November 7, 2024

Hampi times

Kannada News Portal from Vijayanagara

ಮತ್ತೊಮ್ಮೆ ಮೋದಿ ಸರ್ಕಾರ ಅಭಿಯಾನ : ಕಿಚಿಡಿ ಕೊಟ್ರೇಶ

 

https://youtu.be/NHc6OMSu0K4?si=SI_K4goOPEgwo6h2

 

 

ಹಂಪಿ ಟೈಮ್ಸ್  ಹೊಸಪೇಟೆ:

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿಚಿಡಿ ಕೊಟ್ರೇಶ್ ನಗರದಲ್ಲಿ ಬುಧವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ
ಮತ್ತೊಮ್ಮೆ ಮೋದಿ ಸರ್ಕಾರ ಬರಬೇಕಿದ್ದು, ಈಗಾಗಲೆ ಮನೆ ಮನೆಗೆ ಬಿಜೆಪಿ ಅಭಿಯಾನ ಶುರುಮಾಡಲಾಗಿದೆ. ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷರಾದ ಚನ್ನಬಸವನಗೌಡ ಪಾಟೀಲ್ ಅವರ ಸೂಚನೆ ಮೇರೆಗ ಜಿಲ್ಲಾ ಯುವ ಮೋರ್ಚಾ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಧ್ಯಂತ ಮತ್ತೊಮ್ಮೆ ಮೋದಿ ಸರ್ಕಾರ ಗೋಡೆ ಬರಹ ಅಭಿಯಾನವನ್ನು ಯಶಸ್ವಿಗೊಳಿಸಲಾಗುವುದು. ಈಗಾಗಲೇ ಕೂಡ್ಲಿಗಿ, ಹಗರಿಬೊಮ್ಹಮನಳ್ಳಿ, ಹಡಗಲಿ ಹಾಗೂ ಹರಪನಹಳ್ಳಿ ವಿಧಾನಸಭಾ ವ್ಯಾಪ್ತಿಯಲ್ಲಿ ಯುವ ಮೋರ್ಚಾದ ವತಿಯಿಂದ ಗೋಡೆ ಬರಹ ಅಭಿಯಾನ ಶುರುವಾಗಿದೆ ಎಂದರು.

ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರು ದೇವಲಾಪುರ, ಹೊನ್ನೂರಪ್ಪ, ಬಿ.ಜೆ.ಕವಿತಾ, ಭಾರತಿ, ಮಧುರಚೆನ್ನ ಶಾಸ್ತ್ರೀ, ಯುವ ಮೋರ್ಚಾದ ಶ್ರೀಕಾಂತ್ ಪೂಜಾರ, ರಾಜಹುಲಿ, ರಾಘವೇಂದ್ರ ಇತರರಿದ್ದರು.

 

 

ಜಾಹೀರಾತು
error: Content is protected !!