https://youtu.be/NHc6OMSu0K4?si=SI_K4goOPEgwo6h2
ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹೇಳಿಕೆ | ಮಕ್ಕಳಿಂದ ಅನಾರಣಗೊಂಡ ಸರ್ವಧರ್ಮ ರಥೋತ್ಸವದ ಸ್ತಬ್ಧಚಿತ್ರ
ಹಂಪಿ ಟೈಮ್ಸ್ ಹೊಸಪೇಟೆ
ಜಗದ್ಗುರು ಡಾ.ಸಂಗನಬಸವ ಶ್ರೀಗಳ ದ್ವಿತೀಯ ಪುಣ್ಯಸ್ಮರಣೋತ್ಸವವನ್ನು ವಿಶ್ವಧರ್ಮ ಪ್ರವಚನದ ಮೂಲಕ ನೆರವೇರಿಸಲಾಗಿದೆ. ಗುರು ಅಜ್ಜನವರ ಆಶೀರ್ವಾದದಿಂದ ಮತ್ತು ಭಕ್ತರ ಸಹಕಾರದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಸರ್ವಧರ್ಮ ಸಮನ್ವ ಮಹೋತ್ಸವ, ವಿಶ್ವಧರ್ಮ ಪ್ರವಚನ ಮಂಗಲಮಹೋತ್ಸವ, ಜಗದ್ಗುರು ಡಾ.ಸಂಗನಬಸವ ಶ್ರೀಗಳ ದ್ವಿತೀಯ ಪುಣ್ಯಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ಎಲ್ಲಾ ಧರ್ಮಗಳ ಗ್ರಂಥಗಳನ್ನಿಟ್ಟು ರಥೋತ್ಸವ ಆರಂಭಿಸಿರುವ ಪೂಜ್ಯ ಡಾ.ಸಂಗನಬಸವ ಶ್ರೀಗಳ ಕಲ್ಪನೆ ವಿಶೇಷವಾದದ್ದು. ಎಲ್ಲಾ ಧರ್ಮಗಳ ಸಾರ ಒಂದೇ ಎನ್ನುವ ಸಂದೇಶವನ್ನು ಸರ್ವಧರ್ಮ ಸಮನ್ವಯ ರಥೋತ್ಸವ ಸಾರುತ್ತದೆ. ಸೋಮವಾರ ಸಂಜೆ ೪ ಗಂಟೆಗೆ ಬೈಲುವದಿಗೇರಿ ಸದ್ಭಕ್ತರು ರಥೋತ್ಸವದ ಹಗ್ಗ ತರಲಿದ್ದಾರೆ. ನಗರದ ಜಂಬುನಾಥ ಸರ್ಕಲ್‌ಗೆ ಎಲ್ಲರೂ ಪಾಲ್ಗೊಂಡು ರಥೋತ್ಸವದಲ್ಲಿ ಭಾಗವಹಿಸಬೇಕು ಎಂದರು.
ಗರಗ-ನಾಗಲಾಪುರದ ಶ್ರೀ ನಿರಂಜನಪ್ರಭು ಮಹಾಸ್ವಾಮಿಗಳು ಮಾತನಾಡಿ, ಸಮಾಜಕ್ಕಾಗಿ ಬದುಕಿದವರು ಸದಾ ಸ್ಮರಣೀಯರಾಗಿರುತ್ತಾರೆ. ಮಾಡಬಾರದ್ದನ್ನು ಮಾಡಿದರೆ ಸಮಾಜ ಕ್ಷಣಕಾಲದಲ್ಲೇ ಮರೆಯುತ್ತದೆ. ಪ್ರತಿಯೊಬ್ಬರು ಸತ್ಕಾರ್ಯ, ಸತ್ಸಂಗಗಳಲ್ಲಿ ಭಕ್ತಿಪೂರ್ವಕವಾಗಿ ಭಾಗಿಯಾಗಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಕಮತಿಗಿ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಮತ್ತು ಹೊಸಳ್ಳಿ ಶ್ರೀ ಬೂದೀಶ್ವರ ಸಂಸ್ಥಾನಮಠದ ಶ್ರೀ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಲಿಂಗೈಕ್ಯ ಡಾ.ಸಂಗನಬಸವ ಶ್ರೀಗಳ ಕತೃತ್ವ ಶಕ್ತಿಕುರಿತು ಭಕ್ತರಿಗೆ ಉಣಬಡಿಸಿದರು.
ದರೂರು ಸಂಗನಬಸವೇಶ್ವರಮಠದ ಶ್ರೀ ಕೊಟ್ಟೂರು ಮಹಾಸ್ವಾಮಿಗಳು, ಸೋಮಸಮುದ್ರದ ಸಿದ್ಧಲಿಂಗ ದೇಶಿಗರು ಉಪಸ್ಥಿತರಿದ್ದರು. ಪ್ರವಚನಕಾರರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಅವರು ಹನ್ನೊಂದನೆ ದಿನದ ಪ್ರವಚದಲ್ಲಿ ಭಕ್ತರಲ್ಲಿ ಭಕ್ತಿಯ ಮಹತ್ವವನ್ನು ಜಾಗೃತಿಗೊಳಿಸಿದರು.
ಹೊಸಪೇಟೆಯ ಶ್ರೀ ಜಗದ್ಗುರು ಸಂಗನಬಸವೇರ್ಶವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ರಾಣಿ ಚನ್ನಮ್ಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎಸ್.ಶರಣಯ್ಯ ನಿರ್ವಹಿಸಿದರು.
More Stories
ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್ಗೌಡ ಪಾಟೀಲ್
ಮೊದಲ ಉದ್ಯೋಗ ಮೇಳದಲ್ಲಿ 417 ಅಭ್ಯರ್ಥಿಗಳು ಆಯ್ಕೆ, 9 ಲಕ್ಷ ರೂ.ವರೆಗೆ ಪ್ಯಾಕೇಜ್ : ಮೆಟ್ರಿ ಮಲ್ಲಿಕಾರ್ಜುನ
ಐವರು ಸಾಧಕರು ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ : ಸಿಎಂ ಸಿದ್ದರಾಮಯ್ಯ