December 14, 2024

Hampi times

Kannada News Portal from Vijayanagara

ಯುನಿಕ್ ಚಾರಿಟಬಲ್ ಟ್ರಸ್ಟ್ ನಿಂದ ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

 

https://youtu.be/NHc6OMSu0K4?si=SI_K4goOPEgwo6h2

ಯುನಿಕ್ ಚಾರಿಟಬಲ್ ಟ್ರಸ್ಟ್ ನಿಂದ   ಉಚಿತ ಆರೋಗ್ಯ ತಪಾಸಣೆ : 66 ಜನರಿಂದ ರಕ್ತದಾನ
ಹಂಪಿ ಟೈಮ್ಸ್ ಕೊಟ್ಟೂರು
ಬಹುತೇಕ ಯುವಕರು ಪ್ರಸ್ತುತ ದಿನಗಳಲ್ಲಿ ದುಶ್ಚಟಗಳಿಗೆ ದಾಸರಾಗಿ ತಾವು ಕೆಡುವುದಲ್ಲದೆ , ಸಮಾಜಕ್ಕೂ ಮಾರಕವಾಗಿ ಪರಿಣಾಮಿಸುತ್ತಿದ್ದಾರೆ. ಇಂತಹ ದಿನಮಾನಗಳಲ್ಲಿ ಸಮಾನ ಮನಸ್ಕ ಯುವಕರು “ಯುನಿಕ್ ಚಾರಿಟಬಲ್ ಟ್ರಸ್ಟ್ ” ನಿರ್ಮಿಸಿಕೊಂಡು ಸಮಾಜ ಸೇವೆಗೆ ಮುಂದಾಗಿರುವುದು ಭವಿಷ್ಯದ ಯುವ ಸಮಾಜಕ್ಕೆ  ಮಾದರಿ ಎಂದು ಡೋಣೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯ  ಸ್ವಾಮಿಗಳು ಆಶಿರ್ವಚನ ನೀಡಿದರು.
ಪಟ್ಟಣದ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಭಾನುವಾರ ಇಲ್ಲಿನ “ಯುನಿಕ್ ಚಾರಿಟಬಲ್ ಟ್ರಸ್ಟ್” ಸದಸ್ಯರು ಏರ್ಪಡಿಸಿದ್ದ ಬೃಹತ್ ರಕ್ತದಾನ ಶಿಬಿರ ಮತ್ತು ವಿವಿಧ ತಪಾಸಣೆ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘಟನೆಯ ಯುವಕರು ತಮ್ಮ ಸ್ವಂತ ದುಡಿಮೆಯಲ್ಲಿ  ಸ್ವಲ್ಪ ಹಣವನ್ನು ಕೂಡಿಟ್ಟು  ಸಮಾಜದ ಸೇವೆಗೆ ಮುಂದಾಗಿರುವುದು ಶ್ಲಾಘನೀಯ, ಸಮಾಜಕ್ಕೆ  ಬಹುಮುಖ ರೀತಿಯಲ್ಲಿ ಸೇವೆ ಇವರಿಂದ ದೊರೆಯಲಿ ಎಂದರು.
ಡಾ.ರಶ್ಮಿ ರಾಕೇಶ್ , ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮಿಗಳು ಮಾತನಾಡಿದರು. ಎಂ.ಮುಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಪಿ.ಎಂ.ಈಶ್ವರಯ್ಯ ಟ್ರಸ್ಟ್ ನಿರ್ಮಾಣ ಮತ್ತು ಧ್ಯೆಯೊದ್ದೇಶಗಳ ಬಗ್ಗೆ ತಿಳಿಸಿದರು.
ಶಿಬಿರದಲ್ಲಿ 66 ಜನ ರಕ್ತದಾನ ಮಾಡಿದರು, 100 ಜನ ಕಣ್ಣು ತಪಾಸಣೆ ಪಡೆದುಕೊಂಡರು , 250 ಬ್ಲೆಡ್ ಗ್ರೂಪ್‌ ಚೆಕ್ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಂಸಪ್ರಿಯಾ ನೃತ್ಯ ಕಲಾ ತಂಡದಿಂದ ನೃತ್ಯಗಳು ಜರುಗಿದವು. ತಹಶಿಲ್ದಾರ ಕಾರ್ತಿಕ್. ವಿ, ಕೈಲಾಸ ಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ, ಕುಷ್ಟಗಿ, ಡಾ.ಬಸವಾನಂದ, ಡಾ.ಯೋಗಿಶ್ವರಯ್ಯ, ಡಾ.ಪ್ರಶಾಂತ ಬಡ್ಡಣನವರು, ಕೊಟ್ಟೂರೇಶ್ವರ ಕಾಲೇಜ್ ಉಪನ್ಯಾಸಕರು ಕೃಷ್ಣಪ್ಪ ಇತರರು ಇದ್ದರು.

 

 

ಜಾಹೀರಾತು
error: Content is protected !!