕಾರ್ಮಿಕ  ವಿ ಕೋಮರಪ್ಪ, ನರೇಗಾ ಕಾರ್ಮಿಕಳಾದ  ಫಾತಿಮಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಷಣ್ಮುಖಮ್ಮ, ಸದಸ್ಯರಾದ  ವಿ ದೇವೇಂದ್ರಪ್ಪ,  ವಿ ವೆಂಕಟೇಶ್,  ಕೊಟ್ರಮ್ಮ ಪಾಲ್ಗೊಂಡಿದ್ದರು.  ಶಿಕ್ಷಕಿ ಮೇರಿ ಮತ್ತು  ಸ್ವಾಮಿ ನಿರ್ವಹಿಸಿದರು.

 

 

 

 

 

 

ಜಾಹೀರಾತು
error: Content is protected !!