December 5, 2024

Hampi times

Kannada News Portal from Vijayanagara

ಮಳೆಗೆ 200 ಎಕರೆ ಬಾಳೆ ನೆಲಸಮ : ಶಾಸಕ ಗವಿಯಪ್ಪ ಭೇಟಿ ಪರಿಶೀಲನೆ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್  ಹೊಸಪೇಟೆ 

ತಾಲೂಕಿನಲ್ಲಿ ಶನಿವಾರ ರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನಲ್ಲಿ 200 ಎಕರೆ ಬಾಳೆ ಬೆಳೆ ಹಾನಿಯಾಗಿದ್ದು, 8 ಕಚ್ಚಾಮನೆಗಳ ಮೇಲ್ಚಾವಣಿ ಗಾಳಿಗೆ ಹಾರಿಹೋಗಿವೆ.  ಬಾಳೆ ಬೆಳೆಯನ್ನ ಮಕ್ಕಳಂತೆ ಜೋಪಾನ ಮಾಡಿ ಬೆಳೆಸಿದ್ದ ರೈತರು ನೆಲಕ್ಕೆ ಬಾಗಿದ ಬೆಳೆಯನ್ನು ಕಂಡು ಕಣ್ಣೀರಿಟ್ಟಿದ್ದಾರೆ.

ಶಾಸಕ ಎಚ್.ಆರ್.ಗವಿಯಪ್ಪ ಕಂದಾಯ ಅಧಿಕಾರಿಗಳೊಂದಿಗೆ ಭಾನುವಾರ ಬೆಳೆಹಾನಿಗೊಳಗಾದ ಹೊಸೂರು, ಬಸವನದುರ್ಗ, ಇಪ್ಪಿತೇರಿ, ನರಸಾಪುರ, ನಾಗೇನ‌ಹಳ್ಳಿ, ಕಳ್ಳಿ ರಾಂಪುರ, ಬೆಳಗೋಡು, 88 ಮುದ್ಲಾಪುರ, ಚಿತ್ತವಾಡಿಗಿ ಮಗಾಣಿಗಳಿಗೆ ಭೇಟಿ ನೀಡಿ  ಪರಿಶೀಲಿಸಿದರು. ವಿವಿಧಡೆ ಮನೆಗಳ ಮೇಲ್ಚಾವಣಿ ಶೀಟುಗಳು ಹಾರಿಹೋಗಿದ್ದು ಕಂಡ ಶಾಸಕರು, ರೈತರಿಗೆ  ಸರ್ಕಾರದಿಂದ ನಷ್ಟದ ಪರಿಹಾರ ಮತ್ತು ನಾಶವಾದ ಬೆಳೆ ಸ್ವಚ್ಛತೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಕೆಲವೇ ದಿನಗಳ ಹಿಂದೆ ಬಾಳೆ ಬೆಳೆ ಧರೆಗುರುಳಿ ಸಾವಿರಾರು ಎಕರೆ ಬೆಳೆ ನಾಶವಾಗಿ ರೈತರು ಸಂಕಷ್ಟದಲ್ಲಿದ್ದರು. ಪುನಃ ನಿನ್ನೆ ಶನಿವಾರ ರಾತ್ರಿ ಗಾಳಿ ಸಮೇತ ಮಳೆಯಾಗಿದ್ದರಿಂದ ಮತ್ತೆ ಬೆಳೆ ನಾಶವಾಗಿದೆ. ಇನ್ನೇನು ಫಲ ಕೊಡುವಂತ ಸಂದರ್ಭದಲ್ಲಿ ಈ ರೀತಿ ಆಗಿದೆ. 200 ಎಕರೆ ಬಾಳೆ ಹಾನಿಯಾಗಿದೆ. ಇಲಾಖೆಯಿಂದ ಹೆಕ್ಟರ್ ಗೆ 26,000 ಸಾವಿರ ಪರಿಹಾರ ಕೊಡಲು ಅವಕಾಶವಿದೆ.   ರೈತರಿಗೆ ಹೊರೆಯಾಗದಂತೆ ಬೇರೆ ಇಲಾಖೆಯೊಂದಿಗೆ ಮಾತನಾಡಿ ಬೆಳೆಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನಾಶವಾದ ಬೆಳೆಗಳನ್ನು ಸಮೀಕ್ಷೆ ಮಾಡಿ ಫಲಾನುಭವಿಗಳಿಗೆ ಸರ್ಕಾರದಿಂದ ಪರಿಹಾರ ಒದಗಿಸುವ ಕೆಲಸವನ್ನು ಮಾಡುತ್ತೇನೆ ಎಂದರು.

ಬೆಳೆ ಹಾನಿ: ಹೊಸೂರು 126 ಎಕರೆ, ನರಸಾಪುರ 20.15 ಎ. ಸೆಂಟ್ಸ್, ಕಳ್ಳಿರಾಂಪುರ 8.96 ಎ. ಸೆಂಟ್ಸ್, ಬೆಳಗೋಡು 7ಎಕರೆ, 88 ಮುದ್ಲಾಪುರ 2.70 ಎ. ಸೆಂಟ್ಸ್, ಚಿತ್ತವಾಡಿ 34.33ಎ.ಸೆಂಟ್ಸ್, ನಾಗೇನಹಳ್ಳಿ 1.64ಎ.ಸೆಂಟ್ಸ್, ಬಸವನದುರ್ಗ 00, ಒಟ್ಟು 195ರೈತರ 200.78 ಎ. ಹಾನಿಯಾಗಿದ್ದು ಬೆಳೆ ಸಮೀಕ್ಷೆ ಯಿಂದ ತಿಳಿದು ಬಂದಿದೆ. ಈ ಸಂಧರ್ಭದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ರಮೇಶ್, ಪಿಡಿಒ ಗಂಗಾಧರ , ಗ್ರಾಮ ಲೆಕ್ಕಧಿಕಾರಿ ಗುರುಬಸವರಾಜ್, ರೈತರರು ಮತ್ತು ಗ್ರಾಮಸ್ಥರು ಇದ್ದರು

 

 

ಜಾಹೀರಾತು
error: Content is protected !!