https://youtu.be/NHc6OMSu0K4?si=SI_K4goOPEgwo6h2
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ ವಿಶ್ವಜೀತ್ ಮೆಹ್ತಾ.
ಹಂಪಿ ಟೈಮ್ಸ್ ಹೊಸಪೇಟೆ:
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕಳೆದ ಮೂರ್ನಾಲ್ಕು ತಿಂಗಳಿಂದ ಹಗಲಿರಳು ಎನ್ನದೆ ಗೆಲುವಿಗೆ ಯೋಜನಾಬದ್ಧವಾಗಿ ತಂತ್ರ-ಪ್ರತಿತಂತ್ರ ರೂಪಿಸುವಲ್ಲೆ ತಲ್ಲೀನರಾಗಿದ್ದರು. ಈ ಬಾರಿಯ ಚುನಾವಣೆಯು ಹಾಲಿ, ಮಾಜಿ ಜನಪ್ರತಿನಿಧಿಗಳ ಸ್ಪರ್ಧಿಸಿದ್ದರಿಂದ ತೀವ್ರ ಕುತೂಹಲದೊಂದಿಗೆ ಕಣ ರಂಗೇರಿತ್ತು. ನನ್ನದೇ ಗೆಲುವು ಎನ್ನುವವರೂ ಸೋಲುಂಡಿದ್ದಾರೆ. ಎಲ್ಲೂ ಗೆಲುವು ನನ್ನದೆ ಎಂದು ಹೇಳಿಕೊಳ್ಳದ ಕೆಲವರು ಜಯಭೇರಿ ಬಾರಿಸಿದ್ದಾರೆ. ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ , ಮಾಜಿ ಸಚಿವ ಆನಂದಸಿಂಗ್ ಅಳಿಯ ಸಂದೀಪ್ ಸಿಂಗ್ ಸಹಕಾರಿ ಕ್ಷೇತ್ರದಲ್ಲಿ ಮೊದಲಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.
ಬಳ್ಳಾರಿ ಡಿಸಿಸಿ ಬ್ಯಾಂಕಿನ 14 ನಿರ್ದೇಶಕರ ಸ್ಥಾನಗಳ ಪೈಕಿ ಕೂಡ್ಲಿಗಿ ಮತ್ತು ಸಂಡೂರು ಕ್ಷೇತ್ರಗಳೆರಡರ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಸ್ಥಾನಗಳ ನಡೆದ ಚುನಾವಣೆಯಲ್ಲಿ ಸಿರುಗುಪ್ಪ ಕ್ಷೇತ್ರದ ಫಲಿತಾಂಶ ಹೊರತುಪಡಿಸಿ ಪೈಕಿ 11 ನಿರ್ದೇಶಕರು ಆಯ್ಕೆಯಾಗಿದ್ದು ಒಟ್ಟು 13 ನಿರ್ದೇಶಕರ ಆಯ್ಕೆ ಪಟ್ಟಿ ಪ್ರಕಟಗೊಂಡಿದೆ.
ಯಾವ ಕ್ಷೇತ್ರದಿಂದ ಯಾರ ಗೆಲುವು:
ಕೂಡ್ಲಿಗಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ತಿಪ್ಪೇಸ್ವಾಮಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ಸಂಡೂರು ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕರಾಗಿ ಜೆ.ಎಂ.ಶಿವಪ್ರಸಾದ ಅವಿರೋಧ ಆಯ್ಕೆಯಾಗಿದ್ದಾರೆ.
ಹೊಸಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘಗಳ ಕ್ಷೇತ್ರದಿಂದ ಅನಿಲ್ ಜೋಷಿ ವಿರುದ್ದ ಎಲ್.ಎಸ್. ಆನಂದ ಗೆಲುವು ಸಾಧಿಸಿದ್ದಾರೆ.
ಕಂಪ್ಲಿ ಪ್ರಾ.ಕೃ.ಪ.ಸ.ಸಂಘಗಳ ಕ್ಷೇತ್ರದಿಂದ ಪಿ.ಮೂಕಯ್ಯಸ್ವಾಮಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಚಂದ್ರಶೇಖರ ಟಿ. ವಿರುದ್ಧ ಮಾಜಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಗೆಲುವು ಸಾಧಿಸಿದ್ದಾರೆ.
ಹಡಗಲಿ ಕ್ಷೇತ್ರದಿಂದ ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ವಿರುದ್ಧ ಚಿದಾನಂದಪ್ಪ ಐಗೋಳ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
ಕೊಟ್ಟೂರು ಕ್ಷೇತ್ರದಿಂದ ಕೆ.ಭರಮರೆಡ್ಡಿ ವಿರುದ್ಧ ಐ.ದಾರುಕೇಶ ಗೆಲುವು ಸಾಧಿಸಿದ್ದಾರೆ.
ಹರಪನಹಳ್ಳಿ ಕ್ಷೇತ್ರದಿಂದ ಬಿ.ಕೆ.ಪ್ರಕಾಶ ವಿರುದ್ದ ಸಂಸದ ವೈ ದೇವೇಂದ್ರಪ್ಪನವರ ಸುಪುತ್ರ ವೈ.ಅಣ್ಣಪ್ಪ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ ಕ್ಷೇತ್ರದಿಂದ ಡಿ.ಭೋಗಾರೆಡ್ಡಿ ವಿರುದ್ಧ ಬಿ.ನವೀನ್ ಕುಮಾರ್ ರೆಡ್ಡಿ ಗೆಲುವು ತನ್ನದಾಗಿಸಿಕೊಂಡಿದ್ದಾರೆ.
ಕುರುಗೋಡು ಕ್ಷೇತ್ರದಿಂದ ಎನ್.ಮಂಜುನಾಥ ವಿರುದ್ದ ಹುಲುಗಪ್ಪ ನಾಯಕರ ಗೆಲುವಿನ ನಗೆ ಬೀರಿದ್ದಾರೆ.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಹಗರಿಬೊಮ್ಮನಹಳ್ಳಿಯ ಬಾದಾಮಿ ಮೃತ್ಯುಂಜಯ ವಿರುದ್ಧ ಹೊಸಪೇಟೆಯ ಮಾಜಿ ಸಚಿವ ಆನಂದಸಿಂಗ್ ಸಂಬಂಧಿ ವಿ.ಆರ್.ಸಂದೀಪ್ ಸಿಂಗ್ ರೋಚಕ ಗೆಲುವು ಸಾಧಿಸಿದ್ದಾರೆ.
ಪತ್ತಿನ ಮತ್ತು ಅರ್ಬನ್ ಬ್ಯಾಂಕ್‌ಗಳ ಕ್ಷೇತ್ರದಿಂದ ಕೋಳೂರು ಮಲ್ಲಿಕಾರ್ಜುನಗೌಡ, ಪ್ರಿಯಾಂಕ ಜೈನ್, ಜೆ.ಮಂಜುನಾಥ ವಿರುದ್ಧ ಪಿ.ವಿಶ್ವನಾಥ ಗೆಲುವಿನ ನಗೆ ಬೀರಿದ್ದಾರೆ.
ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಕವಿತಾ, ಬಿ.ಗಂಗಾಧರ ವಿರುದ್ಧ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಜಯಭೇರಿ ಬಾರಿಸಿದ್ದಾರೆ.
ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯ 14 ನಿರ್ದೇಶಕರ ಸ್ಥಾನಗಳ ಪೈಕಿ ಕೂಡ್ಲಿಗಿ ಮತ್ತು ಸಂಡೂರು ಕ್ಷೇತ್ರದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಕ್ಷೇತ್ರಗಳಿಗೆ ಭಾನುವಾರ ಚುನಾವಣೆ ನಡೆದಿದ್ದು, ಸಿರುಗುಪ್ಪ ಕ್ಷೇತ್ರ ಹೊರತುಪಡಿಸಿ ಚುನಾವಣೆಯಲ್ಲಿ ಚುನಾಯಿತ ನಿರ್ದೇಶಕರ ಫಲಿತಾಂಶ ಘೋಷಿಸಲಾಗಿದೆ. ಹೈಕೋರ್ಟ್ ನ ಅಂತಿಮ ತೀರ್ಪು ಪರಿಗಣಿಸಿ ಸಿರುಗಪ್ಪ ಕ್ಷೇತ್ರದ ಫಲಿತಾಂಶ ಘೋಷಿಸಲಾಗುವುದು.
| ವಿಶ್ವಜೀತ್ ಮೆಹ್ತಾ.
ಚುನಾವಣಾಧಿಕಾರಿ, ಬಿಡಿಸಿಸಿ ಬ್ಯಾಂಕ್,ಹೊಸಪೇಟೆ.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ