https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ನಗರದ ಶ್ರೀಕರಿ ಆಸ್ಪತ್ರೆವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.7 ರಂದು ಬೆಳಿಗ್ಗೆ 10.30ಕ್ಕೆ ನಗರದ ಶ್ರೀಕರಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ವಿಜಯನಗರ ಜಿಲ್ಲಾಧಿಕಾರಿ ಎಂ. ಎಸ್.ದಿವಾಕರ ಅವರು ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಶ್ರೀ ತಾಯಮ್ಮ ಶಕ್ತಿ ಸಂಘದ ನಿರ್ದೇಶಕಿ ಕವಿತಾ ಈಶ್ವರಸಿಂಗ್, ಡಿಎಚ್‌ಒ ಡಾ.ಎಲ್.ಶಂಕರನಾಯ್ಕ, ತಾಲೂಕು ಅರೋಗ್ಯಾಧಿಕಾರಿ ಡಾ.ಡಿ.ಭಾಸ್ಕರ ಉಪಸ್ಥಿತರಿರಲಿದ್ದಾರೆ. ವೈದ್ಯರಾದ ಡಾ.ಎಸ್.ಗಂಗೋತ್ರಿ, ಡಾ. ಪ್ರವೀಣ್ ಆರ್ ಅರಕೇರಿ ಮತ್ತು ಡಾ.ನವೀನ್ ಕುಮಾರ್.ಎ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಿದ್ದಾರೆ.
ತಪಾಸಣೆ: ಗರ್ಭಿಣಿಯರಿಗೆ ಉಚಿತ ತಪಾಸಣೆ, ಬಂಜೆತನ ಚಿಕಿತ್ಸೆ, ಪ್ಯಾಪ್ ಸ್ಮೀಯರ್, ಮಮೊಗ್ರಫಿ, ಮೂಳೆ ಖನಿಜ ಸಾಂದ್ರತೆ, ಕಣ್ಣುಗಳನ್ನು ತಪಾಸಣೆ, ಹೃದಯ ತಪಾಸಣೆ ECG ಮತ್ತು 2D echo ತಪಾಸಣೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ