December 14, 2024

Hampi times

Kannada News Portal from Vijayanagara

ಫೆ.27, ವಿ.ರಾಮಿರೆಡ್ಡಿ ರೋಟರಿ ಐಸಿಯು ಅಂಬುಲೆನ್ಸ್ ಲೋಕಾರ್ಪಣೆ: ಸೈಯದ್ ನಾಜಿಮುದ್ದಿನ್

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ವಿಜಯನಗರ ಜಿಲ್ಲೆಯ ಜನರಿಗೆ ತುರ್ತು ಸಂದರ್ಭದಲ್ಲಿ ಅತ್ಯವಶ್ಯವಾದ ಐಸಿಯು ಅಂಬುಲೆನ್ಸ್ ಕೊರತೆ ನೀಗಿಸುವುದರೊಂದಿಗೆ ಕೈಗೆಟುಕುವ ದರದಲ್ಲಿ ಸೇವೆ ನೀಡಲು ರೋಟರಿ ಕ್ಲಬ್ ಮತ್ತೊಂದು ದಿಟ್ಟೆ ಹೆಜ್ಜೆ ಇಟ್ಟಿದೆ ಎಂದು ವಿ.ರಾಮಿರೆಡ್ಡಿ ರೋಟರಿ ಐಸಿಯು ಅಂಬುಲೆನ್ಸ್ ಸಹ ಅಧ್ಯಕ್ಷ ಸೈಯದ್ ನಾಜಿಮುದ್ದೀನ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಜನರ ಅಗತ್ಯತೆಗಳಿಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸಿ ಸಾಕಾರಗೊಳಿಸುತ್ತಾ ಬಂದಿದೆ. ಇದೂವರೆಗೂ ಐಸಿಯು ಅಂಬೆಲೆನ್ಸ್‌ಗಳಿಗಾಗಿ ನೆರೆ ಜಿಲ್ಲೆಗಳನ್ನು ಅವಲಂಬಿಸಬೇಕಿತ್ತು. ಸಮಯದ ವಿಳಂಭ ಹಾಗೂ ಸಕಾಲದೊಳಗೆ ಸೇವೆ ದೊರೆಯದ್ದರಿಂದ ಅನೇಕರು ಉಸಿರುಚೆಲ್ಲುತ್ತಿದ್ದರು. ಜನರ ಅಗತ್ಯತೆಗಳನ್ನು ಅರಿತು ಜಿಲ್ಲಾ ಕೇಂದ್ರದಲ್ಲಿ ಸಂಪೂರ್ಣ ಹವಾ ನಿಯಂತ್ರಿತ, ತಜ್ಞ ತಂತ್ರಜ್ಞ ಸಿಬ್ಬಂದಿಯೊಂದಿಗೆ ಐಸಿಯು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದೆ. ರೋಟರಿಯಿಂದ ಆರಂಭಗೊಂಡ ಪ್ರತಿ ಸೇವೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಇದೀಗ ಮತ್ತೊಂದು ಸೇವೆ ಸೇರ್ಪಡೆಗೊಂಡು ಜನರ ಪ್ರಾಣ ರಕ್ಷಣೆಗೆ ಮುಂದಾಗಿದೆ. ತುರ್ತು ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಐಸಿಯು ಅಂಬುಲೆನ್ಸ್ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಫೆ.27 ರಂದು ಬೆಳಿಗ್ಗೆ 10.30ಕ್ಕೆ ನಗರದ ರೋಟರಿ ಕ್ಲಬ್‌ನಲ್ಲಿ ಅಂಬುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೋಟೇರಿಯನ್ ಜಿಲ್ಲಾ ಗವರ್ನರ್ ಮನಿಕ್ ಪವರ್, ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಡಿಎಚ್‌ಒ ಶಂಕರ್ ನಾಯ್ಕ, ದಾನಿ ತಿರುಪತಿ ನಾಯ್ಡು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ವಿ.ರಾಮಿರೆಡ್ಡಿ ರೋಟರಿ ಐಸಿಯು ಅಂಬುಲೆನ್ಸ್ ಕಾರ್ಯದರ್ಶಿ ರಾಜೇಶ್ ಕೋರಿಶೆಟ್ಟಿ ರೋಟರಿ ಕ್ಲಬ್ ಸೇವೆ ಕುರಿತು ವಿವರಿಸಿದರು.ರೋಟರಿ ಅಧ್ಯಕ್ಷ ಆರ್.ಸತ್ಯನಾರಾಯಣ, ಕಾರ್ಯದರ್ಶಿ ಕೆ.ಎಸ್.ದಾದಾಪೀರ, ರೋಟೇರಿಯನ್ ವಿಜಯಸಿಂಧಗಿ ಸೇರಿದಂತೆ ಇತರರು ಇದ್ದರು.

 

 

ಜಾಹೀರಾತು
error: Content is protected !!