November 7, 2024

Hampi times

Kannada News Portal from Vijayanagara

ಹೊಸಪೇಟೆ ವಕೀಲರ ಸಂಘದ ಅಧ್ಯಕ್ಷರಾಗಿ ಕೆ.ಪ್ರಹ್ಲಾದ್ , ಉಪಾಧ್ಯಕ್ಷರಾಗಿ ಎಚ್.ಎಂ.ಮಂಜುನಾಥ ಸ್ವಾಮಿ ಅಯ್ಕೆ

 

https://youtu.be/NHc6OMSu0K4?si=SI_K4goOPEgwo6h2

 

 

ಹಂಪಿ ಟೈಮ್ಸ್ ಹೊಸಪೇಟೆ

ಹೊಸಪೇಟೆ ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಜರುಗಿದ ಚುನಾವಣೆಯಲ್ಲಿ ಕೆ.ಪ್ರಹ್ಲಾದ 95 ಮತ ಪಡೆದು ಅಧ್ಯಕ್ಷರಾಗಿ. ಎಚ್.ಎಂ.ಮಂಜುನಾಥಸ್ವಾಮಿ 184 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ, ಪಿ.ಶ್ರೀನಿವಾಸ ಮೂರ್ತಿ 116 ಮತ ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಮರಿಯಪ್ಪ 145 ಮತ ಗಳಿಸುವ ಮೂಲಕ ಖಜಾಂಚಿಯಾಗಿ ಆಯ್ಕೆಯಾದರೆ, ವಿ.ರವಿಕುಮಾರ್ ಜಂಟಿ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿಗಳಾದ ಜಿ.ಕೊಟ್ರಗೌಡ ಮತ್ತು ಕೆ.ರಾಮಪ್ಪ ತಿಳಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಯುಸೂಫ್. ಬಿ.ಸಿ.ಮಹಂತೇಶ, ಕೇಶವ.ಇ.ಎ., ಹಾಜಿ ರಫಿಯಾ ಜಬೀನ್, ಬಿ.ಅಲ್ತಾಫ್ ಪಾಷಾ, ಸತೀಶ್.ಎಸ್.ಎಂ., ಆರ್.ಭಾಗ್ಯಲಕ್ಷ್ಮೀ, ಗೋಪಿ.ಆರ್., ಬಿ.ಎಚ್.ರಮೇಶ, ಎ.ಯರ್ರಿಸ್ವಾಮಿ, ಆನಂದ ಡೊಳ್ಳಿನ, ಕೆ.ರಾಘವೇಂದ್ರ ಹಾಗೂ ಜಿ.ಮಾರುತಿಸಿಂಗ್ ಆಯ್ಕೆಯಾಗಿದ್ದಾರೆ.

ವಕೀಲರ ಸಂಘದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಣದಲ್ಲಿದ್ದವರು: ಕೆ.ಪ್ರಹ್ಲಾದ (95 ಮತ) ಡಿ.ವೀರನಗೌಡ(72 ಮತ) , ಕೆ.ವಿ.ಬಸವರಾಜ (53 ಮತ), ಪಿ.ವೆಂಕಟೇಶಪ್ಪ (21 ಮತ) ಸ್ಪರ್ಧಿಸಿದ್ದರು.
ವಕೀಲರ ಸಂಘದ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಕಣದಲ್ಲಿದ್ದವರು: ಎಚ.ಎಂ.ಮಂಜುನಾಥಸ್ವಾಮಿ (184 ಮತ), ಎಚ್.ಎಸ್.ದಿವಾಕರ ರಾವ್ (58 ಮತ) ಸ್ಪರ್ಧಿಸಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಗಳಾಗಿ ಕಣದಲ್ಲಿದ್ದವರು: ಶ್ರೀನಿವಾಸ ಮೂರ್ತಿ (116 ಮತ), ಪಿ.ನಾಗಭೂಷಣ (73 ಮತ), ಶ್ರೀಕೃಷ್ಣದೇವರಾಯಲು.ಬಿ. (52 ಮತ) ಸ್ಪರ್ಧಿಸಿದ್ದರು.
ವಕೀಲರ ಸಂಘದ ಖಜಾಂಚಿ ಸ್ಥಾನದ ಅಭ್ಯರ್ಥಿಗಳಾಗಿ ಕಣದಲ್ಲಿದ್ದವರು: ಎ.ಮರಿಯಪ್ಪ (145 ಮತ), ರಾಜಾಮೊಹ್ಮದ ಎನ್.ಬಡಿಗೇರ್ (96 ಮತ) ಸ್ಪರ್ಧಿಸಿದ್ದರು. 252 ಮತದಾರರ ಪೈಕಿ 242 ಮತದಾನವಾಗಿದೆ, ಅಧ್ಯಕ್ಷ ಸ್ಥಾನಕ್ಕೆ 3, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 3 ಮತ್ತು ಖಜಾಂಚಿ ಸ್ಥಾನಕ್ಕೆ 2 ಮತಗಳು ಅಸಿಂಧುಗೊಂಡಿವೆ ಎಂದು ತಿಳಿಸಿದರು.

 

 

ಜಾಹೀರಾತು
error: Content is protected !!