March 15, 2025

Hampi times

Kannada News Portal from Vijayanagara

‌ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು ಶಿಕ್ಷೆ

 

https://youtu.be/NHc6OMSu0K4?si=SI_K4goOPEgwo6h2

 

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜೈಲು ಶಿಕ್ಷೆ

ಹಂಪಿ ಟೈಮ್ಸ್ ಕೊಪ್ಪಳ
ಅಪ್ರಾಪ್ತ ಶಾಲಾ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಾಲಾ ಶಿಕ್ಷಕನ ಬಗ್ಗೆ ಆರೋಪ ಸಾಬೀತಾಗಿದ್ದು, ಅಪರಾಧಿಗೆ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ [ಪೋಕ್ಸೊ] ನ್ಯಾಯಾಲಯ ದಂಡಸಹಿತ ಜೈಲು ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
ಪ್ರಕರಣದ ಅಪರಾಧಿ ನಾನು ಪಾಟೀಲ ಈತನು ಶಾಲಾ ಸಂಗೀತ ಶಿಕ್ಷಕನಾಗಿದ್ದು, ಬಾಧಿತ ವಿದ್ಯಾರ್ಥಿನಿ ಬಾಲಕಿಗೆ ತನಗೆ ಕಣ್ಣು ಕಾಣುವುದಿಲ್ಲ ತನ್ನ ಕೈ ಹಿಡಿದು ಶಾಲೆಯ ಮೇಲಿನ ಕೋಣೆಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರಿಂದ, ಬಾಲಕಿ ಕೈ ಹಿಡಿದುಕೊಂಡು ಶಾಲೆಯ ಮೇಲಿನ ಕೋಣೆಗೆ ಕರೆದುಕೊಂಡು ಹೋದಾಗ ಅವಳಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಬಾಧಿತಳ ಎದೆ, ಮೈ, ಕೈ ಮುಟ್ಟಿ ಜಗ್ಗಾಡಿದ್ದು ಮತ್ತು ಬಾಧಿತ ಬಾಲಕಿ ವಿದ್ಯಾರ್ಥಿನಿ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿ ಎಂದು ಗೊತ್ತಿದ್ದೂ ಉದ್ದೇಶ ಪೂರ್ವಕವಾಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ ಬಿ. ಕಟ್ಟಿಮನಿ ಅವರು ಆರೋಪಿತನ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಅಪರಾಧಿ ಮೇಲಿನ ಆರೋಪಣೆಗಳು ಸಾಬೀತಾಗಿರುವುದರಿಂದ ಅಪರಾಧಿ ಅಂಧ ಸಂಗೀತ ಶಿಕ್ಷಕ ನಾನು ಪಾಟೀಲ ಈತನಿಗೆ 03 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 15,000 ಗಳ ದಂಡವನ್ನು ವಿಧಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು [ಪೋಕ್ಸೊ]  ಕುಮಾರ ಡಿ.ಕೆ ಇವರು  ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ  ಪ್ರಧಾನ ಸರ್ಕಾರಿ ಅಭಿಯೋಜಕರಾದ ಬಂಡಿ ಅಪರ್ಣಾ ಮನೋಹರ ಅವರು ಪ್ರಕರಣದ ನಡೆಸಿದ್ದರು ಎಂದು ಕೊಪ್ಪಳ ಸಾರ್ವಜನಿಕ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

 

 

ಜಾಹೀರಾತು
error: Content is protected !!