https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:
ರಾಜ್ಯದಲ್ಲಿ ಬರಗಾಲದ ಭೀಕರ ಪರಿಸ್ಥಿತಿ ಇದ್ದರೂ ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ 3-4 ಮಾದರಿಯ ವರದಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇಂದ್ರಸರ್ಕಾರ, ರಾಜ್ಯಕ್ಕೆ ಬರಪರಿಹಾರ ಬಿಡುಗಡೆಗೆ ವಿಳಂಬ ಮಾಡುತ್ತಿದೆ ಎಂದು ಹ.ಬೊ.ಹಳ್ಳಿ ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.
ಅವರು ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಜಿಲ್ಲಾ ಖನಿಜನಿಧಿಯ 28.46ಕೋಟಿರೂ.ಗಳ 100ಅಡಿ ಎತ್ತರದ ಧ್ವಜಸ್ಥಂಭ ನಿರ್ಮಾಣಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಸಚಿವರು,ದೇಶದ ಪ್ರಧಾನಮಂತ್ರಿಗಳಿಗೆ ಅಗೌರವಯುತವಾಗಿ ಮಾತನಾಡುತ್ತಾರೆ.ಇಂತಹ ಸಂಸ್ಕೃತಿಯ ಮುಖ್ಯಮಂತ್ರಿ ಹಾಗು ಸಚಿವರ, ಭೇಟಿಗೆ ಪ್ರಧಾನಮಂತ್ರಿಗಳು ಒಪ್ಪುವುದಿಲ್ಲ. ಪ್ರಧಾನಮಂತ್ರಿ, ಕೇಂದ್ರ ಸಚಿವರೊಂದಿಗೆ ರಾಜ್ಯದ ಸಚಿವರು ಸಮನ್ವಯ ಕಾಪಾಡಿಕೊಳ್ಳದ ಕಾರಣಕ್ಕಾಗಿ ಇರುವುದರಿಂದ, ಬರಗಾಲ ಪರಿಹಾರ ಮಂಜೂರು ಆಗಿಲ್ಲ ಎಂದರು.
ರಾಜ್ಯ ಸರ್ಕಾರ ಈ ಮೊದಲು ಬರಗಾಲದ ವಿವರವನ್ನು ಅಧಿಕಾರಿಗಳಿಂದ ಪಡೆದುಕೊಳ್ಳದೇ ಪರಿಹಾರಧನ ಮಂಜೂರು ಮಾಡುವಂತೆ ಕೇಂದ್ರವನ್ನು ಕೇಳಿತ್ತು, ಅಲ್ಲದೆ ಸಮರ್ಪಕ ಅಧ್ಯಯನ ಮಾಡದೆ ಕೋಟಿ-ಕೋಟಿ ಪರಿಹಾರವಾಗಿ ನೀಡಬೇಕೆಂದು ಕೇಂದ್ರಕ್ಕೆ ಕೇಳಿದೆ. ಅವರಿಗೆ ಹಲವು ಬಗೆಯ ಗೊಂದಲದಿಂದ ಬರಪರಿಹಾರ ಅನುದಾನ ಬಿಡುಗಯಾಗಿಲ್ಲ ಎಂದರು. ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ಇಲಾಖೆ ಕ್ರಿಯಾಯೋಜನೆ ರೂಪಿಸಿದ್ದು, ಯಾವುದೇ ಅನುದಾನ ಬಿಡುಗೆಮಾಡಿಲ್ಲ. ಹೀಗಾಗಿ ಅಭಿವೃದ್ಧಿಪಡಿಸುವ ಕಾರ್ಯಗಳಿಗೆ ಹಿನ್ನಡೆಯಾಗಿದೆ ಎಂದು ಸರ್ಕಾರದ ಧೋರಣೆಯನ್ನು ದೂರಿದರು. ಈ ಸಂಧರ್ಭದಲ್ಲಿ ಸ್ಥಳಿಯ ಮುಖಂಡರಾದ ತಳವಾರ ಸೊಮಣ್ಣ, ಚಿದ್ರಿಸತೀಶ್, ಕೆ.ರಘುವೀರ್,ಡಾ.ಎರಿ
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ