December 14, 2024

Hampi times

Kannada News Portal from Vijayanagara

BDCC Bank ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಕಾಣೆಯಾದ ಬಣ!

 

https://youtu.be/NHc6OMSu0K4?si=SI_K4goOPEgwo6h2

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಗೆ ನಾಮಪತ್ರ ಸಲ್ಲಿಸಿದ್ದ ಸ್ಪರ್ಧಾಕಾಂಕ್ಷಿ ಚೊಕ್ಕಬಸವನಗೌಡ, ದಾರುಕೇಶ ಮತ್ತು ನಾಮನಿರ್ದೇಶಿತ ನಿರ್ದೇಶಕರು  ಸಭೆಗೆ ಗೈರು

ಹಂಪಿ ಟೈಮ್ಸ್ ಹೊಸಪೇಟೆ

ನಗರದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆ ಪ್ರಕ್ರಿಯೆಗೆ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ವಿಶ್ವಜೀತ್ ಮಹ್ತಾ ಹೇಳಿದರು.
ನಗರದ ಬಿಡಿಸಿಸಿ ಬ್ಯಾಂಕ್ ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕ ಕೆ.ತಿಪ್ಪೇಸ್ವಾಮಿ, ನಿರ್ದೇಶಕ ಚೊಕ್ಕಬಸವನಗೌಡ ನಾಮಪತ್ರ ಸಲ್ಲಿಸಿದ್ದಾರೆ. ನಿರ್ದೇಶಕರಾದ ಪಿ.ಮೂಕಯ್ಯಸ್ವಾಮಿ, ಐ.ದಾರುಕೇಶ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
14 ಚುನಾಯಿತ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು ಮತ್ತು ಅಪೇಕ್ಸ್ ಬ್ಯಾಂಕ್ ನಾಮನಿರ್ದೇಶಿತ ತಲಾ ಒಬ್ಬ ಸದಸ್ಯರು ಸೇರಿ ಒಟ್ಟು 16 ನಿರ್ದೇಶಕರ ಪೈಕಿ 8 ನಿರ್ದೇಶಕರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಆಯ್ಕೆ ಪ್ರಕ್ರಿಯೆಗೆ ಕನಿಷ್ಠ 9 ನಿರ್ದೇಶಕರು ಇರಬೇಕಾಗುತ್ತದೆ. ಕೋರಂ ಕೊರತೆ ಇದ್ದುದರಿಂದ ನಾಮಪತ್ರ ಪರಿಶೀಲನೆ ಸೇರಿದಂತೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಮುಂದಿನ ದಿನಾಂಕವನ್ನು ಶೀಘ್ರದಲ್ಲೆ ತಿಳಿಸಲಾಗುವುದು. ಮುಂದಿನ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಹೊಸದಾಗಿ ನಾಮಪತ್ರ ಸಲ್ಲಿಕೆಗೆ ಆಕಾಂಕ್ಷಿಗಳಿಗೆ ಅವಕಾಶವಿರುವುದಿಲ್ಲ ಈಗ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರಗಳ ಪರಿಶೀಲಿಸಿ ಮುಂದಿನ ಆಯ್ಕೆ ಕಾರ್ಯ ಕೈಗೊಳ್ಳಲಾಗುವುದು ಎಂದರು.

 

ಸಭೆಯಲ್ಲಿ ಹಾಜರಿದ್ದವರು :
ನಿರ್ದೇಶಕರಾದ ಎಲ್.ಎಸ್.ಆನಂದ, ಪಿ.ಮೂಕಯ್ಯಸ್ವಾಮಿ, ಕೆ.ತಿಪ್ಪೇಸ್ವಾಮಿ, ವೈ.ಅಣ್ಣೆಪ್ಪ, ಡಿ.ನವೀನ್ ಕುಮಾರ ರೆಡ್ಡಿ, ಜೆ.ಎಂ.ಶಿವಪ್ರಸಾದ, ವಿ.ಆರ್.ಸಂದೀಪ್‌ಸಿಂಗ್, ಡಿ.ವಿಶ್ವನಾಥ ಹಾಜರಿದ್ದರು. ಆದರೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಚೊಕ್ಕಬಸವನಗೌಡ, ಐ.ದಾರುಕೇಶ. ನಾಮಪತ್ರ ಪರಿಶೀಲನೆ ಮತ್ತು ಆಯ್ಕೆ ವೇಳೆ ಸಭೆಯಲ್ಲಿ ಗೈರು ಹಾಜರಾಗಿದ್ದರಿಂದ ಆಯ್ಕೆ ಪ್ರಕ್ರಿಯೆ ಸ್ಥಗಿತಗೊಂಡು ಮುಂದೂಡಲ್ಪಟ್ಟಿತು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧೨ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಅಧ್ಯಕ್ಷ ಸ್ಥಾನಕೆಕ ಇಬ್ಬರು, ಉಪಾಧ್ಯಕ್ಷ ಸ್ಥಾನಕ್ಕೆ ಇಬ್ಬರು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ೨ಗಂಟೆ ಪರಿಶೀಲನೆ ಕಾರ್ಯ ನಡೆಯಬೇಕಿತ್ತು. ಕೋರಂ ಕೊರತೆಯಿಂದ ನಾಮಪತ್ರ ಪರಿಶೀಲನೆ ಸೇರಿದಂತೆ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ೧೬ ನಿರ್ದೇಶಕರ ಪೈಕಿ ಕೇವಲ ೮ ನಿರ್ದೇಶಕರು ಹಾಜರಿದ್ದರು. ಅಧ್ಯಕ್ಷ ಸ್ಥಾನಕೆಕ ನಾಮಪತ್ರ ಸಲ್ಲಿಸಿದ ಚೊಕ್ಕಬಸವನಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಐ.ದಾರುಕೇಶ ಆಯ್ಕೆ ಸಭೆ ವೇಳೆ ಗೈರಾಗಿದ್ದಾರೆ.

| ವಿಶ್ವಜೀತ ಮೆಹ್ತಾ, ಚುನಾವಣಾಧಿಕಾರಿ, ಹೊಸಪೇಟೆ.

 

 

 

ಜಾಹೀರಾತು
error: Content is protected !!