December 14, 2024

Hampi times

Kannada News Portal from Vijayanagara

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣಾ ಕಣದಲ್ಲಿ ಹಾಲಿ, ಮಾಜಿ ಶಾಸಕರು, 2 ಅವಿರೋಧ, 12 ಸ್ಥಾನಕ್ಕೆ ಸ್ಪರ್ದೇ

 

https://youtu.be/NHc6OMSu0K4?si=SI_K4goOPEgwo6h2

ಕೂಡ್ಲಿಗಿ, ಸಂಡೂರು ಅವಿರೋಧ ಆಯ್ಕೆ, ಬಿಡಿಸಿಸಿ ನಿರ್ದೇಶಕರ  12 ಸ್ಥಾನಕ್ಕೆ ಚುನಾವಣೆ

ಹಂಪಿ ಟೈಮ್ಸ್ ಹೊಸಪೇಟೆ:
ಬಳ್ಳಾರಿ ಡಿಸಿಸಿ ಬ್ಯಾಂಕಿನ 14 ನಿರ್ದೇಶಕರ ಸ್ಥಾನಗಳ ಪೈಕಿ ಕೂಡ್ಲಿಗಿ ಮತ್ತು ಸಂಡೂರು ಕ್ಷೇತ್ರಗಳೆರಡರಲ್ಲಿ ಪ್ರತಿಸ್ಪರ್ಧಿಗಳು ಇಲ್ಲದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 12 ಸ್ಥಾನಗಳಿಗೆ 28 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರು ಸ್ಪರ್ಧೆಗಿಳಿದಿರುವುದು ಮತ್ತು ಆರು ಮಾಜಿ ನಿರ್ದೇಶಕರು ಕಣದಲ್ಲಿರುವುದರಿಂದ ಈ ಬಾರಿಯ ಚುನಾವಣಾ ಕಣ ರಂಗೇರಲಿದ್ದು, ಸಾರ್ವಜನಿಕ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.

ಯಾವ ಕ್ಷೇತ್ರದಿಂದ ಯಾರ ನಡುವೆ ಸ್ಪರ್ಧೆ?
ಕೂಡ್ಲಿಗಿ ಮತ್ತು ಸಂಡೂರು ಕ್ಷೇತ್ರಗಳ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಘೋಷಣೆಯಾಗಬೇಕಿದೆ.

ಹೊಸಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘಗಳ ಕ್ಷೇತ್ರದಿಂದ ಅನಿಲ್ ಜೋಷಿ ಮತ್ತು ಎಲ್.ಎಸ್. ಆನಂದ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಕಂಪ್ಲಿ ಪ್ರಾ.ಕೃ.ಪ.ಸ.ಸಂಘಗಳ ಕ್ಷೇತ್ರದಿಂದ ಗುಬಾಜಿ ಪಂಪಾಪತಿ, ಎಸ್.ಮಾರೇಶ, ಪಿ.ಮೂಕಯ್ಯಸ್ವಾಮಿ ಸ್ಪರ್ಧಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಚಂದ್ರಶೇಖರ ಟಿ. ಮತ್ತು ಮಾಜಿ ಶಾಸಕ ಎಲ್.ಬಿ.ಪಿ.ಭೀಮಾನಾಯ್ಕ ಸ್ಪರ್ಧೆಗಿಳಿದಿದ್ದಾರೆ.

ಹಡಗಲಿ ಕ್ಷೇತ್ರದಿಂದ ಚಿದಾನಂದಪ್ಪ ಐಗೋಳ ಮತ್ತು ಮಾಜಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ್ ಕಣದಲ್ಲಿದ್ದಾರೆ.

ಕೊಟ್ಟೂರು ಕ್ಷೇತ್ರದಿಂದ ಐ.ದಾರುಕೇಶ ಮತ್ತು ಕೆ.ಭರಮರೆಡ್ಡಿ ಸ್ಪರ್ಧಿಸಿದ್ದಾರೆ.

ಹರಪನಹಳ್ಳಿ ಕ್ಷೇತ್ರದಿಂದ ವೈ.ಅಣ್ಣಪ್ಪ ಮತ್ತು ಬಿ.ಕೆ.ಪ್ರಕಾಶ, ಬಳ್ಳಾರಿ ಕ್ಷೇತ್ರದಿಂದ ಬಿ.ನವೀನ್ ಕುಮಾರ್ ರೆಡ್ಡಿ ಮತ್ತು ಡಿ.ಭೋಗಾರೆಡ್ಡಿ,

ಕುರುಗೋಡು ಕ್ಷೇತ್ರದಿಂದ ಎನ್.ಮಂಜುನಾಥ ಮತ್ತು ಹುಲುಗಪ್ಪ ನಾಯಕರ,

ಸಿರುಗುಪ್ಪ ಕ್ಷೇತ್ರದಿಂದ ಚೊಕ್ಕ ಬಸವನಗೌಡ ಮತ್ತು ಟಿ.ಎಂ.ಚಂದ್ರಶೇಖರಯ್ಯ ಸ್ಪರ್ಧಿಸಿದ್ದಾರೆ.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಹಗರಿಬೊಮ್ಮನಹಳ್ಳಿಯ ಬಾದಾಮಿ ಮೃತ್ಯುಂಜಯ ಮತ್ತು ಹೊಸಪೇಟೆಯ ಮಾಜಿ ಸಚಿವ ಆನಂದಸಿಂಗ್ ಸಂಬಂಧಿ ವಿ.ಆರ್.ಸಂದೀಪ್ ಸಿಂಗ್ ಸ್ಪರ್ಧೆಗಿಳಿದಿದ್ದು ಈ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ.

ಪತ್ತಿನ ಮತ್ತು ಅರ್ಬನ್ ಬ್ಯಾಂಕ್‌ಗಳ ಕ್ಷೇತ್ರದಿಂದ ಕೋಳೂರು ಮಲ್ಲಿಕಾರ್ಜುನಗೌಡ, ಪ್ರಿಯಾಂಕ ಜೈನ್, ಜೆ.ಮಂಜುನಾಥ ಮತ್ತು ಪಿ.ವಿಶ್ವನಾಥ ಕಣದಲ್ಲಿದ್ದಾರೆ.

ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಪಿ.ಕವಿತಾ, ಬಿ.ಗಂಗಾಧರ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಸ್ಪರ್ಧಿಸಿದ್ದಾರೆ.

ಬಿ.ಡಿ.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿಯ ಇನ್ನುಳಿದ   12 ನಿರ್ದೇಶಕರ ಸ್ಥಾನಕ್ಕೆ ಅ.15 ರಂದು ಚುನಾವಣೆ ನಡೆಯಲಿದೆ. ಕೂಡ್ಲಿಗಿ ಕ್ಷೇತ್ರದಿಂದ ಕೇವಲ ಒಬ್ಬರು ನಾಮಪತ್ರ ಸಲ್ಲಿಸಿದ್ದರು. ಸಂಡೂರು ಕ್ಷೇತ್ರದಿಂದ ಇಬ್ಬರ ಪೈಕಿ ಒಬ್ಬರು ನಾಮಪತ್ರ  ಹಿಂಪಡೆದಿದ್ದರಿಂದ ಎರಡು ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
| ವಿಶ್ವಜೀತ್ ಮೆಹ್ತಾ.
ಚುನಾವಣಾಧಿಕಾರಿ, ಬಿಡಿಸಿಸಿ ಬ್ಯಾಂಕ್,ಹೊಸಪೇಟೆ.

 

 

 

ಜಾಹೀರಾತು
error: Content is protected !!