November 11, 2024

Hampi times

Kannada News Portal from Vijayanagara

ಚುನಾವಣಾ ಕಾರ್ಯ ಬೇಜವಾಬ್ದಾರಿಗೆ ಮೂವರು ಅಮಾನತು : ಡಿಸಿ ದಿವಾಕರ ಆದೇಶ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹೊಸಪೇಟೆ
ಲೋಸಕಭಾ ಸಾರ್ವತ್ರಿಕ ಚುನಾವಣೆಯ ಕಾರ್ಯಕ್ಕೆ ಬೇಜವಾಬ್ದಾರಿ ತೋರಿದ ವಿಜಯನಗರ ಜಿಲ್ಲೆಯ ದ್ವಿತೀಯ ದರ್ಜೆ ಸಹಾಯಕ ಅಂದಾನಗೌಡ ಮುಲ್ಕಿ ಪಾಟೀಲ್, ಉಪನ್ಯಾಸಕಿ ಸುಧಾ ಎಸ್.ಆರ್., ಸಹಶಿಕ್ಷಕ ಪ್ರಶಾಂತ ಮೂವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶನಿವಾರ ಆದೇಶ ಹೊರಡಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ವಿಜಯನಗರ ಜಿಲ್ಲೆಯ 104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಿಬ್ಬಂದಿಯಾಗಿ ನೇಮಕಗೊಂಡಿದ್ದ ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಅಂದಾನಗೌಡ ಮುಲ್ಕಿ ಪಾಟೀಲ್ ಅವರು ಮೇ 1 ರಂದು ಜರುಗಿದ ತರಬೇತಿಗೆ ಅನುಮತಿ ಪಡೆಯದೆ ಗೈರಾಗಿದ್ದು, ನೋಟೀಸಿಗೂ ಸಮಜಾಯಿಷಿ ನೀಡದೇ ಚುನಾವಣಾ ಕಾರ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ, ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ವಿಜಯನಗರ ಜಿಲ್ಲೆಯ 89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷ ಅಧಿಕಾರಿಯಾಗಿ ನೇಮಕಗೊಂಡಿದ್ದ ಹಗರಿಬೊಮ್ಮನಹಳ್ಳಿ ತಾಲೂಕಿನ ಜಿ.ಬಿ.ಸರ್ಕಾರಿ ಪಿ.ಯು.ಕಾಲೇಜಿನ ಉಪನ್ಯಾಸಕಿ ಸುಧಾ ಎಸ್.ಆರ್. ಅವರು ಯಾವುದೇ ಅನುಮತಿ ಪಡೆಯದೇ ಮೇ 1 ರಂದು ತರಬೇತಿಗೆ ಗೈರಾಗಿದ್ದು, ಮೇ 2ರಂದು ಖುದ್ದು ಹಾಜರಾಗಿ ಸಮಜಾಯಿಷಿ ನೀಡುವಂತೆ ನೋಟೀಸ್ ಜಾರಿಮಾಡಿದ್ದರೂ, ಹಾಜರಾಗದೇ ಚುನಾವಣಾ ಕಾರ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿ ತೋರಿರುವುದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ವಿಜಯನಗರ ಜಿಲ್ಲೆಯ 96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷ ಅಧಿಕಾರಿಯಾಗಿ ನೇಮಕಗೊಂಡಿದ್ದ ಹೊಸಪೇಟೆ ವಿನೋಬಾ ಭಾವಿ ಸ.ಮಾ.ಹಿ.ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರಶಾಂತ ಅವರು ಯಾವುದೇ ಅನುಮತಿ ಪಡೆಯದೇ ಮೇ 1 ರಂದು ತರಬೇತಿಗೆ ಗೈರಾಗಿದ್ದು, ಮೇ 2ರಂದು ಖುದ್ದು ಹಾಜರಾಗಿ ಸಮಜಾಯಿಷಿ ನೀಡುವಂತೆ ನೋಟೀಸ್ ಜಾರಿಮಾಡಿದ್ದರೂ, ಹಾಜರಾಗದೇ ಚುನಾವಣಾ ಕಾರ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿ ತೋರಿರುವುದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್.ದಿವಾಕರ ಅವರು ಆದೇಶ ಪತ್ರದಲ್ಲಿ ಆದೇಶಿಸಿದ್ದಾರೆ.

 

 

 

ಜಾಹೀರಾತು
error: Content is protected !!