December 14, 2024

Hampi times

Kannada News Portal from Vijayanagara

ಕಲೆ ಸಂಸ್ಕೃತಿ ಉಳಿವಿಗೆ ಹಂಪಿ ಉತ್ಸವ ಆಚರಣೆ : ಶಾಸಕ ಎಚ್ ಆರ್ ಗವಿಯಪ್ಪ

 

https://youtu.be/NHc6OMSu0K4?si=SI_K4goOPEgwo6h2

ಕ್ಲಾಸಿಕಲ್‌ಗೆ ಆದ್ಯತೆ, ಡಿಸ್ಕೋಗೆ ಬ್ರೇಕ್ ಡಿಸಿ ಎಮ್.ಎಸ್.ದಿವಾಕರ  ಹೇಳಿಕೆ

ಹಂಪಿ ಉತ್ಸವಕ್ಕೆ 15 ಕೋಟಿ ರೂ.ಗೆ ಪ್ರಸ್ತಾವನೆ | ಉತ್ಸವ ಜನೋತ್ಸವವನ್ನಾಗಿಸಲು ಸಕಲ ಪ್ರಯತ್ನ

ಹಂಪಿ ಟೈಮ್ಸ್ ಹೊಸಪೇಟೆ
ಬರಗಾಲದ ಹೆಸರಲ್ಲಿ ಕಲೆ ಬರಡಾಗಬಾರದೆಂಬ ಆಶಯದಿಂದ ಕಲಾವಿದರ ಕಲೆ ಉಳಿವಿಗಾಗಿ ಹಂಪಿ ಉತ್ಸವವನ್ನು ಸಾಂಸ್ಕೃತಿಕ ವಿಜೃಂಭಣೆಯಿಂದ ಆಚರಿಸಲು ಸಿಎಂ ಸಿದ್ದರಾಮಯ್ಯನವರೊಂದಿಗೆ ತೀರ್ಮಾನಿಸಲಾಗಿದೆ. ಎಲ್ಲರ ಅಭಿಪ್ರಾಯದೊಂದಿಗೆ ಧಾರ್ಮಿಕ ಕ್ಷೇತ್ರದಲ್ಲಿ ದೇವರಿಗೆ ಮೆಚ್ಚುವಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶಾಸಕ ಹೆಚ್.ಆರ್.ಗವಿಯಪ್ಪ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶಾಸಕ ಹೆಚ್.ಆರ್. ಗವಿಯಪ್ಪ ಅವರ ಸಮ್ಮುಖದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಮೀಣ ಜನರು ಎತ್ತು ಬಂಡಿಯೊಂದಿಗೆ ಕುಟುಂಬ ಸಮೇತರಾಗಿ ಹಂಪಿಗೆ ಆಗಮಿಸಿ ಒಂದೆರೆಡು ದಿನ ಉಳಿಯುತ್ತಾರೆ. ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಉತ್ಸವಕ್ಕೆ ಬಂದವರಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗುವುದು. ಹಂಪಿ ಉತ್ಸವದಲ್ಲಿ ಸ್ಥಳೀಯ, ಜಿಲ್ಲೆ, ರಾಜ್ಯದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಂಪಿ ಉತ್ಸವದ ರೂವಾರಿ ಎಂಪಿ ಪ್ರಕಾಶರ ಚಿಂತನೆಗಳಂತೆ ಹೊರ ರಾಜ್ಯ, ಅಂತರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸುವ ಚಿಂತನೆ ಇದೆ. ನಮ್ಮ ಬಡ್ಜೆಟ್‌ಗೆ ಅನುಗುಣವಾಗಿ ಕಲಾವಿದರನ್ನು ಆಹ್ವಾನಿಸಲಾಗುವುದು. ರಾಜ್ಯ ಸಾಂಸ್ಕೃತಿಕ ಸೌರಭವನ್ನು ಪ್ರವಾಸಿಗರಿಗೆ ಉಣಬಡಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಎಮ್.ಎಸ್.ದಿವಾಕರ ಮಾತನಾಡಿ, ಕಳೆದ ವರ್ಷದ ಅಚಾತುರ್ಯಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಹಾಗೂ ಜನಾಕಾರ್ಷಣೆ ಉತ್ಸವ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿಯಂತೆ ನಾಲ್ಕು ಮತ್ತೊಂದು ವೇದಿಕೆ ನಿರ್ಮಿಸಲಾಗುವುದು. ಗಾಯತ್ರಿಪೀಠ, ವಿರೂಪಾಕ್ಷ ದೇವಾಲಯ, ಎದುರುಬಸವಣ್ಣ ಮತ್ತು ಸಾಸಿವೆ ಕಾಳು ಗಣಪ ಹಾಗೂ ಧ್ವನಿ ಮತ್ತು ಬೆಳಕು ಪ್ರದರ್ಶನವನ್ನು ಗಜಾಲಯ ಆವರಣದಲ್ಲಿ ವೇದಿಕೆ ನಿರ್ಮಾಣಗೊಳ್ಳಲಿವೆ. ಹಂಪಿ ಉತ್ಸವದ ನೆಲ ಸಾಂಸ್ಕೃತಿಕ ಕಲೆಯ ತವರಾಗಿದ್ದು, ಈ ಬಾರಿ ಡಿಸ್ಕೋ ಮತ್ತು ಫ್ಯಾಶನ್ ಶೋನಂಥ ವಿದೇಶಿ ಸಂಸ್ಕೃತಿಗೆ ಬ್ರೇಕ್ ಹಾಕಲಾಗಿದೆ. ಫೆ.2ರಿಂದ ಮೂರು ದಿನಗಳ ಕಾಲ ನಡೆಯುವ ಉತ್ಸವಕ್ಕೆ ೧೫ ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಳೀಯ ಉದ್ಯಮಿಗಳಿಂದ ಸಿಎಸ್ಸಾರ್ ನಡ ಸಹಕಾರ ಪಡೆಯಲಾಗುವುದು. ತಾಲೂಕನಾದ್ಯಂತ 100 ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು.

ಉತ್ಸವಕ್ಕೆ ತಡವಾಗಿ ದಿನಾಂಕ ಘೋಷಣೆಯಾದರು ಉತ್ಸವ ನಡೆಸಲು ಉತ್ಸುಕರಾಗಿರುವ ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳ, ಅನುಭವಿಗಳ ಸಲಹೆ ಪಡೆದು ಉತ್ಸವವನ್ನು ಯಶಸ್ವಿ ಮಾಡಲು ಸಕಲ ಪ್ರಯತ್ನ ಮಾಡಲಾಗುವುದು. ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಜನರಲ್ಲಿ ಭಕ್ತಿ, ಶಾಂತಿ ಭಾವವನ್ನು ಪ್ರೇರೇಪಿಸುವ ಸಂಗೀತ ಕಾರ್ಯಕ್ರಮಗಳಿಗೆ ಆದ್ಯತೆ ನಿಡಲಾಗುತ್ತದೆ.

ಜನಾಕರ್ಷಣೆಗಾಗಿ ವಿಶೇಷ ಕಾರ್ಯಕ್ರಮ: ಐತಿಹಾಸಿಕ ಉತ್ಸವಕ್ಕೆ ಸ್ವಯಂ ಪ್ರೇರಣೆಯಿಂದ ಆಗಮಿಸಲು ಇಚ್ಚಿಸುವ ಖ್ಯಾತ ಗಾಯಕರನ್ನು ಕರೆತರುವ ಯೋಜನೆ ಇದೆ. ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನ ಸಮುದಾಯವನ್ನು ಆಕರ್ಷಿಸಲು ಉತ್ಸವದಲ್ಲಿ ವೈವಿಧ್ಯಮಯವಾಗಿ ಕಾರ್ಯಕ್ರಮ ರೂಪಿಸಲಾಗುವುದು. ರೈತರಿಗಾಗಿ ಕೃಷಿ ಪ್ರದರ್ಶನ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಮಹಿಳೆಯರಿಗಾಗಿ ಕ್ಲಾಸಿಕಲ್ ಸಂಗೀತ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸಲಾಗುವುದು. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಹಯೋಗದೊಂದಿಗೆ ಶಾಲಾ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಲಾಗುವುದು. ಹಂಪಿ ಉತ್ಸವದಲ್ಲಿ ಪ್ರತಿ ಬಾರಿ ಸಾಂಪ್ರದಾಯಿಕವಾಗಿ ನಡೆಸುವ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕುಸ್ತಿ ಹಾಗೂ ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ಎಲ್ಲಾ ಬಗೆಯ ಕ್ರೀಡಾ ಸ್ಪರ್ಧೆಗಳಿಗೆ ಉತ್ಸವದಲ್ಲಿ ಅವಕಾಶವಿರಲಿದೆ ಎಂದರು.

ಹಂಪಿ ವಿವಿಯ ಸಹಯೋಗ: ಹಂಪಿಯ ಇತಿಹಾಸದಲ್ಲಿ ಕನ್ನಡ ವಿಶ್ವ ವಿದ್ಯಾಲಯವು ಒಂದು ಕಿರೀಟವಿದ್ದಂತೆ. ವಿಶ್ವ ವಿದ್ಯಾಲಯದ ಕುಲಪತಿಗಳು ಸೇರಿದಂತೆ ಅಲ್ಲಿನ ಎಲ್ಲ ವಿಭಾಗಗಳ ಪ್ರಾಧ್ಯಾಪಕರೊಂದಿಗೆ ಚರ್ಚಿಸಿ ಪುಸ್ತಕ ಮಳಿಗೆ ಸೇರಿದಂತೆ ವಿಭಿನ್ನ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಗೊಂದಲಬೇಡ: ಉತ್ಸವದಲ್ಲಿ ಮಾಧ್ಯಮ ಪ್ರತಿನಿಧಿಗಳು, ಕಲಾವಿದರು, ಗಣ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಇನ್ನೀತರರು ಉತ್ಸವದಲ್ಲಿ ಅಚ್ಚುಕಟ್ಟಾಗಿ ಭಾಗಿಯಾಗಿ ಉತ್ಸವವನ್ನು ಯಶಗೊಳಿಸುವ ನಿಟ್ಟಿನಲ್ಲಿ ಗೊಂದಲವಾಗದಂತೆ ಪಾಸುಗಳ ವಿತರಣೆ ಮಾಡಲಾಗುವುದು. ಉತ್ಸವದಲ್ಲಿ ಕೋವಿಡ್ ನಿಮಯಗಳು ಅಡ್ಡಿಯಾಗಂತೆ ಮುನ್ನೆಚ್ಚರಿಕೆವಹಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಹೆಚ್.ಆರ್. ಗವಿಯಪ್ಪ, ಜಿಪಂ ಸಿಇಓ ಸದಾಶಿವ ಪ್ರಭು ಬಿ, ಸಹಾಯಕ ಆಯುಕ್ತರಾದ ಮಹದ್ ಅಲಿ ಅಕ್ರಂ ಷಾಹ ಇದ್ದರು.

 

 

ಜಾಹೀರಾತು
error: Content is protected !!