December 8, 2024

Hampi times

Kannada News Portal from Vijayanagara

ಹಂಪಿ ಅಂಗಳದ ಮರಿಯಮ್ಮನಹಳ್ಳಿಗೆ ಮೋದಿ ಬಂದಿದ್ರು…

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:  ಪ್ರಧಾನಿ ನರೇಂದ್ರಮೋದಿರವರು 80ರ(1988) ದಶಕದಲ್ಲಿ ಅಂದಿನ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮುರುಳಿಮನೋಹರಜೋಷಿರವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡ ರಥಯಾತ್ರೆಯು‌ ಪಟ್ಡಣದ ಮೂಲಕ ಹಾದುಹೋಗಿದೆ, ಆ ಯಾತ್ರೆಯಲ್ಲಿ ಮೋದಿರವರು ಪಾಲ್ಗೊಂಡ ಭಾವಚಿತ್ರ ಪಟ್ಟಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರವರು ಕೂಡ ಯಾತ್ರೆಯ ರಥದಲ್ಲಿದ್ದರು. ಪಟ್ಡಣದಲ್ಲಿ ಅಂದ ಬಿಜೆಪಿಯ್ನ ದಿ.ಜೊಳ್ಳಿರಾಮಣ್ಷ,ದಿ.ಮಣೆಗಾರರಾಮಾಂಜಿನೇಯ,ಕುಪ್ಪಾಗೋವಿಂದರಾಜ್(ಗೋಪಿ) ಸೈಕಲ್ ಶಾಪ್ ರಾಘವೇಂದ್ರ ಸೇರಿದಂತೆ ಅನೇಕರು ಬಿಜೆಪಿಯನ್ನು ಸಂಘಟಿಸಿದ್ದರು.

“ಪ್ರಧಾನಿ‌ ನರೇಂದ್ರಮೋದಿಜೀರವರು 1988ರಲ್ಲಿ ನಮ್ಮೂರಿಗೆ ಬಂದಿದ್ದರು,ಇಂದು ರಾಷ್ಟ್ರದ ಹೆಮ್ಮೆಯ ಪ್ರಧಾನಿ.ಇವರು ನಮ್ಮೂರ ಮೂಲಕ ಅಂದು ಹಾದುಹೋಗಿರುವುದು ಇಂದು ನಮಗೆ ಪುಳಕವಾಗುತ್ತಿದೆ.ಏಕೆಂದರೆ ಆದರ್ಶಪುರುಷ ಶ್ರೀರಾಮಚಂದ್ರರ ಮಂದಿರ ಉದ್ಘಾಟನೆಯ ಈ ಸಂಧರ್ಭದಲ್ಲಿ ನಮೋರವರು ನಮ್ಮೂರಿಗೆ ಬಂದಿದ್ದರು ಎಂಬುದು ಹೆಮ್ಮೆಯ‌ ಸಂಗತಿ.”- ಕುಪ್ಪಾ ಗೋವಿಂದರಾಜ್(ಗೋಪಿ)

 

 

ಜಾಹೀರಾತು
error: Content is protected !!