December 14, 2024

Hampi times

Kannada News Portal from Vijayanagara

ಕಮಲಾಪುರ ಶ್ರೀನಗರೇಶ್ವರ ತೇರಿಗೆ ಬಾಳೆಹಣ್ಣು, ಉತ್ತುತ್ತಿ ನಿಷೇಧ: ಜೂಟೂರು ನಾಗೇಂದ್ರಪ್ಪ ಶೆಟ್ಟಿ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ತಾಲೂಕಿನ ಕಮಲಾಪುರ ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿಯ ರಥೋತ್ಸವವು ಮೇ 10 ರಂದು ಸಂಜೆ 4ಕ್ಕೆ ಅಕ್ಷಯ ತೃತಿಯ ಶ್ರೀಬಸವಜಯಂತಿಯಂದು ನೆರವೇರಲಿದ್ದು, ತೇರಿಗೆ ಬಾಳೆಹಣ್ಣು, ಉತ್ತುತ್ತಿ ಎಸೆಯುವುದು ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಕಮಲಾಪುರ ಆರ್ಯವೈಶ್ಯ ಸಂಘದ ಅಧ್ಯಕ್ಷ ಜೂಟೂರು ನಾಗೇಂದ್ರಪ್ಪ ಶೆಟ್ಟಿ ತಿಳಿಸಿದ್ದಾರೆ.

ತೇರಿಗೆ ಬಾಳೆ ಹಣ್ಣು ಎಸೆಯುವುದರಿಂದ ಭಕ್ತರು, ಸನ್ನೆಹಾಕುವವರಿಗೆ ಸೇರಿದಂತೆ ಅನೇಕರಿಗೆ ತಾಗಿ, ತುಳಿದು ಅನೇಕ ಕಡೆ ಅವಘಡಗಳು ಸಂಭವಿಸಿದ್ದರಿಂದ, ಕಮಲಾಪುರ ಶ್ರೀನಗರೇಶ್ವರ ಸ್ವಾಮಿ ರಥೋತ್ಸವದಲ್ಲಿ ತೇರಿಗೆ ಬಾಳೆಹಣ್ಣು, ಉತ್ತತ್ತಿ ಎಸೆಯುವುದನ್ನು ಭಕ್ತರ ಹಿತದೃಷ್ಠಿಯಿಂದ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಬಾಳೆಹಣ್ಣು ಮಾರಾಟ ನಿಷೇಧವಿದ್ದು, ಪ್ರಕಟಣೆಯನ್ನು ನಿರ್ಲಕ್ಷಿಸಿ ಬಾಳೆಹಣ್ಣು ಉತ್ತುತ್ತಿ ಮಾರಾಟದಲ್ಲಿ ತೊಡಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಜನರ ಸುರಕ್ಷತೆಯ ದೃಷ್ಟಿಯಿಂದ ರಥೋತ್ಸವ ಸಮಿತಿಯಲ್ಲಿ ತೆಗೆದುಕೊಂಡ ನಿರ್ದಾರವಾಗಿದ್ದು, ಭಕ್ತರು ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

 

 

ಜಾಹೀರಾತು
error: Content is protected !!