https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ನಗರದ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ದಲ್ಲಿ ಫೆ.15 ರಂದು ಸಂಜೆ 7 ಗಂಟೆಗೆ ಶಿವಾನುಭವ ಸಂಪದ-1160 ನಡೆಯಲಿದೆ.
ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸುವರು. ಕನ್ನಡ ವಿವಿ ಪ್ರಾಧ್ಯಾಪಕ ಡಾ.ಕೆ.ರವೀಂದ್ರನಾಥ ಉಪನ್ಯಾಸ ನೀಡಲಿದ್ದಾರೆ. ಹೊಸಪೇಟೆ ನೂತನ ತಹಶೀಲ್ದಾರ್‌ರಾಗಿ ಆಗಮಿಸಿರುವ ಶೃತಿ ಎಂ.ಮಳ್ಳಪ್ಪಗೌಡ್ರ ಇವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಆರ್‍ಯವೈಶ್ಯ ಸಮಾಜದ ಮಾಜಿ ಅಧ್ಯಕ್ಷ ಭೂಪಾಳ ರಾಘವೇಂದ್ರಶೆಟ್ರು, ಹೊಸಪೇಟೆ ಬ್ರಾಹ್ಮಣ ಸಂಘದ ಅದ್ಯಕ್ಷ ಕೆ.ದಿವಾಕರ, ಅಖಿಲ ಕರ್ನಾಟಕ ಬ್ರಾಹ್ಮಣರ ಮಹಾಸಭಾದ ನಿರ್ದೇಶಕ ಹೆಚ್.ಉಮೇಶ, ಶ್ರೀ ಆದಿನಾಥ ಜೈನ್ ಶ್ವೇತಾಂಬರ ಸಂಘದ ಅಧ್ಯಕ್ಷ ಕೇಸರಿಮಲ್ ಜೈನ ಉಪಸ್ಥಿತರಿರಲಿದ್ದಾರೆ. ಸದ್ಭಕ್ತರು ಸಕಾಲಕ್ಕೆ ಆಗಮಿಸಿ ಶಿವಾನುಭವದ ಪ್ರಯೋಜನ ಪಡೆಯಬೇಕೆಂದು ಕೊಟ್ಟೂರುಸ್ವಾಮಿ ಸಂಸ್ಥಾನ ಮಠ ತಿಳಿಸಿದೆ.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ