December 5, 2024

Hampi times

Kannada News Portal from Vijayanagara

ಜಾನಪದ ಕಲಾವಿದರ ಕೈಪಿಡಿಗೆ ಮಾಹಿತಿ ಸಂಗ್ರಹ : ಕೆ.ಸಿ.ಪರಶುರಾಜ ಅಂಗೂರು

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೂವಿನಹಡಗಲಿ:

ಕರ್ನಾಟಕ ಜಾನಪದ ಪರಿಷತ್ ವಿಜಯನಗರ ಜಿಲ್ಲಾ ಘಟಕದಿಂದ ಕಲಾವಿದರ ಮಾಹಿತಿ ಕೈಪಿಡಿ ಪ್ರಕಟಿಸಲು ನಿರ್ಧರಿಸಿದ್ದು, ಜಿಲ್ಲೆಯ ಕಲಾವಿದರು ಮಾಹಿತಿ ಕಳಿಸಿಕೊಡಬೇಕು ಎಂದು ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮನವಿ ಮಾಡಿದ್ದಾರೆ.
ಪರಿಷತ್ತಿನ ರಾಜ್ಯ ಘಟಕ ನೇತೃತ್ವದಲ್ಲಿ ಕಲಾವಿದರ ಕಿರು ಹೊತ್ತಿಗೆ ಹೊರತರಲಾಗುತ್ತಿದೆ. ಕಲಾವಿದರ ಮಾಹಿತಿಯನ್ನು ಪರಿಷತ್ತಿನ ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗುತ್ತದೆ. ಜಿಲ್ಲೆಯ ಕಲಾವಿದರ ಸ್ವವಿವರ, ಭಾವಚಿತ್ರ ಕಲಾ ಸೇವೆಯ ಮಾಹಿತಿ ಹಾಗೂ ಪಡೆದಿರುವ ಪ್ರಶಸ್ತಿ ಪುರಸ್ಕಾರಗಳ ಮಾಹಿತಿಯನ್ನು ಇ-ಮೇಲ್ info@janapadaloka.in ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.9945648950 ಸಂಪರ್ಕಿಸಲು ಕೊರಲಾಗಿದೆ.

 

 

ಜಾಹೀರಾತು
error: Content is protected !!