December 8, 2024

Hampi times

Kannada News Portal from Vijayanagara

ಹಂತ ಹಂತವಾಗಿ ತುಂಗಭದ್ರಾ ಕಾಲುವೆಗೆ ನೀರು ಪೂರೈಕೆ : ಸಚಿವ ಶಿವರಾಜ ಎಸ್‌ ತಂಗಡಗಿ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ

ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಚಿವ ಶಿವರಾಜ ಎಸ್.ತಂಗಡಗಿ ಅಧ್ಯಕ್ಷತೆಯಲ್ಲಿ ವಿಧಾನ ಸೌಧ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ತುಂಗಭದ್ರಾ ಯೋಜನೆಯ 120ನೇ ತುರ್ತು ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ತುಂಗಭದ್ರಾ ಎಡದಂಡೆ, ತುಂಗಭದ್ರಾ ಬಲದಂಡೆ ಕೆಳಮಟ್ಟದ ಮತ್ತು ಮೇಲ್ಮಟ್ಟದ ಕಾಲುವೆಗಳಿಗೆ ಹಂತ ಹಂತವಾಗಿ ನೀರು ಹರಿಸುವ ಮೂಲಕ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಪೂರೈಕೆ, ಹಾಗೂ ಈಗಿನ ಬೆಳೆಗಳ ಸಂರಕ್ಷಣೆಗೆ ನೀರು ಕಾಯ್ದಿರಿಸುವ ಕುರಿತು ವಿಸ್ತೃತ ಚರ್ಚೆ ನಡೆಸಿದರು.

ಸಭೆಯ ನಿರ್ಣಯಗಳು:

ತುಂಗಭದ್ರಾ ಎಡದಂಡೆ ವಿಜಯನಗರ ಕಾಲುವೆ: 0.300 ಟಿ.ಎಂ.ಸಿ ನೀರನ್ನು ಕುಡಿಯುವ ಸಲುವಾಗಿ ಕಾಯ್ದಿರಿಸಲಾದ 0.500 ಟಿ.ಎಂ.ಸಿ ನೀರಿನಲ್ಲಿ ದಿನಾಂಕ:22.01.2024 ರಿಂದ 30.04.2024 ರವರೆಗೆ 50 ಕ್ಯೂಸೆಕ್ಸ್ ಆನ್ ಅಂಡ್ ಆಫ್ ನಂತೆ (ಕುಡಿಯುವ ನೀರೊಳಗೊಂಡು) ಉಳಿದಂತೆ ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿ.ಎಂ.ಸಿ. ನೀರನ್ನು ದಿನಾಂಕ: 15.02.2024 ರಿಂದ 25.02.2024ರವರೆಗೆ0.600 ಟಎಂಸಿ ಮತ್ತು ದಿನಾಂಕ 10.04.2024ರಿಂದ 20.4.2024 ವರೆಗೆ 700 ಕ್ಯೂಸೆಕ್ ನಂತೆ 0.600 ಟಿ.ಎಂ.ಸಿ ಕುಡಿಯುವ ಸಲುವಾಗಿ ಹರಿಸಬಹುದಾಗಿದೆ.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ :
ದಿನಾಂಕ:21.01.2024ರಿಂದ 31.01.2024 ರವರೆಗೆ 100ಕ್ಯೂಸೆಕ್ಸ್ ನಂತೆ ಮತ್ತು ಫೆಬ್ರವರಿ-2024 ಮತ್ತು ಮಾರ್ಚ್-2024 ತಿಂಗಳಲ್ಲಿ 10ದಿನಗಳಿಗೊಮ್ಮೆ 100 ಕ್ಯೂಸೆಕ್ಸ್ ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆಕಟ್ಟೆಗಳನ್ನು ತುಂಬಿಸುವುದು.

ರಾಯ ಬಸವಣ್ಣ ಕಾಲುವೆ:
ವಿಜಯನಗರ ಜಿಲ್ಲೆಗೆ  ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ದಿನಾಂಕ:21.01.2024 ರಿಂದ 30.05.2024 ರವರೆಗೆ 100 ಕ್ಯೂಸೆಕ್ಸ್ ನಂತೆ ಆನ್ ಅಂಡ್ ಆಫ್ ನಂತೆ ಕುಡಿಯುವ ನೀರೊಳಗೊಂಡು ಹರಿಸಬಹುದಾಗಿದೆ ಎಂದು ಸಭೆಯ ಸಭಾಧ್ಯಕ್ಷರು ತಿಳಿಸಿದ್ದಾರೆ.

ಸಚಿವರಾದ ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಬೋಸರಾಜು, ವಿಜಯನಗರ ಜಿಲ್ಲಾ ಉಸ್ರತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕರಾದ ಎಚ್.ಆರ್.ಗವಿಯಪ್ಪ, ಜನಾರ್ಧನರೆಡ್ಡಿ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಮೂರು ಜಿಲ್ಲೆಗಳ ಶಾಸಕರು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!