December 14, 2024

Hampi times

Kannada News Portal from Vijayanagara

ಆಕಸ್ಮಿಕ ಬೆಂಕಿ ಐದು ಆಕಳು ಸಜೀವ ದಹನ

 

https://youtu.be/NHc6OMSu0K4?si=SI_K4goOPEgwo6h2

ಹೂವಿನ ಹಡಗಲಿ:
ಪಟ್ಟಣದ ಮಾಜಿ ಡಿ.ಸಿ.ಎಂ.ಎಂ.ಪಿ.ಪ್ರಕಾಶ ರವರ ತೋಟದ ಹತ್ತಿರ ರೈತನು ಸಾಕಿದ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಐದು ಆಕಳುಗಳು ಮಂಗಳವಾರ ರಾತ್ರಿ ಸಜೀವವಾಗಿ ದಹನಾವಗಿವೆ.
ರಾತ್ರಿ ಸಮಯದಲ್ಲಿ ರೈತ ಮಲ್ಕಿ ಒಡೆಯರ್ ನಿಂಗಪ್ಪ ನವರ ಗುಡಿಸಲಿಗೆ ಇದ್ದಕ್ಕಿಂದಂತೆ ಬೆಂಕಿ ತಗುಲಿದೆ. ಬೆಂಕಿಯಿಂದ ಸಾವಿಗೀಡಾದ ಆಕಳುಗಳಿಂದ 8 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೂಡಲೇ ಅಧಿಕಾರಿಗಳು ರೈತರ ನೆವಿಗೆ ಬರಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಶಾಸಕ ಕೃಷ್ಣ ನಾಯ್ಕ ಭೇಟಿ:
ಬುಧವಾರ ಬೆಳಿಗ್ಗೆ ಶಾಸಕ ಕೃಷ್ಣ ನಾಯ್ಕರವರು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ರೈತರ ಜಾನುವಾರುಗಳಿದ್ದ ಗುಡಿಸಿಲಿಗೆ ಆಕಸ್ಮಿಕ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಆಕಳುಗಳು ದಹನವಾಗಿರುವುದನ್ನು ಕಂಡು ರೈತನಿಗೆ ಸಾಂತ್ವಾನ ಹೇಳೀ,  ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲಾಗುವುದು. ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

 

 

ಜಾಹೀರಾತು
error: Content is protected !!