November 7, 2025

Hampi times

Kannada News Portal from Vijayanagara

ಸಂವಿಧಾನ ಜಾಗೃತಿ ಜಾಥಕ್ಕೆ ಅಭೂತಪೂರ್ವ ಬೆಂಬಲ: ಎಂ.ಎಸ್.ದಿವಾಕರ

https://youtu.be/NHc6OMSu0K4?si=SI_K4goOPEgwo6h2

ವಿಜಯನಗರ ಜಿಲ್ಲೆಯಲ್ಲಿನ ಒಟ್ಟು 84 ಗ್ರಾಮ ಪಂಚಾಯತಿ ಹಾಗೂ 5 ನಗರಾಡಳಿತ ಪ್ರದೇಶದಲ್ಲಿ ಜಾಥಾ ಸಂಚರ

ಹಂಪಿ ಟೈಮ್ಸ್‌ ಹೊಸಪೇಟೆ :

ರಾಜ್ಯಾದ್ಯಂತ ಜನವರಿ 26ರಿಂದ ಪ್ರಾರಂಭಗೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆಯುವುದರ ಜೊತೆಗೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್  ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಭಾರತ ದೇಶವು ಜನವರಿ 26ರಂದು 75ನೇ ಗಣರಾಜ್ಯೋತ್ಸವನ್ನು ಆಚರಿಸಿದ್ದು, ಇದರ ಭಾಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಸಂವಿಧಾನದ ಆಶಯಗಳನ್ನು ಈಡೇರಿಸುವ ಹಾಗೂ ಸಮ ಸಮಾಜವನ್ನು ನಿರ್ಮಿಸುವ ದ್ಯೆಯೋದ್ದೇಶವನ್ನು ಇಟ್ಟುಕೊಂಡು “ಸಂವಿಧಾನ ಜಾಗೃತಿ ಜಾಥಾ” ಎಂಬ ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಡಿ ಇಲ್ಲಿಯವರೆಗೂ ವಿಜಯನಗರ ಜಿಲ್ಲೆಯಲ್ಲಿನ ಒಟ್ಟು 84 ಗ್ರಾಮ ಪಂಚಾಯತಿ ಹಾಗೂ 5 ನಗರಾಡಳಿತ ಪ್ರದೇಶದಲ್ಲಿ ಜಾಥಾ ಸಂಚರಿಸಿದ್ದು, ರೂಟ್ ಮ್ಯಾಪ್‌ನ ಶೇ.61.37% (1300 ಕಿ.ಮೀ) ರಷ್ಟು ಜಾಥವು ಪೂರ್ಣಗೊಳಿಸಿದೆ. ಎಲ್.ಇ.ಡಿ ಮೌಂಟೆಡ್ ಡಿಸ್‌ಪ್ಲೇ ಮೂಲಕ ಸಂವಿದಾನದ ಮಹತ್ವ, ರಾಜ್ಯನಿರ್ದೇಶಕ ತತ್ವಗಳು, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ಡಾ.ಬಿ.ಆರ್ ಅಂಬೇಡ್ಕರ್ ರವರ ಪರಿಕಲ್ಪನೆ, ಬಸವಣ್ಣನವರ ವಚನಗಳು, ಮೂಲಭೂತ ಹಕ್ಕುಗಳು ಮತ್ತ ಕರ್ತವ್ಯಗಳ ಬಗ್ಗೆ ಸಾರ್ವಜನಿಕರಿಗೆ ಮುಖ್ಯವಾಗಿ ಯುವಜನರಿಗೆ ಜ.26 ರಿಂದ ಫೆ.23ರ ವರೆಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ವಿವಿಧ ಕಲಾ ಪ್ರದರ್ಶನ, ರ‍್ಯಾಲಿಗಳ ಮೂಲಕ ವಿಶೇಷ ಜಾಗೃತಿ:
ಜಿಲ್ಲೆಯಲ್ಲಿ 48 ಸೈಕಲ್ ರ‍್ಯಾಲಿ, 37 ಮೊಟಾರ್ ಬೈಕ್ ರ‍್ಯಾಲಿ, 17 ಹೀಲಿಯಂ ಬಲೂನ್ಸ್, 25 ಬಂಡಿ ರ‍್ಯಾಲಿ, 18 ಟ್ಯ್ರಾಕ್ಟರ್ ರ‍್ಯಾಲಿ, 29 ಕ್ಯಾಂಡಲ್ ಮಾರ್ಚ್ ಹಾಗೂ ಡೊಳ್ಳು, ಕಹಳೆ, ನಂದಿಕೋಲು ಕುಣಿತ, ತಮಟೆ, ತಾಷಾರಾಂ ಡೋಲು ಹಾಗೂ ಮುಂತಾದ ಕಲಾತಂಡಗಳ ಪ್ರದರ್ಶನ ಮೂಲಕ ವಿಶೇಷ ಜಾಗೃತಿ ಮೂಡಿಸಲಾಗುತ್ತಿದ್ದೆ. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ 1ಲಕ್ಷಕ್ಕೂ ಅಧಿಕ ಹಸ್ತಪ್ರತಿಗಳನ್ನು ಜಿಲ್ಲೆಯ ಸಾರ್ವಜನಿಕರಿಗೆ ವಿತರಣೆ ಮಾಡಲಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಂವಿಧಾನ ಮೌಲ್ಯಗಳ ಸ್ಮರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ ನಡೆಯುತ್ತಿರುವ ಸಂವಿಧಾನ ಜಾಗೃತಿ ಕಾರ್ಯಕ್ರಮದಡಿ ವಿಜಯನಗರ ಜಿಲ್ಲೆಗೆ ಉತ್ತಮ ಶ್ರೇಯಾಂಕ ದೊರೆಯುತ್ತಿದೆ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯತಿಯ ವೇದಿಕೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದು ಶಾಲಾ ಮಕ್ಕಳಿಂದ ನಾಟಕ ಹಾಗೂ ಪ್ರಭಂಧ ಮತ್ತು ಚರ್ಚಾಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾ ಸಾಗಿದೆ. ಸಂವಿಧಾನ ಜಾಗೃತಿ ಜಾಥವು ಪ್ರಸ್ತುತ ಹರಪ್ಪನಹಳ್ಳಿ ತಾಲುಕಿನಲ್ಲಿದ್ದು, ಹರಪ್ಪನಹಳ್ಳಿ ಮತ್ತು ಕೊಟ್ಟೂರು ತಾಲ್ಲೂಕುಗಳಲ್ಲಿ ಸಂಚರಿಸಿ ಫೆ.24 ಮತ್ತು ಫೆ.25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಜರುಗುವ ಬೃಹತ್ ರಾಷ್ಟ್ರೀಯ ಸಂವಿಧಾನ ಜಾಗೃತಿ ಜಾಥಾದಲ್ಲಿ ಪಾಲ್ಗೊಳ್ಳುವ ಮುಖಾಂತರ ಕೊನೆಗೊಳ್ಳಲಿದೆ. ಹಾಗಾಗಿ ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಯುವಜನರು ಹಾಗೂ ಎಲ್ಲಾ ಸಮುದಾಯದ ಸಂಘ-ಸಂಸ್ಥೆಗಳ ಮುಖಂಡರುಗಳು ಸಂವಿಧಾನದ ಮಹತ್ವವನ್ನು ಅರಿತುಕೊಳ್ಳಲು ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತ್ತು ಇಲಾಖೆಯ ಅಧಿಕೃತ ಜಾಲತಾಣಗಳಾದ: twitter@JDSWDVNG, facebook-DDswd vijayanagara, youtube-ddswd vijayanagara, instagram- ddswdvijayanagara, whatsapp ಗಳಲ್ಲಿ ಹಂಚಿಕೊಳ್ಳಲಾದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ವೀಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಲೈಕ್, ಶೇರ್ & ಕಮೆಂಟ್ಸ್ ಗಳ ಮೂಲಕ ವ್ಯಕ್ತಪಡಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸದಾಶಿವ ಪ್ರಬು ಬಿ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 

 

 

 

ಜಾಹೀರಾತು
error: Content is protected !!