December 14, 2024

Hampi times

Kannada News Portal from Vijayanagara

ಸಿಎಂ ಎದುರೇ ಧರಣೆಗೆ ನಗರಸಭೆ ಸದಸ್ಯರು ಸಿದ್ಧತೆ

 

https://youtu.be/NHc6OMSu0K4?si=SI_K4goOPEgwo6h2

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ ಹೇಳಿಕೆ | ಸದಸ್ಯರ ಕಡೆಗಣೆನೆಗೆ ಆಕ್ರೋಶ

ಹಂಪಿ ಟೈಮ್ಸ್ ಹೊಸಪೇಟೆ
ನಗರದ ಸರ್ಕಾರಿ ಕಾರ್ಯಾಕ್ರಮಗಳಿಗೆ ನಗರಸಭೆ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ಆಹ್ವಾನಿಸದೆ ಶಿಷ್ಠಚಾರ ಉಲ್ಲಂಘಿಸಲಾಗುತ್ತಿದೆ. ಸಿಎಂ ಉದ್ಘಾಟಿಸಲಿರುವ ನೂತನ ಗ್ರಂಥಾಲಯ, ಕಾಲೇಜ್ ಕಟ್ಟಡ ಉದ್ಘಾಟನಾ ಕಾರ್ಯಕ್ರಮಕ್ಕೂ ಸದಸ್ಯರಿಗೆ ಆಹ್ವಾನ ನೀಡದೆ ಅಗೌರವಿಸಲಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ ಆರೋಪಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಳಿ ನಿರ್ಮಾಣಗೊಂಡ ನೂತನ ನಗರ ಕೇಂದ್ರ ಗ್ರಂಥಾಲಯದ ಎದುರು ನಗರಸಭೆ ಸದಸ್ಯರು ಬುಧವಾರ ದಿಢೀರನೇ ಜಮಾವಣೆಗೊಂಡು ಶಾಸಕರು ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಿಡಿದರು.

ಸ್ಥಳೀಯ ನಗರಸಭೆ ಸದಸ್ಯರನ್ನು ಸಹಮತದೊಂದಿಗೆ ನೂತನ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆದುಕೊಂಡು, ಉದ್ಘಾಟನೆಗೆ ಆಹ್ವಾನಿಸದಿರುವುದು ತರವಲ್ಲ. ನಗರದ ಅಭಿವೃದ್ಧಿ ಕಾರ್ಯಗಳಲ್ಲೂ ನಗರಸಭೆ ಸದಸ್ಯರನ್ನು ಶಾಸಕರು ಹಾಗೂ ಜಿಲ್ಲಾಡಳಿತದಿಂದ ಕಡೆಗಣಿಸುತ್ತಾ ಬರಲಾಗುತ್ತಿದೆ. ನಾವುಗಳು ದಲಿತರೆಂಬ ಕಾರಣಕ್ಕೆ ಹೀಗೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ನಗರಸಭೆ ಸದಸ್ಯರನ್ನು ನಿರ್ಲಕ್ಷಿಸುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ಉದ್ಘಾಟನೆ ಸಂದರ್ಭದಲ್ಲೆ ಧರಣಿ ಕುಳಿತು ಮನವಿ ಸಲ್ಲಿಸಲಾಗುವುದು ಎಂದರು.

ಮಾಜಿ ಉಪಾಧ್ಯಕ್ಷ ಎಲ್.ಎಸ್.ಆನಂದ ಮಾತನಾಡಿ, ಜಿಲ್ಲಾಡಳಿತ, ತಾಲೂಕಡಳಿತದಿಂದ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ನಗರಸಭೆ ಸದಸ್ಯರನ್ನು ಆಹ್ವಾನಿಸದೆ ಕಡೆಗಣಿಸಲಾಗುತ್ತಿದೆ. ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಕಾರ್ಯಕ್ರಮಗಳು ನಡೆಸುತ್ತಿರುವುದು ಕಂಡು ಬರುತ್ತಿದೆ. ಶಾಸಕ ಎಚ್.ಆರ್.ಗವಿಯಪ್ಪ ನಗರಸಭೆ ಸದಸ್ಯರನ್ನು ಮಲತಾಯಿ ಮಕ್ಕಳಂತೆ ಕಾಣದೆ, ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಬೇಕು. ಶಾಸಕರು ಮತ್ತು ನಗರಸಭೆ ಸದಸ್ಯರು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ನಗರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬಹುದು. ನಗರಸಭೆ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಕಿವಿಗೊಡದಿರುವುದು ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಗುತ್ತಿದೆ ಎಂದರು. ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಜೀವರತ್ನ, ಕೆ.ಗೌಸ್, ಮಂಜುನಾಥ, ಶೆಕ್ಷಾವಲಿ, ಹುಲುಗಪ್ಪ, ರಮೇಶ ಗುಪ್ತ, ಸೇರಿದಂತೆ ನಗರಸಭೆ ಸದಸ್ಯರು, ಇತರರು ಇದ್ದರು.

 

 

ಜಾಹೀರಾತು
error: Content is protected !!